ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ರಾಜರ ಚಾಣಾಕ್ಷತೆಗೆ ಸಾಕ್ಷಿ ಬೇಟೆ ಅರಮನೆ

Last Updated 13 ಆಗಸ್ಟ್ 2022, 6:02 IST
ಅಕ್ಷರ ಗಾತ್ರ

ಶಹಾಪುರ: ಸುರಪುರ ಸಂಸ್ಥಾನದ ಆಳ್ವಿಕೆಯಲ್ಲಿ ರಾಜರು ನಿರ್ಮಿಸಿದ ಕೋಟೆ ಕೊತ್ತಲು, ಸ್ಮಾರಕಗಳು ಇಂದಿಗೂ ಆಳ್ವಿಕೆಗೆ ಸಾಕ್ಷಿಯಾಗಿ ನಿಂತಿವೆ. ವನದುರ್ಗ ಕೋಟೆ, ಹೊಸಕೇರಾ ಬೇಟೆ ಅರಮನೆ ಗಮನ ಸೆಳೆಯುತ್ತವೆ.

ರಾಜಾ ಪಿಡ್ಡ ನಾಯಕ (1741-1746) 9 ಎಕರೆಗೂ ಅಧಿಕ ಪ್ರದೇಶದಲ್ಲಿ ನಿರ್ಮಿಸಿದ ವನದುರ್ಗ ಕೋಟೆ. ಗ್ರಾಮ ಪ್ರವೇಶಿಸುವವರೆಗೂ ಕೋಟೆ ಕಾಣುವುದಿಲ್ಲ. ಸೈನಿಕರಿಗೆ ತರಬೇತಿ, ಶಸ್ತಾಸ್ರ್ತ ಸಂಗ್ರಹಿಸಿಡಲು ಕೋಟೆಯನ್ನು ಉಪಯೋಗಿಸಲಾಗುತ್ತಿತ್ತು ಎನ್ನುತ್ತಾರೆ ಗ್ರಾಮದ ಮುಖಂಡ ಹಣಮಂತರಾಯ ದೊರೆ ದಳಪತಿ.

ಸುತ್ತಲೂ ಕಂದಕವಿರುವುದು ಈ ಕೋಟೆಯ ಇನ್ನೊಂದು ವಿಶೇಷ. ಕಂದಕದಲ್ಲಿ ಸದಾ ನೀರು ಇರುತ್ತಿತ್ತು. ಶತ್ರುಗಳು ಕೋಟೆ ಪ್ರವೇಶ ಮಾಡದಂತೆ ತಡೆಯುವುದು ಕಂದಕ ಮೂಲ ಉದ್ದೇಶತು. ಅಲ್ಲದೆ ಕಂದಕದಲ್ಲಿ ಮೊಸಳೆಗಳನ್ನು ಬಿಡುತ್ತಿದ್ದರು. ಅಂದು ನಿರ್ಮಿಸಿದ ಮಜಬೂತಾದ ಕಲ್ಲಿನ ಕೋಟೆ ಇಂದಿಗೂ ಉಳಿದುಕೊಂಡಿರುವುದು ವಿಶೇಷವಾಗಿದೆ ಎನ್ನುತ್ತಾರೆ ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ.

ಬೇಟೆ ಅರಮನೆ: ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಸುರಪುರ ಸಂಸ್ಥಾನದ ರಾಜಾ ದೇವಿಂದ್ರ ವೆಂಕಟ ನಾಯಕ (1774-1801) ಅವಧಿಯಲ್ಲಿ ಹೊಸಕೇರಾ ಬೇಟೆ ಅರಮನೆಯನ್ನು ನಿರ್ಮಿಸಿದ್ದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ.

2 ಅಂತಸ್ತಿ ಕಟ್ಟಡ ರೋಮನ್ ಶೈಲಿಯಲ್ಲಿದೆ. ಕೆರೆಗೆ ಹೊಂದಿಕೊಂಡು ಇದ್ದು ಪ್ರಾಣಿಗಳು ನೀರು ಹರಿಸಿ ಕೆರೆಯಂಗಳಕ್ಕೆ ಬಂದಾಗ ರಾಜರು ಅರಮನೆಯಲ್ಲಿ ಕುಳಿತು ಬೇಟೆ ಆಡುತ್ತಿದ್ದರು. ಕಟ್ಟಡದ ಕೆಲವು ಕಡೆ ಕಿಂಡಿಗಳನ್ನು ಬಿಡಲಾಗಿದೆ. ತುಪಾಕಿನಿಂದ ಗುಂಡು ಹಾರಿಸಲು ಇವು ಸಹಕಾರಿಯಾಗಿದ್ದವು ಎಂದು ಇತಿಹಾಸ ಪುಸ್ತಕಗಳಲ್ಲಿ
ದಾಖಲಿಸಿದ್ದಾರೆ.

ಎರಡು ವರ್ಷದ ಹಿಂದೆ ₹1 ಕೊಟೆ ವೆಚ್ಚದಲ್ಲಿ ಕೆರೆ ಹೂಳೆತ್ತಿ ನೀರು ಸಂಗ್ರಹಿಸಿದ್ದಾರೆ. ಅಂದಿನ ಇತಿಹಾಸ ರೋಚಕ ಘಟನಾವಳಿಗಳಿಗೆ ಪ್ರಬಲ ಸಾಕ್ಷಿಯನ್ನು ಒದಗಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT