ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಅಂಗವಿಕಲ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆ

Last Updated 2 ಡಿಸೆಂಬರ್ 2022, 15:57 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು, ಅಂಗವೈಕಲ್ಯವನ್ನು ಮೆಟ್ಟಿ ನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಡಲಾಗಿದೆ.

ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ 10 ಸಂಘ–ಸಂಸ್ಥೆಗಳು, ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಶಿಕ್ಷಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇಲಾಖೆಯು ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಬಸವನಗುಡಿಯ ಸಕ್ಷಮ ಕರ್ನಾಟಕ, ಹೆಬ್ಬಾಳದ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ, ಉಡುಪಿಯ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಶಿವಮೊಗ್ಗದ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್, ಮೈಸೂರಿನ ಮಾತೃಮಂಡಳಿ ಶಿಶು ವಿಕಾಸ ಕೇಂದ್ರ, ರಾಮನಗರದ ನವಚೇತನ ಚಾರಿಟಬಲ್ ಟ್ರಸ್ಟ್, ರಾಯಚೂರಿನ ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನ, ದಕ್ಷಿಣ ಕನ್ನಡದ ಸೇವಾಭಾರತಿ ಸೇವಾನಿಕೇತನ, ಕೊಪ್ಪಳದ ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಸೊಸೈಟಿ ಹಾಗೂ ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿವೆ.

ಶಿಕ್ಷಕರ ವಿಭಾಗದಲ್ಲಿ ನೀಡುವ ಪ್ರಶಸ್ತಿಗೆ ಚಾಮರಾಜನಗರದ ಎಂ.ಶಾಂತಿ, ಹಾವೇರಿಯ ನಾಗಪ್ಪ ಬ. ಬೆಂತೂರು, ದೊಡ್ಡಬಳ್ಳಾಪುರದ ರವಿ ಆರ್., ಮೈಸೂರಿನ ರಘುನಾಥಗೌಡ ವೈ.ವಿ. ಹಾಗೂ ತುಮಕೂರಿನ ಎಚ್. ಸುಮತಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಸಾಧಕರು

ಹೆಸರು; ಜಿಲ್ಲೆ

ವೆಂಕಟೇಶ್ ಬಾಬು; ಚಿಕ್ಕಬಳ್ಳಾಪುರ

ರಾಧಾ; ಚಿತ್ರದುರ್ಗ

ಗೋಪಿನಾಥ್ ಕೆ.; ಬೆಂಗಳೂರು

ಜ್ಯೋತಿ ಎಸ್.; ಶಿವಮೊಗ್ಗ

ಅನಿತಾ ಎಚ್. ಪಾಟೀಲ; ದಾವಣಗೆರೆ

ಸಿ.ಆರ್. ಶಿವಕುಮಾರ್; ಶಿವಮೊಗ್ಗ

ರಾಜಶೇಖರ ಪಿ. ಶಾಮರಾವ; ಉಡುಪಿ

ಬಸವರಾಜ ತಮ್ಮಣ್ಣಪ್ಪ ಹೊರಡ್ಡಿ; ಬಾಗಲಕೋಟೆ

ನಿಧಿ ಶಿವರಾಮ ಸುಲ್ಲಾಖೆ; ಧಾರವಾಡ

ಸುರಜ್ ಪರಶುರಾಮ್ ಧಾಮಣೇಕರ; ಬೆಳಗಾವಿ

ತುಳಸಮ್ಮ ಕೆಲೂರ; ಗದಗ

ಶಿವನಗೌಡ; ಕೊಪ್ಪಳ

ಸಿದ್ಧರಾಮ; ಕಲಬುರಗಿ

ಶಿದ್ಧಲಿಂಗಮ್ಮ; ಕೊಪ್ಪಳ

ಬಾಬುರಾವ್; ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT