3ನೇ ಪೀಠ ಹಿಂದೆ ಯಾರಿದ್ದಾರೆ ಗೊತ್ತಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬಾಗಲಕೋಟೆ: ‘ಜಮಖಂಡಿಯಲ್ಲಿ ನಡೆದ ಸಭೆಯ ಹಿಂದೆ ಯಾರಿದ್ದಾರೆ ಎಂಬುದು ಸಮಾಜದ ಎಲ್ಲರಿಗೂ ಗೊತ್ತಿದೆ. ಶೀಘ್ರ ಅದು ಬಹಿರಂಗವಾಗಲಿದೆ. ಮೂರನೇ ಪೀಠದ ನಿರ್ಧಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳೊಲ್ಲ. ಆ ಬಗ್ಗೆ ಏನೂ ಮಾತಾಡೊಲ್ಲ’ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.
‘2ಎ ಮೀಸಲಾತಿ ಚಳವಳಿ ಹತ್ತಿಕ್ಕಲು ಬೇರೆ ಬೇರೆ ಬೆಳವಣಿಗೆ ನಡೆಯುತ್ತಿವೆ. ಇದು ಕೂಡ ಅದರ ಭಾಗ. ಸಮಾಜದ ಏಳಿಗೆಗೆ ನಾನು ದುಡಿಯುವುದು ಸಹಿಸಲು ಆಗದೇ ಹೊಟ್ಟೆಕಿಚ್ಚಿನಿಂದ ಹೀಗೆ ಮಾಡಲಾಗುತ್ತಿದೆ’ ಎಂದರು.
ಪ್ರತಿಕ್ರಿಯಿಸಲ್ಲ: ‘ನಮ್ಮ ಹರಿಹರ ಪೀಠದ ಬಗ್ಗೆ ಏನಾದರೂ ಕೇಳಿ ನಾನು ಉತ್ತರಿಸುವೆ. ಆದರೆ ಬೇರೆ ಸಂಗತಿಗಳ ಬಗ್ಗೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.