ಶುಕ್ರವಾರ, ಡಿಸೆಂಬರ್ 9, 2022
21 °C

ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸದ ಪ್ಲಾನ್‌ ಈಡೇರಬೇಕಾದರೆ ಏನು ಮಾಡಬೇಕು? ಟಿಪ್ಸ್

ಅರುಣ್ ಕೆ ಚಿಟ್ಟಿಲಪಿಲ್ಲಿ Updated:

ಅಕ್ಷರ ಗಾತ್ರ : | |

ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸವಿಲ್ಲದ ಜೀವನ ಶೂನ್ಯಕ್ಕೆ ಸಮಾನ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಬದುಕಿನಲ್ಲಿ ಎಷ್ಟೇ ದುಡಿದರೂ ಪ್ರವಾಸಕ್ಕೆತೆರಳದೆ ಹೋದರೆ ಅದು ವ್ಯರ್ಥವೇ ಸರಿ. ನಮ್ಮ ವಯಸ್ಸಿಗನುಗುಣವಾಗಿ ಪ್ರವಾಸಕ್ಕೆ ತೆರಳುವುದರಿಂದ ಜೀವನದ ಒತ್ತಡ ನಿವಾರಣೆಯಾಗುತ್ತದೆ.

ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆಗೆ ಪ್ರವಾಸ ಮದ್ದು ಎಂದರೂ ತಪ್ಪಾಗಲಾರದು. ಇತ್ತೀಚೆಗೆ ಖಾಸಗಿ ಕಂಪನಿಯೊಂದು ತಮ್ಮ ಎಂಪ್ಲಾಯಿಗಳ ಮಾನಸಿಕ ಆರೋಗ್ಯಕ್ಕಾಗಿಯೇ ಬರೋಬ್ಬರಿ 11 ದಿನಗಳ ರಜೆಯನ್ನು ಪ್ರವಾಸಕ್ಕಾಗಿಯೇ ನೀಡಿರುವುದು ಮಾನಸಿಕ ನೆಮ್ಮದಿಗೆ ಪ್ರವಾಸ ಎಷ್ಟು ಮುಖ್ಯ ಎಂಬುದು ಅರಿವಾಗಲಿದೆ.

ಹೀಗಾಗಿ ಪ್ರತಿಯೊಬ್ಬರು ತಮ್ಮ ದುಡಿಮೆ, ಬದುಕಿನ ಜಂಜಾಟದ ನಡುವೆ ಪ್ರವಾಸಕ್ಕೆ ತೆರಳು ಪ್ಲಾನ್‌ ಮಾಡುವುದನ್ನು ಬಿಡಬಾರದು. ಪ್ರತಿಬಾರಿಯೂ ಪ್ರವಾಸಕ್ಕೆಂದು ಪ್ಲಾನ್‌ ಮಾಡಿದರೂ ಅದು ಈಡೇರುವುದಿಲ್ಲ ಎಂಬುದು ಕೆಲವರ ದೂರು. ಇದಕ್ಕೂ ಕೆಲವು ಟಿಪ್ಸ್‌ಗಳಿವೆ. 

ಪ್ರವಾಸ ಮುಂದೂಡುವುದನ್ನು ನಿಲ್ಲಿಸಿ
ಶೇ.70ರಷ್ಟು ಜನರು ಭಾರತದಲ್ಲಿ ಪ್ರವಾಸಕ್ಕೆಂದು ಯೋಜನೆ ರೂಪಿಸಿದ್ದರೂ ಕೆಲ ಕಾರಣಗಳಿಗೆ ಆ ಪ್ರವಾಸ ಮುಂದೂಡತ್ತಲೇ ಬರುತ್ತಾರೆ. ಕೊನೆಗೊಮ್ಮೆ ಈ ಪ್ರವಾಸ ರದ್ದಾಗಿಬಿಡುತ್ತದೆ. ಈ ಹವ್ಯಾಸವನ್ನು ಮೊದಲು ನಿಲ್ಲಿಸಬೇಕು. ಪ್ರವಾಸಕ್ಕೆಂದು ಪ್ಲಾನ್‌ ಮಾಡುವ ಮನಸ್ಥಿತಿ ನಿಮ್ಮ ತಂಡದ ಸದಸ್ಯರು ಅಥವಾ ಕುಟುಂಬ ಸದಸ್ಯರಲ್ಲೂ ಇರಬೇಕು. ಇಲ್ಲವಾದರೆ, ತಂಡದ ಒಬ್ಬರು ಪ್ರವಾಸ ಪ್ಲಾನ್ ಮಾಡಲು ಬಿಡಬೇಕು. ಇದರಿಂದ ನಿಮ್ಮ ಪ್ರವಾಸ ಸಾಕಾರಗೊಳ್ಳಲಿದೆ. 

ತಿಂಗಳಿಗೊಂದು ಟ್ರಿಪ್‌ ಇರಲಿ

ಎಷ್ಟು ತಿಂಗಳಿಗೊಮ್ಮೆ ಟ್ರಿಪ್‌ ಹೋಗಬೇಕು ಎಂಬುದರ ಬಗ್ಗೆ ಗೊಂದಲ ಇದ್ದೇ ಇರುತ್ತೆ, ಕೆಲವು ಅಧ್ಯಯನಗಳ ಪ್ರಕಾರ ತಿಂಗಳಿಗೊಮ್ಮೆ ಹತ್ತಿರ ಪ್ರವಾಸ ಕೈಗೊಳ್ಳುವುದು ಮಾನಸಿಕವಾಗಿ ಒಳ್ಳೆಯದು. ಇದು ನಿಮ್ಮ ಮನಸ್ಸನ್ನು ಸದಾ ಉಲ್ಲಾಸದಿಂದ ಇಡಲಿದ್ದು, ನಿಮ್ಮ ಜೀವನ ಮಟ್ಟವನ್ನು ಸುಧಾರಿಸಲಿದೆ. ಇದು ಸಾಧ್ಯವಾಗದೇ ಹೋದರೆ ಕನಿಷ್ಠ 3 ತಿಂಗಳಿಗೊಮ್ಮೆ ಪ್ರವಾಸ ಪ್ಲಾನ್‌ ಮಾಡುವುದು ಒಳ್ಳೆಯದು. ದೂರದೂರುಗಳಿಗೆ ಅಥವಾ ವಿದೇಶಿ ಪ್ರವಾಸವಿದ್ದರೆ, ವರ್ಷಕ್ಕೊಂದರಂತೆ ಪ್ಲಾನ್‌ ಮಾಡುವುದು ಒಳ್ಳೆಯದು,

ಟ್ರಾವೆಲ್‌ ರಿವೇಂಜ್‌ ತೀರಿಸಿಕೊಳ್ಳಿ

ಕಳೆದೆರಡು ವರ್ಷಗಳಿಂದ ಕೋವಿಡ್‌ ಕಾರಣದಿಂದಾಗ ಸಾಕಷ್ಟು ಜನರು ಪ್ರವಾಸಕ್ಕೆ  ತೆರಳಿರಲಿಲ್ಲ. ಇದು ದೈಹಿಕ ಹಾಗೂ ಮಾನಸಿಕವಾಗಿ ಜನರನ್ನು ಕಟ್ಟಿ ಹಾಕಿತ್ತು. ಆದರೆ ಈಗ ಈ ಸಾಂಕ್ರಮಿಕ ರೋಗ ಪಿಡುಗು ನಿಯಂತ್ರಣದಲ್ಲಿದೆ. ಹೀಗಾಗಿ ಕಳೆದೆರಡು ವರ್ಷದಿಂದ ನಿಮ್ಮ ಬಕೆಟ್‌ ಲಿಸ್ಟ್‌ನಲ್ಲಿರುವ ಪ್ರವಾಸಗಳನ್ನು ಈ ವರ್ಷದೊಳಗೆ ಪೂರ್ತಿಗೊಳಿಸಿಕೊಳ್ಳಲು ಪ್ಲಾನ್‌ ಮಾಡಬಹುದು.

ಡಿಸೆಂಬರ್‌ನಲ್ಲಿ ಪ್ಲಾನ್‌ ಇರಲಿ

ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಲ್ಲಿ ರಜೆಗಳು ಸಿಗಲಿವೆ. ಈ ಸಮಯದಲ್ಲಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ಟ್ರಿಪ್‌ ಪ್ಲಾನ್‌ ಮಾಡಲು ಸೂಕ್ತ ಸಮಯ. ಆದರೆ, ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಟ್ರಿಪ್‌ ಪ್ಲಾನ್‌ ಮಾಡುವುದರಿಂದ ಹೆಚ್ಚು ಜನನಿಭಿಡ ಪ್ರದೇಶಗಳನ್ನು ಅವೈಡ್‌ ಮಾಡುವುದು ಒಳ್ಳೆಯದು. ಏಕಾಂತವಾಗಿ ಪ್ರಕೃತಿಯನ್ನು ಸವಿಯುವಂತ ಟ್ರಿಪ್‌ ಪ್ಲಾನ್‌ ಮಾಡುವುದು ಒಳ್ಳೆಯದು.

ರಜಾ ದಿನಗಳನ್ನು ಮನೆಯಲ್ಲಿ ಕಳೆಯದಿರಿ

ಸಾಕಷ್ಟು ಕುಟುಂಬಸ್ಥರು ರಜಾ ದಿನವೆಂದರೆ ಅವರ ದೈನಂದಿನ ಕೆಲಸಗಳಲ್ಲಿಯೇ ಕಳೆದುಬಿಡುತ್ತಾರೆ. ಪ್ರವಾಸದ ಯೋಜನೆ ಹಾಕುವ ಕೆಲಸ ನಮ್ಮ ಮನಸ್ಸಿಗೆ ಬಿಟ್ಟದ್ದು. ರಜಾ ದಿನಗಳನ್ನು ಮನೆಯಲ್ಲಿಯೇ ಕಳೆಯುವುದರ ಬದಲು, ಬಜೆಟ್‌ ಪ್ಲಾನ್‌ ಮಾಡಿಕೊಂಡು ಪ್ರವಾಸಕ್ಕೆ ತೆರಳುವುದರಿಂದ ಹೊಸತನವನ್ನು ಅನುಭವಿಸಲು ಸಾಧ್ಯವಾಗಲಿದೆ.  ಹೀಗಾಗಿ ಈ ಪ್ರವಾಸೋದ್ಯಮ ದಿನದಂದು ಪ್ರತಿ ವರ್ಷ ಪ್ರವಾಸಕ್ಕೆ ತೆರಳುವ ಪ್ರಮಾಣ ಸ್ವೀಕರಿಸಿ, ಉಲ್ಲಾಸದಾಯಕ ಜೀವನ ಕಳೆಯಿರಿ.

–––

ಲೇಖನ

- ಅರುಣ್ ಕೆ ಚಿಟ್ಟಿಲಪಿಲ್ಲಿ, ವ್ಯವಸ್ಥಾಪಕ ನಿರ್ದೇಶಕ, ವಂಡರ್ಲಾ ಹಾಲಿಡೇಸ್ ಲಿಮಿಟೆಡ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು