ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ

Last Updated 21 ಜುಲೈ 2022, 18:52 IST
ಅಕ್ಷರ ಗಾತ್ರ

ನವದೆಹಲಿ:ರೈಲ್ವೆ ಇಲಾಖೆ ಸದ್ಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಮರುಜಾರಿಗೊಳಿಸಲು ಆಗದು ಎಂದು ಇಲಾಖೆಯು ತಿಳಿಸಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಈ ಕುರಿತು ಲೋಕಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ.

ವಿವಿಧ ದರ್ಜೆಗಳಲ್ಲಿನ ಪ್ರಯಾಣದರಗಳು ಈಗಾಗಲೇ ಕಡಿಮೆ ಇದೆ. ವಿವಿಧ ವರ್ಗಗಳಿಗೆ ನೀಡುತ್ತಿದ್ದ ರಿಯಾಯಿತಿ ಮತ್ತು ಕಡಿಮೆ ಪ್ರಯಾಣ ದರ ಕಾರಣದಿಂದ ಇಲಾಖೆಯು ಈಗಾಗಲೇ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ ಎಂದು ತಿಳಿಸಿದ್ದಾರೆ.

2019–20ಕ್ಕೆ ಹೋಲಿಸಿದಲ್ಲಿ ಕೋವಿಡ್‌ ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷ ಟಿಕೆಟ್‌ ಮೂಲದ ಆದಾಯ ಕಡಿಮೆಯಾಗಿದೆ. ಇಲಾಖೆಯ ಆರ್ಥಿಕ ಸ್ಥಿತಿಯ ಮೇಲೆಇದರ ಪರಿಣಾಮ ದೀರ್ಘಕಾಲಿಕವಾಗಿರಲಿದೆ. ರಿಯಾಯಿತಿ ನೀಡುವುದರಿಂದ ಹೆಚ್ಚಿನ ಹೊರೆ ಆಗಲಿದೆ. ಹೀಗಾಗಿ, ಹಿರಿಯ ನಾಗರಿಕರಿಗೆ ಸೇರಿ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡುವ ಚಿಂತನೆ ಈಗ ಇಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT