ಗುರುವಾರ , ಸೆಪ್ಟೆಂಬರ್ 16, 2021
24 °C

ಪಾಲು ಕೇಳುವವರಿಗೆ ಸಚಿವ ಸ್ಥಾನ ಬೇಡ: ಶಂಕರ ಬಿದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯೋಜನಾ ವೆಚ್ಚದ ಶೇಕಡ 45ರಿಂದ 50ರಷ್ಟು ಲಂಚ ಕೇಳುವವರು ಮತ್ತು ಯೋಜನೆಗಳಲ್ಲಿ ಪಾಲುದಾರರನ್ನಾಗಿ ಮಾಡುವಂತೆ ಬೇಡಿಕೆ ಇಡುವವರಿಗೆ ರಾಜ್ಯದ ಹೊಸ ಸಂಪುಟ ರಚನೆ ವೇಳೆ ಸ್ಥಾನ ನೀಡಬಾರದು ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್ಎಸ್‌ ಮುಖಂಡರನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ‘ಏನೋ ಒಂದು ಒಳ್ಳೆಯದಾಗಿದೆ. ಇನ್ನು ನಿಮ್ಮದೇ ಮೂಲಗಳಿಂದ ಮಾಹಿತಿ ಪಡೆದು ಪರಿಶೀಲಿಸಿ. ಯೋಜನಾ ವೆಚ್ಚದಲ್ಲಿ ಶೇ 45ರಿಂದ 50ರಷ್ಟು ಕೇಳುವವರು ಮತ್ತು ಅದೇ ಯೋಜನೆಗಳಲ್ಲಿ ತಮ್ಮನ್ನೂ ಪಾಲುದಾರರನ್ನಾಗಿ ಮಾಡುವಂತೆ ಬೇಡಿಕೆ ಇಡುವವರನ್ನು ಸಂಪುಟಕ್ಕೆ ಸೇರಿಸಬೇಡಿ. ಅದು ನೀವು ಕರ್ನಾಟಕದ ಒಳಿತಿಗಾಗಿ ಮಾಡುವ ಕೆಲಸವಾಗುತ್ತದೆ’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.