ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಉರಿಯುವ ಬೆಂಕಿಯಲ್ಲಿ ಮೈ ಕಾಯಿಸುತ್ತಿದ್ದಾರೆ- ವಿ. ಸುನಿಲ್‌ ಕುಮಾರ್‌

Last Updated 23 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಕಮ್ಯುನಿಸ್ಟ್‌ ಸರ್ಕಾರವು ನಾರಾಯಣ ಗುರುಗಳ ಹೆಸರನ್ನು ಎಳೆದು ತಂದು ಸೃಷ್ಟಿಸಿರುವ ಸ್ತಬ್ಧಚಿತ್ರದ ವಿವಾದದ ಉರಿಯುವ ಬೆಂಕಿಯಲ್ಲಿ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೈ ಕಾಯಿಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಟೀಕಿಸಿದ್ದಾರೆ.

ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಂಗಳೂರಿನ ಲೇಡಿ ಹಿಲ್‌ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನು ನಾಮಕರಣ ಮಾಡಲು ಅಲ್ಲಿನ ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ವಿರೋಧಿಸಿತ್ತು. ಆ ಸಮಯದಲ್ಲಿ ನೀವು ಮೌನಕ್ಕೆ ಶರಣಾಗಿದ್ದೀರಿ. ಆಗ ನಿಮಗೆ ನಾರಾಯಣ ಗುರುಗಳ ಬಗ್ಗೆ ಗೌರವ ಇರಲಿಲ್ಲಿವೆ? ಕೇರಳ ಸರ್ಕಾರ ಸೃಷ್ಟಿಸಿದ ತಪ್ಪನ್ನು ನೀವು ಏಕೆ ಪೋಷಿಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ನೇರವಾಗಿ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವುದಿಲ್ಲ. ಆ ಕೆಲಸವನ್ನು ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಡುತ್ತಾರೆ. ಈ ವಿಷಯದಲ್ಲಿ ನಾರಾಯಣ ಗುರು ಮತ್ತು ಶಂಕರಾಚಾರ್ಯರ ಹೆಸರನ್ನು ಎಳೆದು ತಂದು ಸಮಾಜ ಒಡೆಯಲು ಕೇರಳ ಸರ್ಕಾರ ಯತ್ನಿಸುತ್ತಿದೆ. ಈ ವಿವಾದದ ಕೂಸನ್ನು ರಾಜ್ಯದಲ್ಲಿ ಎತ್ತಿ ಆಡಿಸುತ್ತಿರುವ ಸಿದ್ದರಾಮಯ್ಯ, ಇಲ್ಲಿಯೂ ಸಮಾಜವನ್ನು ಒಡೆ
ಯಲು ಪ್ರಯತ್ನಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT