ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ: ಏಕರೂಪದ ಪರಿಹಾರಕ್ಕೆ ಒತ್ತಾಯ

ಗಾಂಧೀಜಿ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ:
Last Updated 2 ಅಕ್ಟೋಬರ್ 2021, 17:48 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನದ ವೇಳೆ ಮುಳುಗಡೆ ಆಗಲಿರುವ 1.33 ಲಕ್ಷ ಎಕರೆ ಭೂಮಿ ಹಾಗೂ 20 ಗ್ರಾಮಗಳ ಸಂತ್ರಸ್ತರಿಗೆ ಏಕರೂಪದ ಪರಿಹಾರ ಕೊಡುವಂತೆ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಶನಿವಾರ ಇಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿತು.

ವೇದಿಕೆ ಆಶ್ರಯದಲ್ಲಿ ‘ಗಾಂಧೀಜಿನಡಿಗೆ ಕೃಷ್ಣೆಯ ಕಡೆಗೆ’ ಹೆಸರಿನಲ್ಲಿಬೀಳಗಿ ತಾಲ್ಲೂಕು ಅನಗವಾಡಿಯ ಘಟ ಪ್ರಭಾ ಸೇತುವೆಯಿಂದ ವಿಜಯಪುರ ಜಿಲ್ಲೆ ಕೊರ್ತಿ–ಕೊಲ್ಹಾರದ ಕೃಷ್ಣಾ ನದಿಸೇತುವೆಯವರೆಗೆ 24 ಕಿ.ಮೀ ದೂರ
ಪಾದಯಾತ್ರೆ ನಡೆಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT