ಕೋಟೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಯಾವ ಊರಿಗಾದರೂ ಹೋಗಲಿ ಅಥವಾ ರಾಜ್ಯಕ್ಕಾದರೂ ಹೋಗಲಿ ಮೊದಲು ಕೋಟೆ ಇದೆಯೇ ಎಂದು ಖಾತ್ರಿಪಡಿಸಿಕೊಂಡು ಭೇಟಿ ಕೊಡುತ್ತೇನೆ. ಅದೇನೋ ಗೊತ್ತಿಲ್ಲ. ಯಾವ ಕೋಟೆಗಳಿಗೆ ಹೋದರೂ ಕುದುರೆಗಳು ಓಡುವ ಸದ್ದು, ಸೈನಿಕರು ಸಾಲಾಗಿ ನಡೆದುಕೊಂಡು ಬರುವ ಸದ್ದು, ಮಾರುಕಟ್ಟೆಯಲ್ಲಿನ ಸದ್ದು- ಹೀಗೆ ಎಲ್ಲವೂ ಕ್ಷಣದಲ್ಲಿ ಕಿವಿಯಲ್ಲಿ ಹಾದು ಹೋಗುತ್ತವೆ!

ಕೋಟೆಯು ರಕ್ಷಣೆಯ ಆವರಣವಿರುವ ಪ್ರದೇಶ. ದಿಬ್ಬ, ಗುಡ್ಡಗಳ ಎತ್ತರದ ಭಾಗಗಳಲ್ಲಿ ಕಟ್ಟುವುದು ವಾಡಿಕೆ. ಯುದ್ಧ ಸನ್ನಿವೇಶಗಳಲ್ಲಿ ಇಂತಹ ಆಯಕಟ್ಟಿನ ಕೋಟೆಗಳ ಸೌಕರ್ಯಗಳೆಂದರೆ ಎತ್ತರ ಸ್ಥಳದಲ್ಲಿ ಇರುವುದರಿಂದ ಶತ್ರುವಿನ ವಿರುದ್ಧ ಸಹಜವಾಗಿ ಒದಗುವ ರಕ್ಷಣೆ, ಸುತ್ತಲೂ ವ್ಯಾಪಿಸಿರುವ ವಿಸ್ತಾರ ತಗ್ಗುಪ್ರದೇಶದ ಮೇಲೆ ಲಭಿಸುವ ಪ್ರಭುತ್ವ. ನೆಲದ ಕಾದಾಟದಲ್ಲಿ ಸಹ ಕೋಟೆಯ ಮಹತ್ವ ಕಡಿಮೆ ಆಗಿಲ್ಲ. ಮುಖ್ಯವಾಗಿ ಕೋಟೆ ಯುದ್ಧಗತಿಯ ನಿಯಂತ್ರಣ ಕೇಂದ್ರವಾಗಿ ಯುದ್ಧ ವ್ಯವಸ್ಥೆಯ ಕೇಂದ್ರವಾಗಿ ಪ್ರಾಮುಖ್ಯ ಪಡೆದಿದೆ.

ಈ ಬಾರಿ ನಾನು ಭೇಟಿ ಕೊಟ್ಟಿದ್ದು ಹೈದರಾಬಾದ್ ಸಮೀಪವಿರುವ ಗೋಲ್ಕೊಂಡ ಕೋಟೆಗೆ. ಗೋಲ್ಕೊಂಡ ಹೆಸರೇ ಹೇಳುವ ಹಾಗೆ ‘ಗೊಲ್ಲರ ಕೊಂಡ’. ಕೊಂಡ ಎಂದರೆ ಎತ್ತರವಾದ ಪ್ರದೇಶ. ಪಶುಗಳನ್ನು ಮೇಯಿಸುವವರು ಎತ್ತರವಾದ ಈ ಪ್ರದೇಶಕ್ಕೆ ಬರುತ್ತಿದ್ದರಿಂದ ಇದಕ್ಕೆ ಗೋಲ್ಕೊಂಡ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

ಹೈದರಾಬಾದ್ ನಗರದ ಪಶ್ಚಿಮಕ್ಕೆ ಹನ್ನೊಂದು ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಸ್ಥಳವೇ ಗೋಲ್ಕೊಂಡ. 1518-1687ರವರೆಗೆ ಇದು ಕುತುಬ್ಶಾಹಿ ಸುಲ್ತಾನರು ಕಟ್ಟಿ ಆಳಿದ ‘ಗೋಲ್ಕೊಂಡ’ ರಾಜ್ಯದ ರಾಜಧಾನಿಯಾಗಿತ್ತು. ಗೋದಾವರಿ ನದಿಯ ಕೆಳದಂಡೆಯ ಪ್ರದೇಶದಿಂದ ಬಂಗಾಳ ಕೊಲ್ಲಿಯವರೆಗೆ ವ್ಯಾಪಿಸಿದ್ದ ರಾಜ್ಯಕ್ಕೆ ಗೋಲ್ಕೊಂಡವೆಂಬ ಹೆಸರಿತ್ತು. ಕಾಕತೀಯರ ರಾಜ್ಯದ ಭಾಗವಾಗಿದ್ದ ಈ ಪ್ರದೇಶವನ್ನು ಅಲ್ಲಾವುದ್ದೀನ್ ಖಿಲ್ಜಿ 1310ರಲ್ಲಿ ಆಕ್ರಮಿಸಿಕೊಂಡ. ಇದು 1424-25ರವರೆಗೆ ಸ್ವತಂತ್ರ ಅಸ್ತಿತ್ವ ಹೊಂದಿದ್ದಾಗ ಬಹಮನಿಗಳ ವಶವಾಯಿತು. ಬಹಮನಿ ರಾಜ್ಯದ ಪೂರ್ವ ಪ್ರಾಂತ್ಯಕ್ಕೆ ವಾರಂಗಲ್ ರಾಜಧಾನಿಯಾಗಿತ್ತು. ಈ ಪ್ರಾಂತ್ಯದ ಅಧಿಕಾರಿಯಾಗಿದ್ದ ಕುಲಿ ಕುತುಬ್ ಷಾ 1512ರಲ್ಲಿ ಸ್ವತಂತ್ರ ಸುಲ್ತಾನನಾದ. ಗೋಲ್ಕೊಂಡ ಅವನ ರಾಜಧಾನಿಯಾಯಿತು. 1687ರಲ್ಲಿ ಈ ರಾಜ್ಯವನ್ನು ಔರಂಗಜೇಬ್ ಗೆದ್ದುಕೊಂಡ. ಗೋಲ್ಕೊಂಡ ಮೊಘಲ್ ಚಕ್ರಾಧಿಪತ್ಯದ ಭಾಗವಾಯಿತು. ಗೋಲ್ಕೊಂಡದ ಬಳಿ ದೊರಕುತ್ತಿದ್ದ ವಜ್ರಗಳಿಂದಾಗಿ ಅದು ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.

ಗೋಲ್ಕೊಂಡ ಕೋಟೆ ದಕ್ಷಿಣ ಭಾರತದ ಪ್ರಸಿದ್ಧವಾದ ಹಾಗೂ ಬೃಹತ್ತಾದ ಕೋಟೆಗಳಲ್ಲೊಂದು. 400 ಅಡಿ ಎತ್ತರದ ಗ್ರಾನೈಟ್ ಗುಡ್ಡದ ಮೇಲೆ ಕಟ್ಟಲಾದ, ಸುಮಾರು ಏಳು ಕಿಲೋಮೀಟರ್ ಸುತ್ತಳತೆಯುಳ್ಳ ಮೂರು ಸುತ್ತಿನ ಈ ಅಭೇದ್ಯ ಕೋಟೆ 8 ದ್ವಾರಗಳಿಂದಲೂ 87 ಕೊತ್ತಲುಗಳಿಂದಲೂ ಕೂಡಿದ ಅದ್ಭುತ ನಿರ್ಮಿತಿಯಾಗಿದೆ. ಹೊರಸುತ್ತಿನ ಕೋಟೆಗೋಡೆಯು ಪಟ್ಟಣವನ್ನು ಆವರಿಸಿದ್ದು, ಈ ಗೋಡೆಯ ಸುತ್ತಲೂ ಕಂದಕವಿದೆ. ಆಳವಾದ ಕಂದಕದಂಚಿನಲ್ಲಿರುವ ವೃತ್ತ-ಅರೆವೃತ್ತಾಕಾರದ ಎಲ್ಲ ಕೊತ್ತಲುಗಳ ಮೇಲೆ ಪಿರಂಗಿಗಳನ್ನು ನೆಲೆಗೊಳಿಸಿದ್ದು, ಅದು ಶತ್ರು ದಾಳಿಗೆ ಕಂಟಕಪ್ರಾಯವಾಗಿತ್ತು. ಮಧ್ಯದ ಸುತ್ತಿನಲ್ಲಿ ಅವಳಿ ಗೋಡೆಗಳಿದ್ದು ಇವು ಗುಡ್ಡದ ಬುಡಭಾಗವನ್ನು ಸುತ್ತುವರೆದಿವೆ. ಒಳಗಿರುವ ರಾಜ ನಿವಾಸಕ್ಕೆ ಈ ಗೋಡೆಗಳು ಪ್ರಬಲ ರಕ್ಷಣೆಯನ್ನು ಒದಗಿಸಿದ್ದವು.

ಒಳಸುತ್ತಿನ ಕೋಟೆಯನ್ನು ಗುಡ್ಡದ ಮೇಲ್ಭಾಗದಲ್ಲಿ, ನೈಸರ್ಗಿಕ ಬಂಡೆಗಳನ್ನು ಬಳಸಿಕೊಂಡು ಅವುಗಳ ರಚನಾಕಾರಗಳಿಗೆ ಅನುಗುಣವಾಗಿ, ಅಲ್ಲಲ್ಲಿ ಕಲ್ಗೋಡೆಗಳ ಆಸರೆಯೊಂದಿಗೆ ಕಟ್ಟಲಾಗಿದೆ. 1724ರಲ್ಲಿ ಪಟ್ಟಣದ ವಾಯವ್ಯ ಭಾಗದಲ್ಲಿ ಹೊರಗೋಡೆಯನ್ನು ವಿಸ್ತರಿಸಿ ನಯಾಕಿಲಾವನ್ನು ರಚಿಸಲಾಯಿತು. ಗುಡ್ಡದ ಮಧ್ಯಭಾಗದಲ್ಲಿ ಕೆರೆಗಳು, ಮದ್ದಿನ ಮನೆಗಳು, ರಾಜಗೃಹ, ಸಭಾಮಂದಿರ, ಲಾಯ, ಮಸೀದಿ, ಉದ್ಯಾನವನ ಹಾಗೂ ಉಗ್ರಾಣಗಳಿವೆ. ಬುಡಭಾಗದಲ್ಲಿ ರಾಣಿ ನಿವಾಸಗಳು, ಸೇವಕರ ವಾಸಗೃಹಗಳೂ ಇವೆ. ಕೋಟೆಗೆ ಸ್ವಲ್ಪ ದೂರದಲ್ಲಿ ಕುತುಬ್ ಶಾಹಿ ದೊರೆಗಳ ಗೋರಿಗಳಿವೆ.
ಫತೇಹ್, ಬಹಮನಿ, ಮೆಕ್ಕ, ಪಟನ್ಚೆರು, ಬಂಜಾರ, ಜಮಾಲಿ, ನಯಾಕಿಲಾ ಮತ್ತು ಮೋತಿ ಇವು ಎಂಟು ದ್ವಾರಗಳು. ಈ ದ್ವಾರಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಡಲಾಗಿದ್ದು ಒಂದು ದ್ವಾರದಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಅದರ ಶಬ್ದ ಪ್ರತಿಧ್ವನಿಸಿ ಮತ್ತೊಂದು ದ್ವಾರದವರೆಗೆ ತಲುಪುವುದು. ಹೀಗೆ ಸೂಚನೆಗಳನ್ನು ಹೊರದ್ವಾರದಿಂದ ಗುಡ್ಡದ ತುತ್ತತುದಿಯವರೆಗೆ ಇತರರಿಗೆ ಕೇಳದ ರೀತಿಯಲ್ಲಿ ವರ್ಗಾಯಿಸುವಂತೆ ಈ ಕೋಟೆಯನ್ನು ನಿರ್ಮಿಸಿರುವುದು ಆ ಕಾಲದ ತಂತ್ರಜ್ಞರ ವಾಸ್ತುಕೌಶಲಕ್ಕೆ ಅನುಪಮ ಉದಾಹರಣೆ.

ಗೋಲ್ಕೊಂಡ ಕೋಟೆಯಲ್ಲಿ ‘ರತ್ನ’ಗಳನ್ನು ವ್ಯಾಪಾರ ಮಾಡುತ್ತಿದ್ದರಂತೆ. ಹಾಗಾಗಿ ಇದು ಸಮೃದ್ಧತೆಯನ್ನು ಹೊಂದಿತ್ತೆಂಬುದರಲ್ಲಿ ಸಂಶಯವೇ ಇಲ್ಲ. ಬ್ರಿಟಿಷ್ ಅಧಿಕಾರಿ ಸರ್ ಥಾಮಸ್ ಮನ್ರೋ ಈ ಕೋಟೆಯನ್ನು ವಜ್ರದ ಗಣಿ, ರತ್ನಗರ್ಭವೆಂದು ಕರೆದಿದ್ದಾನೆ. ಈ ಕೋಟೆಯಲ್ಲಿ ಅಡಗಿರಬಹುದಾದ ಅಭೇದ್ಯ ಸತ್ಯಗಳು ಏನಿವೆಯೋ ತಿಳಿಯದು. ಆದರೆ ಶತಶತಮಾನಗಳಿಂದ ಅನೇಕ ಐತಿಹ್ಯಗಳಿಗೆ ಮೌನವಾಗಿ ಸಾಕ್ಷಿಯಾಗಿ ನಿಂತಿರುವ ಈ ಕೋಟೆಯನ್ನು ಇತಿಹಾಸ ಪ್ರಿಯರು ನೋಡಲೇಬೇಕು. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.