ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ಕಾಮಗಾರಿ: ರೈಲುಗಳ ಮಾರ್ಗ ಬದಲು

Last Updated 20 ಜನವರಿ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿಗಳ ನಿರ್ವಹಿಸುವ ಸಲುವಾಗಿ ನಾಲ್ಕು ರೈಲುಗಳ ಸಂಚಾರವನ್ನು ಕೆಲ ದಿನಗಳ ಕಾಲ ಭಾಗಶಃ ರದ್ದುಪಡಿಸಲಾಗಿದ್ದು, ನಾಲ್ಕು ರೈಲುಗಳನ್ನು ಮಾರ್ಗ ಬದಲಿಸಿ ಸಂಚರಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಕೆಎಸ್‌ಆರ್–ಬೆಂಗಳೂರು ಎಕ್ಸ್‌ಪ್ರೆಸ್‌(ಗಾಡಿ ಸಂಖ್ಯೆ 06202) ರೈಲು ಸಂಚಾರವನ್ನು ಜ. 24ರಿಂದ 27ರವರೆಗೆ ಸ್ಥಗಿತಗೊಳಿಸಲಾಗಿದೆ.

ಯಶವಂತಪುರ–ಅರಸೀಕೆರೆ ಡೆಮು ವಿಶೇಷ ರೈಲು(ಗಾಡಿ ಸಂಖ್ಯೆ 06275) ಸಂಚಾರವನ್ನು ಜ.25, 26, 27 ಮತ್ತು 29ರಂದು ಭಾಗಶಃ ಸ್ಥಗಿತಗೊಳಿಸಿಲಾಗಿದೆ. ಆದರೆ, ಈ ರೈಲು ತುಮಕೂರು ಮತ್ತು ಯಶವಂತಪುರ ನಡುವೆ ಸಂಚರಿಸಲಿದೆ.

ಧಾರವಾಡ–ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು (02726) ಜ.24ರಿಂದ 27ರವರೆಗೆ ಧಾರವಾಡದಿಂದ ಅರಸೀಕೆರೆ ತನಕ ಮಾತ್ರ ಸಂಚರಿಸಲಿದೆ. ಅರಸೀಕೆರೆ–ಯಶವಂತಪುರ ಡೆಮು ರೈಲು (06276) ಜ.25ರಿಂದ 29ರವರೆಗೆ ತುಮಕೂರು ತನಕ ಹೋಗಿ ವಾಪಸ್ ಬರಲಿದೆ.

ಗೋವಾ–ಯಶವಂತಪುರ ಎಕ್ಸ್‌ಪ್ರೆಸ್ ರೈಲು(07340) ಜ.28ರಂದು ಅರಸೀಕೆರೆ ತನಕ ಸಂಚರಿಸಿ 29ರಂದು ವಾಪಸ್ ಗೋವಾ ಕಡೆಗೆ ಪ್ರಯಾಣ ಬೆಳಸಲಿದೆ.

ಯಶವಂತಪುರ–ಬಿಕನೇರ್(ರಾಜಸ್ಥಾನ) ಎಕ್ಸ್‌ಪ್ರೆಸ್‌(06587), ಯಶವಂತಪುರ–ಬಾರ್ಮರ್ (ರಾಜಸ್ಥಾನ) ಎಕ್ಸ್‌ಪ್ರೆಸ್‌ (04805), ಯಶವಂತಪುರ– ಹಜರತ್ ನಿಜಾಮುದ್ದೀನ್ ವಿಶೇಷ ಎಕ್ಸ್‌ಪ್ರೆಸ್ ರೈಲು (06249), ಮೈಸೂರು– ವಾರಾಣಸಿ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು(06229) ಯಶವಂತಪುರ, ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT