ಟೊಯೊಟಾ: ಮತ್ತೆ ಐವರು ಕಾರ್ಮಿಕರು ಅಮಾನತು

ಬಿಡದಿ (ರಾಮನಗರ): ಕಂಪನಿ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ ಮತ್ತೆ ತನ್ನ ಐವರು ಕಾರ್ಮಿಕರನ್ನು ಅಮಾನತು ಮಾಡಿದೆ.
ಇದರಿಂದ ಅಮಾನತುಗೊಂಡವರ ಸಂಖ್ಯೆ 66ಕ್ಕೆ ಏರಿಕೆ ಆಗಿದೆ.
ಸಹ ಕಾರ್ಮಿಕರಿಗೆ ಬೆದರಿಕೆ ಹಾಕಿ ಕೆಲಸಕ್ಕೆ ಹೋಗದಂತೆ ತಡೆದದ್ದು, ಅಧಿಕಾರಿಗಳಿಗೆ ಬಹಿರಂಗ ನಿಂದನೆ ಹಾಗೂ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿ ಹೆಸರಿಗೆ ಧಕ್ಕೆ ಆಗುವಂತೆ ಕೆಲಸ ಮಾಡಿದ್ದ ಆರೋಪದಡಿ ಐವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತನಿಖೆ ನಡೆಸುವುದಾಗಿಯೂ ಕಂಪನಿಯು ನೋಟಿಸ್ನಲ್ಲಿ ತಿಳಿಸಿದೆ.
ಕಾರ್ಮಿಕ ಸಂಘವು ಇದಕ್ಕೆ, ‘ವಿನಾಕಾರಣ ಆರೋಪ ಹೊರಿಸಿ ಅಮಾನತು ಮಾಡಲಾಗಿದೆ. ಇದು ಹತಾಶ ಹಾಗೂ ಸೇಡಿನ ಪ್ರಕ್ರಿಯೆಯಾಗಿದೆ’ ಎಂದು ಆರೋಪಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.