ಭಾನುವಾರ, ಏಪ್ರಿಲ್ 18, 2021
33 °C

ಜೊಮ್ಯಾಟೊ ಪ್ರಕರಣ; ಗ್ರಾಹಕಿ ಮೇಲೂ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊಮ್ಯಾಟೊ ಗ್ರಾಹಕಿ

ಬೆಂಗಳೂರು: ಆಹಾರ ಪೂರೈಕೆ ತಡವಾಗಿದ್ದ ಕಾರಣಕ್ಕೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದಲ್ಲಿ ಗ್ರಾಹಕಿ ಇಂದ್ರಾಣಿ ಅವರ ಮೇಲೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜೊಮ್ಯಾಟೊ ಕಂಪನಿ ಡೆಲಿವರಿ ಬಾಯ್‌ ಕಾಮರಾಜ್ ನನ್ನ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದಾನೆ’ ಎಂದು ಆರೋಪಿಸಿ ಇಂದ್ರಾಣಿ ಇತ್ತೀಚೆಗೆ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿದೂರು ನೀಡಿರುವ ಕಾಮರಾಜ್, ‘ಗ್ರಾಹಕಿಯೇ ಸುಖಾಸುಮ್ಮನೇ ಜಗಳ ತೆಗೆದು, ನನ್ನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಚಪ್ಪಲಿಯಿಂದ ಹೊಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

ಎರಡೂ ಪ್ರಕರಣಗಳ ತನಿಖೆ ಆರಂಭಿಸಿರುವ ಪೊಲೀಸರು, ಇಬ್ಬರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಆಹಾರ ಪೂರೈಕೆ ಸಂದರ್ಭದಲ್ಲಿ ಏನಾಯಿತು? ಎಂಬುದನ್ನು ತಿಳಿಯಲು ಘಟನಾ ಸ್ಥಳದಲ್ಲಿದ್ದ ಸಿ.ಸಿ. ಟಿ.ವಿ. ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು