ಬೆಂಗಳೂರು: ಪ್ರಬಂಧಪ್ರಿಯರ ವಾರ್ಷಿಕ ಹಬ್ಬ ‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ–2023ರ ಫಲಿತಾಂಶ ಪ್ರಕಟಗೊಂಡಿದ್ದು, ಚೆನ್ನೈ ಕನ್ನಡಿಗ ಕೆ.ಎಲ್. ಶ್ರೀವತ್ಸ ಅವರ ‘ನೆರಳಿಗೆಷ್ಟೊಂದು ಮುಖ!’ ಬರಹ ಪ್ರಥಮ ಬಹುಮಾನ ಪಡೆದಿದೆ.
ಮೈಸೂರಿನ ಗಂಗಾಧರ ಬೀಚನಹಳ್ಳಿ (‘ನಾನು ನಾನೆಂಬ ಮಾಯೆ’) ಹಾಗೂ ಕುಮಟಾದ ಸೌಮ್ಯಾ ಭಾಗ್ವತ್ (‘ರಥಬೀದಿಯ ರಫಿಯೂ ಮತ್ತು ಕರಿ ಕನ್ನೆಯೂ’) ಅವರ ಪ್ರಬಂಧಗಳು ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹10,000, ₹ 8000 ಹಾಗೂ ₹ 5000 ದೊರೆಯಲಿದೆ.
‘ಬಣ್ಣದ ಬುಗುರಿಯ ಸಮಾಜವಾದ’ (ಜಿ.ವಿ. ಅರುಣ), ‘ಮಾಸದ ಚಪ್ಪಲಿಯ ನೆನಪು’ (ಲಲಿತಾ ಕೆ. ಹೊಸಪ್ಯಾಟಿ), ‘ಅಮ್ಮಾ... ಯಾರೋ ಬಂದ್ರೂ!’ (ನಳಿನಿ ಭೀಮಪ್ಪ), ‘ಬಾಲ ಪ್ರತಿಭಾ ಪೀಡನ’ (ಪಿ.ಬಿ. ಪ್ರಸನ್ನ) ಹಾಗೂ ‘ಸ್ಟೋರ್ ರೂಂ ಅಟ್ಟ ಎಂಬ ಮೂಲೆಗಳು’ (ವಿಜಯಶ್ರೀ ಎಂ. ಹಾಲಾಡಿ) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಯಿತ್ರಿ ತೇಜಶ್ರೀ ಮತ್ತು ವಿಮರ್ಶಕ ಸುರೇಶ್ ನಾಗಲಮಡಿಕೆ ಈ ವರ್ಷದ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ನಾಲ್ಕು ನೂರಕ್ಕೂ ಹೆಚ್ಚಿನ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.