ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ ಗರಿ

ಸನ್ನಿಧಿ ಹೆಗಡೆ ರಾಜ್ಯಕ್ಕೆ ಪ್ರಥಮ
Last Updated 10 ಆಗಸ್ಟ್ 2020, 13:07 IST
ಅಕ್ಷರ ಗಾತ್ರ

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

‘ಕೊರೊನಾ ಸಂದರ್ಭವೆಂದು ಓದುವುದನ್ನು ಬಿಟ್ಟಿರಲಿಲ್ಲ. ಓದಿದ ವಿಷಯ ಮರೆಯಬಾರದೆಂದು ಶಾಲೆಯಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿ, ಉತ್ತರ ಬರೆದು ಹಾಕುವಂತೆ ತಿಳಿಸುತ್ತಿದ್ದರು. ಗೂಗಲ್ ಮೀಟ್ ಮೂಲಕ ಗಣಿತ, ವಿಜ್ಞಾನ ವಿಷಯಗಳ ಪುನರ್ ಮನನ ಮಾಡುತ್ತಿದ್ದರು. ಇದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಯಿತು’ ಎನ್ನುತ್ತಾಳೆ ಸನ್ನಿಧಿ.

‘ಪ್ರಥಮ ಸ್ಥಾನ ಬರುವ ನಿರೀಕ್ಷೆಯಿತ್ತು. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಶಾಲೆಯಲ್ಲಿ ಕಲಿಸಿದ ಪಾಠವನ್ನು ಸರಿಯಾಗಿ ಕೇಳುತ್ತಿದ್ದೆ. ಅವುಗಳ ಪುನರ್‌ ಮನನ ಮಾಡಿದ್ದೆ. ಓದುವ ಮನಸ್ಸು ಬಂದಾಗ ಶ್ರದ್ಧೆಯಿಂದ ಓದುತ್ತಿದ್ದೆ. ಮನೆಯವರು ಎಲ್ಲ ಸಹಕಾರ ನೀಡಿದ್ದರು’ ಎಂದು ಖುಷಿಯಿಂದ ಹೇಳಿದಳು.

ಈಕೆ ಇಲ್ಲಿನ ಪ್ರಗತಿನಗರದ ವೀಣಾ ಮತ್ತು ಡಾ.ಮಹಾಬಲೇಶ್ವರ ಹೆಗಡೆ ದಂಪತಿ ಪುತ್ರಿ. ‘ಮಗಳ ಸಾಧನೆ ತಿಳಿದು ಎಲ್ಲಿಲ್ಲದ ಖುಷಿಯಾಗಿದೆ. ಆಕೆಯ ಪ್ರಯತ್ನಕ್ಕೆ ತ‌ಕ್ಕ ಪ್ರತಿಫಲ ದೊರೆತಿದೆ. ಆಕೆಯ ಸಾಧನೆಯ ಹಿಂದೆ ಶಿಕ್ಷಕರು, ಸಹಪಾಠಿಗಳ ಸಹಕಾರವೂ ಇದೆ’ ಎಂದು ಮಹಾಬಲೇಶ್ವರ ಹೆಗಡೆ ಹೇಳಿದರು. ಅವರ ಪ್ರಥಮ ಪುತ್ರಿ ಸನ್ಮಯಿ ಹೆಗಡೆ, ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT