ಮಂಗಳವಾರ, ಮೇ 24, 2022
27 °C

ಅದೇ ರಾಮನ ಶಕ್ತಿಗಿರುವ ತಾಕತ್ತು: ಎಚ್‌ಡಿಕೆಗೆ ಸಂತೋಷ್‌ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದವರ ಪ್ರಕಾರ, ದೇಣಿಗೆ ಸಂಗ್ರಹಿಸಲು ಬಂದವರು ಸಜ್ಜನಿಕೆಯ ನಡವಳಿಕೆ ತೋರಿದ್ದಾರೆ. ಆದರೆ, ಕುಮಾರಣ್ಣನ ಪ್ರಕಾರ ಅವರು ಪುಂಡುಪೋಕರಿಗಳು. ಅಬ್ಬಾ ಎಷ್ಟು ಮಹಾನ್ ಸಂಸ್ಕೃತಿ ನಮ್ಮದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಭಾರತದ ಪುಂಡುಪೋಕರಿಗಳ ವರ್ತನೆಯೇ ಇಷ್ಟು ಸಭ್ಯತೆಯಿಂದ ಕೂಡಿದ್ದರೆ ಇನ್ನು ಪ್ರಾಜ್ಞರ, ಪ್ರಜಾಜನರ ನಡವಳಿಕೆ ಇನ್ನೆಷ್ಟು ಉತ್ತಮವಿದ್ದೀತು. ಅದೇ ರಾಮನ ಶಕ್ತಿಗಿರುವ ತಾಕತ್ತು, ಹಿಂದೂ ಸಂಸ್ಕೃತಿಯ ಮಹತ್ತು’ ಎಂದಿದ್ದಾರೆ.

‘ರಾಮ ಮಂದಿರಕ್ಕೆ ದೇಣಿಗೆ ನೀಡಿದ ಪ್ರತಿಯೊಬ್ಬರ ಪ್ರಕಾರ ಅವರ ಮನೆಗೆ ಸಂಗ್ರಹಕ್ಕೆಂದು ಬಂದಿದ್ದವರು ಬಹು ಸಂಯಮದಿಂದ ವಿಷಯ ವಿವರಿಸಿ, ಒಂದಿಷ್ಟೂ ಒತ್ತಾಯಪಡಿಸದೆ ಕೊಟ್ಟಷ್ಟು ದೇಣಿಗೆ ಸ್ವೀಕರಿಸಿ, ಅಧಿಕೃತ ರಸೀದಿ (ಕೂಪನ್) ಕೊಟ್ಟು ಹೋಗಿದ್ದಾರೆ’ ಎಂದೂ ಸಂತೋಷ್‌ ಹೇಳಿದ್ದಾರೆ.

‘ಕುಮಾರಣ್ಣನವರೇ, ರಾಮನಗರದಲ್ಲಿ ಅಳಿದುಳಿದಿರುವ ನಿಮ್ಮ ಕಾರ್ಯಕರ್ತರನ್ನು ರಾಮನ ಕಾರ್ಯದಲ್ಲಿ ತೊಡಗಿಸಿ, ಶ್ರೀರಾಮನ ಕೃಪೆಯಿಂದ ಅವರೂ ಅತ್ಯಂತ ಸಜ್ಜನರಾಗಿ ಬದಲಾಗುತ್ತಾರೆ’ ಎಂದೂ ಅವರು ಸಲಹೆ ನೀಡಿದ್ದಾರೆ.

ಹಿಂದೂಗಳನ್ನು ಹೀಯಾಳಿಸುವುದು ಚಾಳಿ: ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಗ್ಗೆ ಅವರಿಗೆ ನಂಬಿಕೆ ಇಲ್ಲವೇ? ಇಷ್ಟ ಇದ್ದರೆ ಅವರು ದೇಣಿಗೆ ಕೊಡಲಿ‌. ಇಲ್ಲದೇ ಇದ್ದರೆ ಸುಮ್ಮನಿರಲಿ. ಕೊಡಬಾರದು ಎಂದು ಯಾಕೆ ಹೇಳಬೇಕು. ಹಿಂದೂಗಳನ್ನು ಹೀಯಾಳಿಸುವುದು ಅವರ ಚಾಳಿ’ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆ ಹಾಕುತ್ತಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಧಮಕಿ ಹಾಕಲು ಆಗುತ್ತಾ. ಇವರೇ ಇನ್ನೊಬ್ಬರಿಗೆ ಧಮಕಿ ಹಾಕುತ್ತಾರೆ. ಶಾಸಕರಿಗೆ ಇವರೇ ಧಮಕಿ ಹಾಕುತ್ತಾರೆ' ಎಂದರು.

'ಮನೆ ಲೆಕ್ಕ ಕೇಳಲು ಇವರು ಯಾರು? ಇವರಂತೂ ನಯಾಪೈಸೆ ಕೊಟ್ಟಿಲ್ಲ. ಕೊಡುವವರನ್ನು ಬೇಡ ಎನ್ನಲು ಇವರು ಯಾರು. ಅವರದೇ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಅವರ ಪಕ್ಷದ ಶಾಸಕರೇ ಅವರ ಮಾತನ್ನು ಕೇಳುವುದಿಲ್ಲ’ ಎಂದು ಕುಟುಕಿದರು.

‘ಇಷ್ಟ ಇದ್ದರೆ ಕೊಡಲಿ‌, ಇಲ್ಲ ಸುಮ್ಮನಿರಲಿ‘
ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ, ‘ರಾಮಮಂದಿರ ವಿಷಯದಲ್ಲಿ ಇಷ್ಟ ಇದ್ದರೆ ಅವರು ದೇಣಿಗೆ ಕೊಡಲಿ‌. ಇಲ್ ಸುಮ್ಮನಿರಲಿ. ಕೊಡಬಾರದು ಎಂದು ಯಾಕೆ ಹೇಳಬೇಕು. ಹಿಂದೂಗಳನ್ನು ಹೀಯಾಳಿಸುವುದೇ ಅವರ ಚಾಳಿ’ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆ ಹಾಕುತ್ತಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ‘ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಧಮಕಿ ಹಾಕಲು ಆಗುತ್ತಾ? ಇವರೇ ಇನ್ನೊಬ್ಬರಿಗೆ ಧಮಕಿ ಹಾಕುತ್ತಾರೆ. ಶಾಸಕರಿಗೆ ಇವರೇ ಧಮಕಿ ಹಾಕುತ್ತಾರೆ' ಎಂದರು.

'ಮನೆ ಲೆಕ್ಕ ಕೇಳಲು ಇವರು ಯಾರು? ಇವರಂತೂ ನಯಾಪೈಸೆ ಕೊಟ್ಟಿಲ್ಲ. ಕೊಡುವವರನ್ನು ಬೇಡ ಎನ್ನಲು ಇವರು ಯಾರು. ಅವರದೇ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಅವರ ಪಕ್ಷದ ಶಾಸಕರೇ ಅವರ ಮಾತನ್ನು ಕೇಳುವುದಿಲ್ಲ’ ಎಂದು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು