ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪದ ಜಾಹೀರಾತಿನಲ್ಲಿ 'ಸನಾತನ ಪ್ರಗತಿಪರ' ಪದ ಬಳಕೆಗೆ ಆಕ್ಷೇಪ

ಸರ್ಕಾರ ಕೂಡಲೇ ಕ್ಷಮೆಯಾಚಿಸಿ ಸ್ಪಷ್ಟೀಕರಣ ನೀಡಬೇಕು: ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ
Last Updated 8 ಜನವರಿ 2021, 13:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಶಂಕು ಸ್ಥಾಪನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ನೀಡಿದ್ದ ಜಾಹಿರಾತಿನಲ್ಲಿ ಅನುಭವ ಮಂಟಪ ಸನಾತನ ಪ್ರಗತಿಪರ ಚಿಂತನೆಗಳ ಮರುಸೃಷ್ಟಿ ಎಂದು ಹೇಳಲಾಗಿದೆ. ಇದೊಂದು ದೊಡ್ಡ ಪ್ರಮಾದ. ಸರ್ಕಾರ ಕೂಡಲೇ ಕ್ಷಮೆಯಾಚಿಸಿ ಸ್ಪಷ್ಟೀಕರಣ ನೀಡಬೇಕು’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಒತ್ತಾಯಿಸಿದರು.

ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ
ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳಿಗೆ, ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲ ಎಂದು ಸನಾತನ ಧರ್ಮ ಹೇಳುತ್ತದೆ. ಅನುಭವ ಮಂಟಪ ಎಲ್ಲರಿಗೂ ಧರ್ಮ ಸಂಸ್ಕಾರ ಕೊಟ್ಟು ಸಮಾನತೆ ಬೋಧಿಸಿದೆ. ಹೀಗಿರುವಾಗ ಅನುಭವ ಮಂಟಪದ ಮೂಲ ಆಶಯಕ್ಕೆ ವಿರುದ್ಧವಾದ ಪದವನ್ನು ನಮ್ಮ ಮೇಲೆ ಹೊರಟಿರುವುದು ದೊಡ್ಡ ದುರಂತ’ ಎಂದು ಸ್ವಾಮೀಜಿ ಕಿಡಿಕಾರಿದರು.

‘ಬೇರೆ ಕಡೆ ಎಷ್ಟೇ ಅನುಭವ ಮಂಟಪ ನಿರ್ಮಿಸಿದರೂ ಶರಣರು ಸ್ಥಾಪಿಸಿದ್ದ ಮೂಲ ಅನುಭವ ಮಂಟಪ ಎಲ್ಲಿದೆ ಎಂಬುದು ಕೋಟ್ಯಂತರ ಬಸವಭಕ್ತರಿಗೆ ಪ್ರಶ್ನೆಯಾಗಿಯೆ ಉಳಿಯುತ್ತದೆ. ಆದ್ದರಿಂದ ಸರ್ಕಾರ ಅನುಭವ ಮಂಟಪದ ಮೂಲಸ್ಥಳವನ್ನು ಪತ್ತೆ ಹಚ್ಚಿ ಅಲ್ಲಿಯೇ ಸ್ಮಾರಕ ನಿರ್ಮಿಸಬೇಕು’ ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಆರ್.ಜಿ.ಶೆಟಗಾರ, ಆರ್.ಕೆ.ಹೆಗ್ಗಣಿ, ರವೀಂದ್ರ ಶಾಬಾದಿ, ಜಗನ್ನಾಥ ಪಣಸಾಲಿ, ನಾಗರಾಜ ನಿಂಬರ್ಗಿ, ಬಿ.ಎಂ.ಏರಿ, ವಿ.ಕಲ್ಯಾಣಕುಮಾರ, ವೀರಣ್ಣ ಲೊಡ್ಡನ, ಸಿದ್ಧರಾಮಪ್ಪ, ಸತೀಶ ಸಜ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT