ಬುಧವಾರ, ಜನವರಿ 19, 2022
18 °C

ಗ್ರಂಥಪಾಲಕರಿಗೆ ತಾಂತ್ರಿಕ ಕೌಶಲ ಕೋರ್ಸ್: ವಿಟಿಯು–ಎಲ್‌ಐಎಸ್‌ ಅಕಾಡೆಮಿ ಒಪ್ಪಂದ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಂಥಪಾಲಕರಿಗೆ ತಾಂತ್ರಿಕ ಕೌಶಲ ಹೆಚ್ಚಿಸುವ ಉದ್ದೇಶದಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಗ್ರಂಥಾಲಯ ವಿಜ್ಞಾನ ತರಬೇತಿ ಆರಂಭಿಸಲು ಬೆಂಗಳೂರಿನ ಎಲ್‌ಐಎಸ್‌ ಅಕಾಡೆಮಿ ಜೊತೆ ಒ‍ಪ್ಪಂದ ಮಾಡಿಕೊಂಡಿದೆ.

ನಗರದ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

‘ಉನ್ನತ ಶಿಕ್ಷಣದಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದು. ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಮಾಹಿತಿ ವಿಜ್ಞಾನ ವಿಷಯಗಳನ್ನು ತಾಂತ್ರಿಕವಾಗಿ ಬೋಧಿಸಲು ಗ್ರಂಥಪಾಲಕರಿಗೆ ಗ್ರಂಥಾಲಯ ವಿಜ್ಞಾನ ಕೌಶಲಾಭಿವೃದ್ಧಿ ಕೋರ್ಸ್‌ ಹಾಗೂ ಎಂಜಿನಿಯರಿಂಗ್–ವಿಜ್ಞಾನ ವಿದ್ಯಾರ್ಥಿಗಳಿಗೆ ‘ಮಾಸ್ಟರ್ ಆಫ್ ಸೈನ್ಸ್‌ ಇನ್ ಲೈಬ್ರರಿ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್’ (ಎಂಎಸ್‌ಸಿ-ಎಲ್‌ಟಿಎಂ) ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ಎಲ್‌ಐಎಸ್‌ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

ಎಲ್‌ಐಎಸ್ ಅಕಾಡೆಮಿ ಅಧ್ಯಕ್ಷ ಪಿ.ವಿ.ಕೊಣ್ಣೂರ, ‘ಗ್ರಂಥಪಾಲಕರಿಗೆ ಕೌಶಲಾಭಿವೃದ್ಧಿ ಕೋರ್ಸ್‌ಗಳ ಮೂಲಕ ಯಶಸ್ವಿಯಾಗಿ ಶಿಕ್ಷಣ ನೀಡಲು ವಿಟಿಯು ಸಹಕರಿಸಬೇಕು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.