ಮಂಗಳವಾರ, ಮೇ 24, 2022
27 °C

ಅಂತರರಾಷ್ಟ್ರೀಯ ಗ್ರಂಥಾಲಯಗಳಿಗೆ ‘ಮಹಾಪುರಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿರುವ ‘ಮಹಾಪುರಾಣ’ ಗ್ರಂಥವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹಕಾರದೊಂದಿಗೆ ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್‌ ವಿದೇಶದ 100 ಪ್ರಮುಖ ಅಂತರರಾಷ್ಟ್ರೀಯ ಗ್ರಂಥಾಲಯಗಳಿಗೆ ಪೂರೈಸುತ್ತಿದೆ.

ಟ್ರಸ್ಟ್‌ ಹೊರತಂದ ಈ ಗ್ರಂಥವನ್ನು 2020ರ ಮಾ.3ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಿಡುಗಡೆ ಮಾಡಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ವೀರೇಂದ್ರ ಹೆಗ್ಗಡೆ ಅವರು, ‘ಧರ್ಮದ ಸಾರವನ್ನು ಒಳಗೊಂಡಿರುವ ಈ ಗ್ರಂಥವು ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳನ್ನು ತಲುಪಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದರು. ಅದರಂತೆ ಈ ಗ್ರಂಥವನ್ನು ವಿದೇಶಗಳ ಗ್ರಂಥಾಲಯಗಳಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದ್ದೇವೆ. ಈ ಗ್ರಂಥವು 6 ಸಂಪುಟಗಳಲ್ಲಿ ಹೊರಬಂದಿದ್ದು, ಪ್ರತಿ ಸಂಪುಟ ತಲಾ 750 ಪುಟಗಳನ್ನು ಒಳಗೊಂಡಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.

‘ಪ್ರತಿ ಸಂಪುಟಕ್ಕೆ ₹ 9 ಸಾವಿರ ದರವಿದೆ. 100 ಗ್ರಂಥಾಲಯಗಳಿಗೆ ಪೂರೈಸಲು ಒಟ್ಟು ₹ 16 ಲಕ್ಷ ವೆಚ್ಚವಾಗಲಿದೆ. ಮೊದಲ ಸೆಟ್‌ ಅನ್ನು ಬ್ರಿಟನ್‌ನ ಬ್ರಿಟಿಷ್ ಗ್ರಂಥಾಲಯಕ್ಕೆ ಕಳುಹಿಸಲಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಎಲ್ಲ ಗ್ರಂಥಾಲಯಗಳನ್ನು ತಲುಪಲಿವೆ’ ಎಂದು ವಿವರಿಸಿದ್ದಾರೆ.

‘9ನೇ ಶತಮಾನದಲ್ಲಿ ಭಗವದ್ ಜೀನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ ‘ಮಹಾಪುರಾಣ’ ಒಂದು ಮೇರು ಕೃತಿಯಾಗಿದ್ದು, 20 ಸಾವಿರ ಸಂಸ್ಕೃತ ಶ್ಲೋಕಗಳನ್ನು ಒಳಗೊಂಡಿದೆ. ಈ ಗ್ರಂಥವನ್ನು 1940ರಲ್ಲಿ ಮೈಸೂರಿನ ಎರ್ತೂರು ಶಾಂತಿರಾಜಶಾಸ್ತ್ರಿ ಕನ್ನಡಕ್ಕೆ ತಂದರು. ಇದು ಈಗಾಗಲೇ ನಾಲ್ಕು ಬಾರಿ ಮರು ಮುದ್ರಣ ಕಂಡಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು