ಗುರುವಾರ , ಆಗಸ್ಟ್ 5, 2021
29 °C

ಮೈಸೂರಿನಲ್ಲಿ ಮೂರು ‘ಡೆಲ್ಟಾ’ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರಿನಲ್ಲಿ ಕೊರೊನಾ ವೈರಾಣುವಿನ ರೂಪಾಂತರಗೊಂಡಿರುವ ‘ಡೆಲ್ಟಾ ಪ್ಲಸ್‌’ ತಳಿಯ ಮತ್ತೆ ಮೂರು ಪ್ರಕರಣಗಳು ವರದಿಯಾಗಿವೆ.

‘ಕೋವಿಡ್ ಪರೀಕ್ಷೆಗೆ ಜಿಲ್ಲೆಯಲ್ಲಿ ಸಂಗ್ರಹಿಸಲಾದ ಗಂಟಲ ದ್ರವ ಮಾದರಿಗಳಲ್ಲಿ 20 ಮಾದರಿಗಳನ್ನು ಮೇ 13 ರಂದು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿಕೊಡಲಾಗಿತ್ತು. ಇವುಗಳಲ್ಲಿ ನಾಲ್ಕು ಮಾದರಿಗಳಲ್ಲಿ ‘ಡೆಲ್ಟಾ’ ರೂಪಾಂತರಿ ತಳಿ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್ ತಿಳಿಸಿದರು.

ಇದರಲ್ಲಿ ಮೂರು ಮಾದರಿಗಳು ‘ಡೆಲ್ಟಾ’‌ದ ಬಿ1.617.2 ತಳಿ ಆಗಿವೆ. ಒಂದು ಮಾದರಿ ‘ಡೆಲ್ಟಾ ಪ್ಲಸ್’ ಬಿ1.617.1 ತಳಿಯದ್ದು ಎಂಬುದು ದೃಢಪಟ್ಟಿದೆ. ಎಲ್ಲ ಸೋಂಕಿತರು ಗುಣಮುಖರಾಗಿದ್ದಾರೆ. ರೂಪಾಂತರಗೊಂಡ ವೈರಾಣು ಹರಡದಂತೆ ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು