ಸೋಮವಾರ, ಆಗಸ್ಟ್ 15, 2022
27 °C

ಒಳನೋಟ| ನರೇಗಾಕ್ಕೆ ನಾರಿಶಕ್ತಿ ಬಲ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದುರಿತ ಕಾಲದಲ್ಲಿ ದುಡಿಮೆಗೆ ಆಧಾರವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಪಡೆದಿದ್ದ ವೃತ್ತಿಪರ ಉದ್ಯೋಗಿಗಳು ಕೋವಿಡೋತ್ತರ ಕಾಲದಲ್ಲಿ ಮತ್ತೆ ಹಳೆಯ ಉದ್ಯೋಗಕ್ಕೆ ಮರಳಿದ್ದಾರೆ. ಆದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಕಾರ್ಡ್‌ಗಳ ಬೇಡಿಕೆ ತಗ್ಗಿಲ್ಲ.

ನರೇಗಾ ಯೋಜನೆಗೆ ನಾರಿಶಕ್ತಿಯ ಬಲ ಸೇರಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಾರ್ಡ್ ಪಡೆಯುತ್ತಿದ್ದು, 10,419 ಹೊಸ ಕಾರ್ಡ್‌ಗಳು ವಿತರಣೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 1.51 ಲಕ್ಷ ಉದ್ಯೋಗ ಕಾರ್ಡ್‌ಗಳು ವಿತರಣೆಯಾಗಿವೆ.

ಕಾಮಗಾರಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 42ರಷ್ಟು ಇತ್ತು. ಈಗ ಈ ಪ್ರಮಾಣ ಶೇ 50ರ ಸನಿಹದಲ್ಲಿದೆ. ಪರಿಣಾಮವಾಗಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 16 ಲಕ್ಷ ಮಾನವ ದಿನಗಳ ಗುರಿ ಮೀರಿ, 17.15 ಲಕ್ಷ ಮಾನವ ದಿನಗಳು ಸೃಜನೆಯಾಗಿವೆ. ಈ ವರ್ಷ ಜಿಲ್ಲಾ ಪಂಚಾಯಿತಿ 18 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದೆ.

‘ನಾವು ಮಹಿಳೆಯರು ಒಟ್ಟಾಗಿ ಕೆಲಸ ಮಾಡುವುದರಿಂದ ಶ್ರಮದ ದುಡಿಮೆಯಾದರೂ ದಣಿವು ಮರೆಸುತ್ತದೆ. ಕೂಲಿಯ ಮೊತ್ತ ಹೆಚ್ಚಿದ್ದು ಅನುಕೂಲವಾಗಿದೆ. ಜಾಬ್‌ ಕಾರ್ಡ್‌ ಸಿಗಲು ಸಹ ಸಮಸ್ಯೆ ಆಗಲಿಲ್ಲ’ ಎನ್ನುತ್ತಾರೆ ಸುಳ್ಯದ ಕಮಲಾ ಬಾಳಿಗ. 

‘ಕುಟುಂಬದಲ್ಲಿ ಎಲ್ಲ ಸದಸ್ಯರಿಗೆ ಜಾಬ್ ಕಾರ್ಡ್‌ಗಳು ಸಿಗುತ್ತವೆ. ಆದರೆ, ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗದ ಮಿತಿ ಇರುವುದರಿಂದ ಎಲ್ಲ ಸದಸ್ಯರು ಕಾರ್ಡ್‌ ಪಡೆದರೂ, ದಿನಗಳು ಹಂಚಿಕೆ ಆಗಿದ್ದರಿಂದ ಹೆಚ್ಚು ಪ್ರಯೋಜನ ಆಗಲಿಲ್ಲ’ ಎಂದು ಮಂಗಳೂರು ಸಮೀಪದ ಮೂಲ್ಕಿಯ ಮಹಿಳೆಯೊಬ್ಬರು ಬೇಸರಿಸಿಕೊಂಡರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ 4,132 ಹೊಸ ಜಾಬ್ ಕಾರ್ಡ್ ವಿತರಣೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಾಕ್‌ಡೌನ್‌ ವೇಳೆ ಮಹಾನಗರ, ಹೊರರಾಜ್ಯಗಳಿಂದ ತವರಿಗೆ ಮರಳಿ ನರೇಗಾ ನೆಚ್ಚಿಕೊಂಡಿದ್ದವರು, ಕೆಲವು ಅತಿಥಿ ಶಿಕ್ಷಕರು, ಸಣ್ಣ ಕಂಪನಿಗಳ ಉದ್ಯೋಗಿಗಳು ಪುನಃ ಮೂಲ ಕೆಲಸಕ್ಕೆ ಮರಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು