ಸೋಮವಾರ, ಮಾರ್ಚ್ 20, 2023
30 °C

ರಂಗ ನಿರ್ದೇಶಕ ಜಿ. ಚೆನ್ನಕೇಶವ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಂಗಭೂಮಿ ನಿರ್ದೇಶಕ, ನಟ ಹಾಗೂ ಚಿತ್ರ ಕಲಾವಿದ ಜಿ. ಚೆನ್ನಕೇಶವ (49) ಅವರು ಬುಧವಾರ ನಿಧನರಾದರು. 

ಅನಾರೋಗ್ಯ ಸಮಸ್ಯೆಯಿಂದಾಗಿ ಕಳೆದ ಶುಕ್ರವಾರ ಅವರು ವಿಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯ ಸಮಸ್ಯೆಯಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಪತ್ನಿ ಗಿರಿಜಾ ಅವರು ಕೂಡ ರಂಗ ಕಲಾವಿದರಾಗಿದ್ದಾರೆ.

ಇಲ್ಲಿನ ನಾಗರಬಾವಿಯಲ್ಲಿರುವ ಅವರ ತಾಯಿಯ ಮನೆಯಲ್ಲಿ (ನಮ್ಮೂರು ತಿಂಡಿ ಎದುರಗಡೆ) ಗುರುವಾರ ಬೆಳಿಗ್ಗೆ 10.30ಕ್ಕೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಾಲೇಜು ರಂಗಭೂಮಿಯ ಮೂಲಕ ರಂಗ ಪ್ರವೇಶ ಮಾಡಿದ್ದ ಅವರು, ಸಮುದಾಯ ಬೆಂಗಳೂರು ತಂಡದಲ್ಲಿ ಸಕ್ರಿಯರಾಗಿದ್ದರು. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲೆ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣವನ್ನು ಅಭ್ಯಾಸ ಮಾಡಿದ್ದರು. ವಿವಿಧ ನಾಟಕಗಳನ್ನು ನಿರ್ದೇಶಿಸಿದ್ದ ಅವರು, ಚಲನಚಿತ್ರಗಳಿಗೆ ಧ್ವನಿ ಕಲಾವಿದರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.