ಉಪಚುನಾವಣೆ ಫಲಿತಾಂಶ ಜೆಡಿಎಸ್‌ಗೆ ಪಾಠ: ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ‘ಜನರು ನಮ್ಮ ನಡೆ, ನುಡಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಜೆಡಿಎಸ್ ಪಕ್ಷಕ್ಕೆ ಈ ಉಪಚುನಾವಣೆಯಲ್ಲಿ ಗೊತ್ತಾಗಿದೆ ಅನಿಸುತ್ತಿದೆ. ಜೆಡಿಎಸ್‌ನವರು ಜವಾಬ್ದಾರಿಯಿಂದ ಮಾತಾಡಬೇಕು ಮತ್ತು ನಡೆದುಕೊಳ್ಳಬೇಕು’ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದ್ವೇಷ, ಜಾತಿ, ಧರ್ಮ ಆಧಾರಿತ ರಾಜಕಾರಣ ಬಹಳ ದಿನ ನಡೆಯಲ್ಲ. ಜನ ಬುದ್ಧಿವಂತರಾಗಿದ್ದಾರೆ. ಜನರಿಗೆ ಜಗತ್ತಿನ ಮಾಹಿತಿ ತಕ್ಷಣ ಸಿಗುತ್ತಿದೆ. ನಮ್ಮನ್ನು ಅಳತೆ ಮಾಡುತ್ತಾರೆ. ಮತದಾರರನ್ನು ಹಗುರವಾಗಿ ‘ಟೇಕನ್ ಫಾರ್ ಗ್ರಾಂಟೆಡ್’ ಮಾಡಿಕೊಳ್ಳಬಾರದು ಎಂದು ಹಿರಿಯ ನಾಯಕರಿಗೆ ಮನವಿ ಮಾಡುತ್ತೇನೆ’ ಎಂದರು.
ಓದಿ: ಸಿದ್ದರಾಮಯ್ಯ ಬಣದ ಒಳ ಏಟಿಗೆ ತತ್ತರಿಸಿದ ಡಿ.ಕೆ.ಶಿವಕುಮಾರ್: ಬಿಜೆಪಿ
‘ಟೀಕೆ ಮಾಡುವ ಮುನ್ನ ಹಿನ್ನೆಲೆ– ಮುನ್ನೆಲೆ ತಿಳಿದುಕೊಳ್ಳಬೇಕು. ಆರ್‌ಎಸ್‌ಎಸ್ ಏನು ಕೆಲಸ ಮಾಡುತ್ತಿದೆ, ಆರ್‌ಎಸ್‌ಎಸ್‌ನಲ್ಲಿರುವ ನಾಯಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಂಡು ಮಾತಾಡಬೇಕು. ‘ವೋಟ್‌ಬ್ಯಾಂಕ್’ ರಾಜಕಾರಣಕ್ಕಾಗಿ, ಧರ್ಮ, ಜಾತಿ ಓಲೈಕೆಗಾಗಿ ಅವಸರಿಸಿ ಮಾತನಾಡಿದರೆ ಜನರು ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.