ಗುರುವಾರ , ಜೂನ್ 30, 2022
27 °C

ಗೋಮಾಂಸ ಭಕ್ಷಣೆ ವಿಚಾರ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋಮಾಂಸ ಭಕ್ಷಣೆಯ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯ ಘಟಕವು ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ,  ‘ಅಹಿಂದದ ಸೂತ್ರ ಪಠಿಸುವ ಅಹಿಂದೂ ಲಾಯರ್ ಸಿದ್ದರಾಮಯ್ಯನವರು ಗೋಮಾಂಸ ಭಕ್ಷಣೆಯ ಪರವಾಗಿ ವಾದ ಮಂಡನೆ ಮಾಡಿ ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ’ ಎಂದು ತಿಳಿಸಿದೆ.

‘ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಪುಂಗುವ ಇವರು ಒಂದು ವಿಶೇಷ ಸಮುದಾಯವನ್ನು ಅಸಾಂವಿಧಾನಿಕ ರೀತಿಯಲ್ಲಿ ಓಲೈಸಿಕೊಂಡು ಬರುತ್ತಿರುವ ಕಾರಣವೇನು ಎಂಬುದನ್ನು ಸ್ಪಷ್ಟ ಪಡಿಸಲೇಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ. 

‘ಹಿಂದುಳಿದ ಹಾಗೂ ದಲಿತ ವರ್ಗದ ಹಿಂದೂ ಸೋದರರೂ ಕೂಡ ಗೋವನ್ನು ಪೂಜಿಸುತ್ತಾರೆ. ಗೋಮಾಂಸ ತಿನ್ನಬೇಕು ಅನ್ನಿಸಿದರೆ ತಿನ್ನುವೆ ಎನ್ನುವ ನೀವು(ಸಿದ್ದರಾಮಯ್ಯ) ಯಾವ ನೈತಿಕ ಮೌಲ್ಯದ ಮೇಲೆ ಕೋಟ್ಯಂತರ ಹಿಂದೂಗಳು ಆಸ್ಥೆಯಿಂದ ನಡೆದುಕೊಳ್ಳುವ ಮಠ ಮಂದಿರಗಳಿಗೆ ಹೋಗಿ ಬರುತ್ತೀರಿ? ಹೀಗೆ ಹಿಂದೂಗಳಿಗೆ ಅವಮಾನ ಮಾಡಿ ಕಡೆಗೆ ಅವರಲ್ಲಿಯೇ ಮತಭಿಕ್ಷೆ ಬೇಡುವುದು ನಾಚಿಕೆಗೇಡು’ ಎಂದು ಬಿಜೆಪಿ ಟ್ವೀಟಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು