ಶುಕ್ರವಾರ, ಜೂನ್ 25, 2021
20 °C

ಮೇ 1ಕ್ಕೆ ನನ್ನ ಮತ್ತು ಶಿವರಾಜ್‌ಕುಮಾರ್ ಕೊಲೆಯಾಗುತ್ತಂತೆ: ಬಿ.ಟಿ.ಲಲಿತಾ ನಾಯ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಂತಕರು ಮೇ 1ಕ್ಕೆ ನನಗೆ ಮುಹೂರ್ತ ಇಟ್ಟಿದ್ದಾರಂತೆ. ಅದೇ ದಿನ ನಟ ಶಿವರಾಜ್‌ಕುಮಾರ್‌, ಪಬ್ಲಿಕ್‌ ಟಿವಿ ಸಂಪಾದಕ ಎಚ್‌.ಆರ್‌.ರಂಗನಾಥ್‌ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್‌ ಹೇಳಿದರು.

ಭಾನುವಾರ ಬಿಡುಗಡೆಗೊಂಡ ಎಚ್‌.ಎಂ.ರೇವಣ್ಣ ಕುರಿತ ‘ಸಂಗತ’ ಕೃತಿಯ ಬಗ್ಗೆ ಮಾತನಾಡುವಾಗ ಅವರು ಈ ವಿಷಯ ಪ್ರಸ್ತಾಪಿಸಿದರು.

ಇದನ್ನೂ ಓದಿ... ಲೇಖಕ ಅಹೋರಾತ್ರ ಮನೆಗೆ ನುಗ್ಗಿ ನಟ ಸುದೀಪ್‌ ಅಭಿಮಾನಿಗಳಿಂದ ದಾಂದಲೆ

‘ಸಿ.ಟಿ.ರವಿ ಇಲ್ಲವೇ ನನ್ನನ್ನು ಕೊಲ್ಲಬೇಕು. ಇಬ್ಬರನ್ನೂ ಒಟ್ಟಿಗೆ ಕೊಲ್ತೀವಿ ಅಂತ ಬರೆದಿದ್ದಾರೆ. ಇದನ್ನು ನೋಡಿದಾಗ ಯಾರೊ ಹುಡುಗಾಟಿಕೆಗೆ ಇದನ್ನು ಬರೆದಿರಬಹುದು ಅಂತ ಅನಿಸುತ್ತಿದೆ. ಗೌರಿ ಲಂಕೇಶ್‌ ಹಾಗೂ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆಗೈದ ವ್ಯಕ್ತಿಗಳಿಗೇ ಸುಫಾರಿ ಕೊಡಲಾಗಿದೆ.ಹಂತಕರು ಕೇರಳದ ಮಹಮ್ಮದ್‌ ರಸೂಲ್‌ ಹಾಗೂ ಹಾಸನದ ಮುಸ್ತಾಫ ಅಲಿಖಾನ್‌ರಿಂದ ಸುಫಾರಿ ಪಡೆದಿದ್ದಾರೆ. ಹೀಗಾಗಿ ನಾಲ್ಕು ಜನಕ್ಕೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

ಇದನ್ನೂ ಓದಿ... ಒಳ ಉಡುಪು ಕಳಚಲು ಹೇಳಿದ್ದ ನಿರ್ದೇಶಕ: ಕಹಿ ನೆನಪು ತೆರೆದಿಟ್ಟ ಪ್ರಿಯಾಂಕಾ ಚೋಪ್ರಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು