ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಪ್ರಶ್ನಿಸಿವಿನಯ ಕುಲಕರ್ಣಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ವಿಚಾರಣೆ ಪೂರ್ಣಗೊಂಡರೆ ಸತ್ಯಾಂಶ ಹೊರಗೆ ಬರುತ್ತದೆ. ಹೀಗಾಗಿ, ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಆರೋಪಿಗಳಾದ ವಿನಯ ಕುಲಕರ್ಣಿ, ಬಸವರಾಜ ಶಿವಪ್ಪ ಮುತ್ತಗಿ, ವಿನಾಯಕ್, ಚಂದ್ರಶೇಖರ ಇಂಡಿ ಮತ್ತು ಸೋಮಶೇಖರ್ ಅರ್ಜಿ ಸಲ್ಲಿಸಿದ್ದರು. ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿ 2019 ಸೆಪ್ಟೆಂಬರ್ 6ರಂದು ಸರ್ಕಾರ ಹೊರಡಿಸಿದ್ದ ಆದೇಶ ಮತ್ತು ಅದನ್ನು ಆಧರಿಸಿ ಸಿಬಿಐ ದಾಖಲಿಸಿಕೊಂಡ ಎಫ್ಐಆರ್ ಅನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಸ್ಥಳೀಯ ತನಿಖಾಧಿಕಾರಿಗಳು ನ್ಯಾಯಸಮ್ಮತ ತನಿಖೆ ನಡೆಸಿಲ್ಲ. ತನಿಖೆ ದುರ್ಬಲಗೊಳಿಸಿದ ಆರೋಪದಲ್ಲಿ ಅವರನ್ನು ಆರೋಪಿಗಳೆಂದು ಸಿಬಿಐ ಪರಿಗಣಿಸಿದೆ. ಯಾವುದೇ ಆದೇಶಗಳ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರ ತನಿಖೆ ನಡೆಸುವಂತೆ ಪೀಠ ಸಿಬಿಐಗೆ ನಿರ್ದೇಶನ ನೀಡಿತು.

2016ರ ಜೂನ್ 15ರಂದು ಯೋಗೀಶಗೌಡ ಹತ್ಯೆಯಾಗಿತ್ತು. 2020 ನವೆಂಬರ್ 5ರಂದು ವಿನಯ ಕುಲಕರ್ಣಿ ಬಂಧನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.