ಭಾನುವಾರ, ಮೇ 2, 2021
27 °C

ವನ್ಯಪ್ರಾಣಿ ದಾಳಿ: ಜಾನುವಾರುಗಳ ಮಾಲೀಕರಿಗೆ ಭರ್ಜರಿ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ, ಅವುಗಳ ಮಾಲೀಕರಿಗೆ ನೀಡುತ್ತಿರುವ ಪರಿಹಾರಧನವನ್ನು ₹ 10 ಸಾವಿರದಿಂದ ಗರಿಷ್ಠ ₹ 75 ಸಾವಿರಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕುರಿ, ಮೇಕೆ ಅಥವಾ ಆಡು ಮೃತಪಟ್ಟರೆ ಪಾವತಿಸುವ ಪರಿಹಾರ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣವೇ ಪೂರ್ಣ ಮೊತ್ತ ಪಾವತಿಸಬಹುದು.

ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟ ತಕ್ಷಣ ಅವುಗಳ ಮಾಲೀಕರಿಗೆ ₹ 20 ಸಾವಿರ ಪರಿಹಾರ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಉಳಿದ ಮೊತ್ತವನ್ನು (ಗರಿಷ್ಠ ₹ 75 ಸಾವಿರ) ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿಗಳ ಶಿಫಾರಸಿಗೆ ಅನುಗುಣವಾಗಿ ಪಾವತಿಸಬಹುದು.

2014 ಆಗಸ್ಟ್ 8ರಂದು ಪರಿಷ್ಕೃತ ಆದೇಶದಲ್ಲಿ ಮಾನವ–ವನ್ಯಜೀವಿ ಸಂಘರ್ಷದಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ₹ 10 ಸಾವಿರ, ಮೇಕೆ, ಕುರಿ ಮೃತಪಟ್ಟರೆ ₹ 5 ಸಾವಿರ ಪರಿಹಾರಧನ ನಿಗದಿ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು