ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ: ಗದ್ದುಗೆ ದರ್ಶನಕ್ಕೆ ಭಕ್ತ ಸಾಗರ

ತುಮಕೂರು: ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ಗದ್ದುಗೆ ದರ್ಶನಕ್ಕೆ ಸಹಸ್ರಾರು ಭಕ್ತರು ಬಂದಿದ್ದರು. ಬೆಳಗಿನ ಜಾವ ಗದ್ದುಗೆಯಲ್ಲಿ ರುದ್ರಾಭಿಷೇಕ ನೆರವೇರಿತು. ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾಡಿನಹಲವು ಮಠಾಧೀಶರು ಗದ್ದುಗೆ ಮತ್ತು ಸ್ವಾಮೀಜಿ ಬೆಳ್ಳಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ನಿಗದಿತ ಅವಧಿಗಿಂತ 30 ನಿಮಿಷ ಬೇಗ ಮಠಕ್ಕೆ ಬೇಗ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನೇರವಾಗಿ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದ ನಂತರ ವೇದಿಕೆಗೆ ಬಂದರು. ಮಠದ ಅಂಗಳಕ್ಕೆ ಬಂದ ಗಣ್ಯರೆಲ್ಲರೂ ನೇರವಾಗಿ ಗದ್ದುಗೆ ದರ್ಶನಕ್ಕೆ ತೆರಳುತ್ತಿದ್ದರು. ಸಂಜೆಯವರೆಗೂ ಭಕ್ತರು ಸಾಲುಗಟ್ಟಿದ್ದರು.
ಅಂತರಂಗದ ಶಿಷ್ಯ: ‘ಯಡಿಯೂರಪ್ಪ ಅವರು ನಮ್ಮ ಪೂಜ್ಯ ಗುರುಗಳ ಅಂತರಂಗದ ಶಿಷ್ಯ. ಯಡಿಯೂರಪ್ಪ ಮುಖ ನೋಡಿದರೆ ಶಿವಕುಮಾರ ಸ್ವಾಮೀಜಿಗೆ ಖುಷಿ ಆಗುತ್ತಿತ್ತು’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನುಡಿದರು. ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರೈತ ಪರ ಚಿಂತನೆಯನ್ನು ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ. ಅವರಿಗೆ ಪೂಜ್ಯರ ಆಶೀರ್ವಾದ ಇರಲಿ. ವೀರಾಪುರದ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಪ್ರತಾಪ್‌ಚಂದ್ರ ಸಾರಂಗಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಸಚಿವರು, ಮಠಾಧೀಶರು ಸ್ವಾಮೀಜಿಯನ್ನು ಸ್ಮರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.