ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌: ಮನೆಗೆ ಹೊಸ ಸ್ಪರ್ಶ

Last Updated 24 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕ್ರಿ ಸ್‌ಮಸ್‌ಗಾಗಿ ಮನೆಗೆ ಹೊಸ ಕಳೆ ನೀಡಲು ಹೋಮ್‌ ಡೆಕೋರ್‌ ಹೊಸ ವಿನ್ಯಾಸ ಮತ್ತು ಪರಿಕಲ್ಪನೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ.

ಹೊಸ ಬಗೆಯ ದಟ್ಟ ಬಣ್ಣಗಳು, ಮಂದ ಬೆಳಕು, ಹೊಸ ವಿನ್ಯಾಸದಿಂದ ಸಾಂಪ್ರದಾಯಿಕ ಮನೆಗೆ ಹೋಮ್ ಡೆಕೋರ್‌ ಸಂಪೂರ್ಣ ಹೊಸ ಲುಕ್‌ ನೀಡುತ್ತದೆ. ಪರಿಸರ ಸ್ನೇಹಿ ಸಾಮಗ್ರಿ, ಆಧುನಿಕ ಸೌಲಭ್ಯಗಳನ್ನು ಬಳಸಿ ಅಡುಗೆಮನೆ, ವರಾಂಡ, ಡ್ರಾಯಿಂಗ್‌ ರೂಂ, ಬೆಡ್‌ರೂಂಗಳಿಗೆ ನೀಡಿರುವ ಸಮಕಾಲೀನ ಸ್ಪರ್ಶ ಗಮನ ಸೆಳೆಯುತ್ತವೆ.

ಬೆಡ್‌ರೂಂಗಳಿಗೆ ವುಡನ್‌ ಫ್ಲೋರಿಂಗ್‌, ಹ್ಯಾಂಡ್‌ಮೇಡ್‌ ರಗ್‌ ಮತ್ತು ಬ್ಲಾಂಕೆಟ್‌, ಗೋಡೆಗಳಿಗೆ ದಟ್ಟವಾದ ನೀಲಿ, ಕಡುಗಪ್ಪು ನೇರಳೆ ಮತ್ತು ಹಸಿರು ಬಣ್ಣಗಳು ಮನಕ್ಕೆ ಮುದ ನೀಡುತ್ತವೆ. ಅಡುಗೆ ಮನೆಗೆ ಬೆಳಕು ನೀಡುವ ಆಧುನಿಕ ತಂತ್ರಜ್ಞಾನ ವಿದ್ಯುತ್‌ ದೀಪಗಳು, ಆಕರ್ಷಕ ವಿನ್ಯಾಸದ ಅಡುಗೆ ಸಾಮಗ್ರಿಗಳು ಕ್ರಿಸ್‌ಮಸ್‌ ಖುಷಿಯನ್ನು ಇಮ್ಮಡಿಗೊಳಿಸುತ್ತವೆ.

ಮನೆಯ ಅಲಂಕಾರ ಮಾಡಲು ಹೀಗೊಂದಿಷ್ಟು ಟಿಪ್ಸ್‌ ನಿಮಗಾಗಿ.

ಈ ಋತುವಿನಲ್ಲಿ ನಿಮ್ಮ ಮನೆಗಳನ್ನು ವಿಶಿಷ್ಟ ಅಲಂಕರಣಗಳ ಕಲ್ಪನೆಯೊಂದಿಗೆ ಶೃಂಗರಿಸಿ. ಸಾಂಪ್ರದಾಯಿಕ ನೋಟದಿಂದ ಹೊರಬಂದು, ಗ್ರಾಮೀಣ ಸೊಗಡಿನ ಬಣ್ಣದ ಪ್ಯಾಲೆಟ್ ಹಾಗೂ ಪರಿಸರ ಸ್ನೇಹಿ ಪರಿಕರಗಳಿಂದ ಅಲಂಕರಿಸಿ. ಮನೆಯ ಒಳಾಂಗಣ ಹಬ್ಬದ ಸಂಭ್ರಮವನ್ನು ಪ್ರತಿಬಿಂಬಿಸುವಂತಿರಲಿ.

1. ಆಕರ್ಷಕ ವರ್ಣ ಹಾಗೂ ಟೀಲೈಟ್‌ಗಳ ಲಯದಿಂದ ಹೊರಬನ್ನಿ: ಮನೆಗಳನ್ನು ಚಿನ್ನದ ಬಣ್ಣದ ದೀಪಗಳೊಂದಿಗೆ ಬೆಳಗಿ. ಮರ ಹಾಗೂ ಹೂಮಾಲೆಗಳು ಸಂಭ್ರಮದ ಉಲ್ಲಾಸವನ್ನು ಬಿಂಬಿಸಿ ಹಬ್ಬದ ಋತುವಿಗೆ ವಿಶೇಷ ಮೆರುಗು ನೀಡಲಿ. ಸರಳವಾದ ದಾರ ಅಥವಾ ದೀಪಗುಚ್ಛದೊಂದಿಗೆ ನಿಮ್ಮ ಹೂದಾನಿಗಳನ್ನು ನಿಮಗೆ ಬೇಕಾದಂತೆ ಅಲಂಕರಿಸಿ. ಇದನ್ನು ಪ್ರವೇಶದ್ವಾರದ ಟೇಬಲ್‌ನಲ್ಲಿ ಇಡುವ ಮೂಲಕ ಆಪ್ತವಾದ ವಾತಾವರಣ ಸೃಷ್ಟಿಸಿ.

2. ಸಾಂಪ್ರದಾಯಿಕ ಶೈಲಿಯ ಕೆಂಪು ಹಾಗೂ ಹಸಿರು ಬಣ್ಣದ ಬದಲು ಬಣ್ಣದ ಕಡ್ಡಿ ಮತ್ತು ತೀವ್ರ ಕಡುಬಣ್ಣ ಇರಲಿ: ಕಡುಬಣ್ಣಗಳನ್ನು ಸೂಕ್ತವಾಗಿ ಜೋಡಿಸಿಕೊಂಡರೆ ಹಬ್ಬದ ಋತುವಿನಲ್ಲಿ ಆಕರ್ಷಕ ವರ್ಣಗಳು ದಿಟ್ಟ ಆಯ್ಕೆ ಎನಿಸಿಕೊಳ್ಳಬಹುದು. ಕಡು ನೀಲಿ, ಹಚ್ಚ ಹಸಿರು, ನೇರಳೆ ಮತ್ತು ಜಲವರ್ಣದ ರಂಗು ಆರಾಮದಾಯಕ. ಇದು ಹಬ್ಬದ ರಾತ್ರಿಗೆ ಬಣ್ಣತುಂಬಲಿ. ಹಿಮಮಿಶ್ರಿತ ನೀಲಿ ಮತ್ತು ಮಂಜು ಮುಸುಕಿದ ಬಿಳಿಯ ಬಣ್ಣ, ವಿಶೇಷವಾಗಿ ಕ್ರಿಸ್‌ಮಸ್ ಅಲಂಕರಣಕ್ಕೆ ಪರಿಪೂರ್ಣ ಜೋಡಿ ಬಣ್ಣಗಳು.

3. ಮರುಹಾಸು, ಕರಕುಶಲ ರಗ್ಗು ಮತ್ತು ಹೊದಿಕೆಗಳು ಅಂತರ್ಗತವಾಗಿರಲಿ: ಪರಿಪೂರ್ಣ ಗ್ರಾಮ್ಯ ಸೊಗಡಿನ ಅಲಂಕರಣಕ್ಕೆ ಹದಮಾಡಿದ ಮರಹಾಸಿನ ಹಿನ್ನೆಲೆ ವಿಶೇಷ ಮೆರುಗು ನೀಡುವುದು. ಮೆದುವಾದ ಫರ್ ರೇಖೆಗಳು ಮತ್ತು ಕ್ಯಾಂಡಲ್‌ಯುಕ್ತ ಲಾಟೀನುಗಳು ಈ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಕೆಂಪು ಹಸಿರುಯುಕ್ತ ಹೊದಿಕೆಗಳನ್ನು ಹಾಸಿಗೆಯ ಮೇಲೆ ನಯವಾಗಿ ಅಲಂಕರಿಸಬಹುದು. ಜತೆಯಾಗಿ ಪುಟ್ಟ ಅಂಗವಸ್ತ್ರಗಳು ಇಡೀ ವಾತಾವರಣವನ್ನು ಆತ್ಮೀಯ ಆಹ್ವಾನವನ್ನಾಗಿ ಪರಿವರ್ತಿಸುತ್ತವೆ.

4. ಕರಕುಶಲ ಅಲಂಕರಣದೊಂದಿಗೆ ಪರಿಸರಸ್ನೇಹಿಯಾಗುವಂತೆ ಮಾಡಿ: ಹಬ್ಬಕ್ಕೆ ತಾಜಾ ಹಸಿರು ಬೊಕ್ಕೆ, ಹೂಮಾಲೆಯನ್ನು ಬಳಸುವ ಜತೆಗೆ ಕ್ರಿಸ್‌ಮಸ್ ಬೆಲ್‌ಗಳಿಗೆ ನಿಂಬೆ, ಕಿತ್ತಳೆ ಬಳಸಿ. ಇದು ನಿಚ್ಚಳವಾಗಿ ನಿಮ್ಮ ಮನೆಗೆ ಸುಂದರ ಸಹಜ ನೋಟವನ್ನು ನೀಡುತ್ತದೆ ಹಾಗೂ ಇದರ ಘಮ ಮನೆಯಲ್ಲಿ ಪಸರಿಸುತ್ತಿರುತ್ತದೆ. ಒಂದಷ್ಟು ಹಳ್ಳಿಸೊಗಡಿನ ಸ್ಪರ್ಶವನ್ನು ಕ್ರಿಸ್‌ಮಸ್ ಅಲಂಕಾರಕ್ಕೆ ಬಳಸಿ ಪೈನ್‌ಕೋನ್, ಕತ್ತರಿಸದ ಮರಗಿಡ ಅಥವಾ ಬೆರ‍್ರಿಗಳನ್ನು ಬಳಸುವುದರಿಂದ ನಿಮ್ಮ ಕ್ರಿಸ್‌ಮಸ್ ಅಲಂಕಾರ ವಿಶಿಷ್ಟವಾಗುತ್ತದೆ.

5. ಯೋಚನಾಬದ್ಧ ಟೇಬಲ್ ಸ್ಥಳಾವಕಾಶದೊಂದಿಗೆ ಅತಿಥಿಗಳಿಗೆ ಅಚ್ಚರಿ ನೀಡಿ: ರಸವತ್ತಾದ ಭಕ್ಷ್ಯಗಳು ಮತ್ತು ಪಾನೀಯಗಳು ಕ್ರಿಸ್‌ಮಸ್ ಆಚರಣೆಯ ಭಾಗ. ಇದು ರಜೆಯ ಸೀಸನ್‌ನಲ್ಲಿ ಸ್ನೇಹಿತರು ಹಾಗೂ ಕುಟುಂಬದವರನ್ನು ಒಂದೆಡೆ ಸೇರಿಸುವಲ್ಲಿ ಸಹಕಾರಿ.

ಆದ್ದರಿಂದ ಟೇಬಲ್ ಸ್ಥಳಾವಕಾಶವನ್ನು ಹೆಚ್ಚು ಆಸಕ್ತಿದಾಯಕ ಹಾಗೂ ಪ್ರಖರ ಬಣ್ಣದ ಹತ್ತಿ ಅಥವಾ ಲೆನಿನ್‌ನಿಂದ ಅಲಂಕರಿಸುವುದು ಅಗತ್ಯ. ಇದರ ಜತೆಗೆ ಮರುಬಳಕೆ ಮಾಡಬಹುದಾದ ನ್ಯಾಪ್ಕಿನ್, ಮರದ ಟೇಬಲ್‌ಹಾಸು ಹಾಗೂ ಮೌಲ್ಡ್ ಮಾಡಲಾದ ಮರದ ಟ್ರೇಗಳು ಆಕರ್ಷಕ ಸೊಗಡು ಮತ್ತು ಚಳಿಗಾಲದ ನೋಟಕ್ಕೆ ಕಾರಣವಾಗುತ್ತವೆ. ಮಧ್ಯಭಾಗದಲಿ ಪೈನ್‌ಕಾರ್ನ್, ಹಸಿರು ಜರಿಗಿಡಗಳು ಮತ್ತು ಬೆರ‍್ರಿ, ಎತ್ತರದ ನಿಲುಮೆಯ ಕ್ಯಾಂಡಲ್‌ಗಳು ವಿಶಿಷ್ಟ ಸೊಬಗನ್ನು ನೀಡುತ್ತವೆ. ಪ್ರಖರ ಹೊಳೆಯುವ ಕಟ್ಲೇರಿ ಹಾಗೂ ಗಾಜಿನ ದಾನಿಗಳು ಇಡೀ ವ್ಯವಸ್ಥೆಗೆ ಮೆರುಗು ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT