ಹಿಮಾಲಯ ಚಾರಣ ಹಲವರ ಜೀವಮಾನದ ಕನಸಾಗಿರುತ್ತದೆ. ಇದಕ್ಕಾಗಿ ಪ್ರತಿ ಕ್ಷಣವೂ ಹಂಬಲಿಸುತ್ತಲೇ ಇರುತ್ತಾರೆ. ಆದರೆ, ಈ ಲೇಖಕರು ಅನಿರೀಕ್ಷಿತವಾಗಿ ಚಾರಣಕ್ಕೆ ಹೊರಡುತ್ತಾರೆ. ಅಲ್ಲಿ ತಮಗಾದ ಅನುಭವವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಚಾರಣದ ವೇಳೆ ತಂಪಾಗಿರುವ ಇಂತಹ ನದಿಗಳನ್ನು ದಾಟುವುದು ಸುಲಭದ ಮಾತಲ್ಲ...
ಹೀಗೆ ಬನ್ನಿ...ಇಲ್ಲಿ ನಿಂತು ಕಣಿವೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ
ಪೇಸ್ ಮೇಕರ್ ವ್ಯಕ್ತಿಯೂ...
ಈ ಬಾರಿಯ ತಂಡದಲ್ಲಿ 17 ವರ್ಷದವರಿಂದ 68 ವರ್ಷದವರೆಗಿನ ವಿವಿಧ ವಯೋಮಾನದವರಿದ್ದರು. ಮತ್ತೊಂದು ವಿಶೇಷ ಎಂದರೆ ನಾಲ್ಕು ವರ್ಷದ ಹಿಂದೆ ಹೃದಯಕ್ಕೆ ಪೇಸ್ ಮೇಕರ್ ಅಳವಡಿಸಿಕೊಂಡಿದ್ದ 52 ವಯಸ್ಸಿನ ಸುಬ್ಬರಾಜು ನಮ್ಮೊಂದಿಗೆ ಇದ್ದರು. ಪೇಸ್ ಮೇಕರ್ ಹಾಕಿಸಿಕೊಂಡಿರುವುದು ಅವರ ಚಾರಣದ ಉತ್ಸಾಹಕ್ಕೇನೂ ಅಡ್ಡಿಯಾಗಿರಲಿಲ್ಲ. ಅತ್ಯಂತ ಉತ್ಸಾಹದಿಂದಲೇ ಅವರೂ ಚಾರಣ ಮುಗಿಸಿದರು.
ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿರುವ ಚಂದ್ರತಾಲ್ ಸರೋವರ