ಕೋವಿಡ್-19 ಜನಸಾಮಾನ್ಯರ ಜೀವನವನ್ನು ಏಕತಾನತೆಯ ಕಡೆಗೆ ತಳ್ಳಿದೆ. ಮನೆಯಿಂದ ಹೊರಹೋಗುವುದರಿಂದ ಉಂಟಾಗುವ ತೊಂದರೆಗಳನ್ನು ಜನರು ಅರಿತಿದ್ದಾರೆ. ಹೀಗಾಗಿ ಹಿಂದೆಲ್ಲ ಇದ್ದಂತೆ ರಜೆ ಬಂತೆಂದರೆ ಸ್ವಚ್ಛಂದವಾಗಿ ಪ್ರವಾಸಿ ತಾಣಗಳನ್ನು ಸುತ್ತಿ ಬರುವಷ್ಟು ಧೈರ್ಯ ಜನರಲ್ಲಿ ಕಡಿಮೆಯಾದಂತಿದೆ. ಆದರೆ ಮತ್ತೆಷ್ಟು ದಿನ ಹೀಗೆ ಮನೆಯೊಳಗೆ ಕೂತು ಕಾಲಕಳೆಯುವುದು ಎಂಬ ಆಲೋಚನೆಯೂ ಅನೇಕರಲ್ಲಿ ಮೂಡಿದೆ. ಆದುದರಿಂದಲೆ ಒಂದು ಹೊಸ ಟ್ರೆಂಡ್ಗೆ ದಾರಿಯಾಗಿದೆ. ಅದೇ ಕ್ಯಾರಾವಾನ್ ವೆಕೇಷನ್.

ಏನಿದುಕ್ಯಾರಾವಾನ್ ವೆಕೇಷನ್ ?

ಗುಡ್ಡ, ಬೆಟ್ಟ, ನದಿ, ಸಮುದ್ರಗಳನ್ನೊಳಗೊಂಡ ಪ್ರವಾಸಿ ತಾಣಗಳನ್ನು ಕೋವಿಡ್-19 ರ ಸಮಯದಲ್ಲೂ ಸಹ ಸುರಕ್ಷಿತವಾಗಿ, ಆರೋಗ್ಯಕರವಾಗಿ ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯಲು ಸೂಕ್ತ ಕ್ಯಾರಾವಾನ್ ವೆಕೇಷನ್. ಕ್ಯಾರಾವಾನ್ ಅಥವಾ ಕ್ಯಾಂಪರ್ ವ್ಯಾನ್ ಅಂದರೆ ಮಲಗುವ ಸ್ಥಳ, ಅಡುಗೆಯನ್ನು ಮಾಡಲು ಅನುಕೂಲಗಳಿರುವ, ಆರಾಮದಾಯಕವಾಗಿ ಕಾಲ ಕಳೆಯಲು ಅನುಕೂಲವಿರುವ ವಾಹನ. ಅನೇಕ ಕಂಪನಿಗಳು ಇಂತಹ ಕ್ಯಾರಾವಾನ್ ಟ್ರಿಪ್‌ಗಳನ್ನು ಆಯೋಜಿಸುತ್ತವೆ. ಕ್ಯಾರಾವಾನ್‌ಗಳನ್ನು ಬಾಡಿಗೆಗೆ ಕೂಡ ನೀಡುತ್ತವೆ. ಕೋವಿಡ್‌ನಂತಹ ಸಮಯದಲ್ಲಿ ಇಂತಹ ಪ್ರಯಾಣ ಸುರಕ್ಷಿತ ಎನ್ನಬಹುದಾಗಿದೆ.

ಇಂತಹ ಕ್ಯಾರಾವಾನ್‌ಗಳು ಮಧ್ಯಮದಿಂದ ಹಿಡಿದು ಐಷಾರಾಮಿ ವಾಹನಗಳಲ್ಲಿಯೂ ಲಭ್ಯವಿದ್ದು ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕೊಳ್ಳಬಹುದಾಗಿದೆ. ಅನೇಕ ಪ್ರವಾಸಿ ಟ್ರಾವೆಲ್ ಏಜೆನ್ಸಿಗಳು ತಾವು ಎಲ್ಲಿಗೆ ಪ್ರಯಾಣಿಸಲು ಇಚ್ಛಿಸುತ್ತೀರ, ಅದರ ಅನುಮತಿ, ಆರ್ಥಿಕ ವೆಚ್ಚದ ಅಂದಾಜು ಎಲ್ಲವನ್ನು ಸಂಘಟಿಸಿ ಕೊಡುತ್ತವೆ. ಕೋವಿಡ್-19 ರ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಸುರಕ್ಷಿತ ಕ್ರಮಗಳೊಂದಿಗೆ ಪ್ರಯಾಣವನ್ನು ಆನಂದಿಸಬಹುದಾಗಿದೆ. ಕ್ಯಾರಾವಾನ್‌ಗಳಲ್ಲಿ ಟೆಂಟ್ ಹಾಕಲು, ಕರಿದ ತಿಂಡಿ ತಯಾರಿಸಲು, ಅಡುಗೆ ಮಾಡುವ ಪರಿಕರಗಳು, ಲೈಟ್, ಫ್ಯಾನ್, ಮ್ಯೂಸಿಕ್ ಸಿಸ್ಟಂ, ಚಾರ್ಜಿಂಗ್ ಪಾಯಿಂಟ್ ಹೀಗೆ ಹಲವು ಅನುಕೂಲಗಳನ್ನು ಒದಗಿಸಲಾಗುತ್ತದೆ.

ಕ್ಯಾರಾವಾನ್ ವೆಕೇಷನ್ ಒದಗಿಸಲು ಅನೇಕ ಸಂಸ್ಥೆಗಳು ಲಭ್ಯವಿದ್ದು ಮನಾಲಿಯಿಂದ ಲೇಹನ ಗುಡ್ಡಗಾಡು ಪ್ರದೇಶಗಳು, ಗುಜರಾತ್, ರಾಜಸ್ಥಾನದ ಮರಳುಗಾಡು, ಹುಲಿಗಳಿಂದ ಸಮೃದ್ಧವಾಗಿರುವ ಮಧ್ಯಭಾರತದ ಕಾಡುಗಳು, ಕೊಂಕಣದ ಬೀಚ್, ಗೋವಾ ಹೀಗೆ ಅನೇಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಪ್ಯಾಕೇಜ್ ಲಭ್ಯವಿದೆ. ಇವುಗಳಲ್ಲದೆ ಕರ್ನಾಟಕದ ಭೀಮೇಶ್ವರಿ, ಕಬಿನಿ, ಹಂಪಿ, ಬಂಡೀಪುರಕ್ಕೂ ಕ್ಯಾರವಾನ್ ಪ್ರವಾಸ ಕೈಗೊಳ್ಳಬಹುದು.

ಕೋವಿಡ್ ಸಮಯದ ಏಕತಾನತೆಯನ್ನು ದೂರವಾಗಿಸಿ ನಮ್ಮಿಷ್ಟದ ಪ್ರವಾಸಿ ತಾಣಗಳನ್ನು ಸುರಕ್ಷಿತವಾಗಿ ಆತಂಕರಹಿತವಾಗಿ ಆನಂದಿಸಲು ಕ್ಯಾರಾವಾನ್ ಪ್ರವಾಸ ಸೂಕ್ತವಾಗಿದೆ.

-ಡಾ.ಸ್ಮಿತಾ ಜೆ ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.