ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮಟ್ಟದ ಮನರಂಜನಾ ವೇದಿಕೆ

Last Updated 23 ಡಿಸೆಂಬರ್ 2019, 15:28 IST
ಅಕ್ಷರ ಗಾತ್ರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾಗತಿಕ ಮಟ್ಟದ ಸಂಗೀತ ಮತ್ತು ಮನರಂಜನಾ ವೇದಿಕೆ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ.

ನ್ಯೂಯಾರ್ಕ್‍ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಮತ್ತು ಲಂಡನ್‍ನ ಒ-2ಅರೆನಾ ಮಾದರಿಯಲ್ಲಿ ದೇಶದ ಮೊದಲ ಬಹುಪಯೋಗಿ ವೇದಿಕೆ ಸಿದ್ಧಪಡಿಸಲು ಕೆಂಪೇಗೌಡ ವಿಮಾನ ನಿಲ್ದಾಣದ ಕ್ಯಾಂಪಸ್‍ನಲ್ಲಿ 6.3ಎಕರೆ ಸ್ಥಳ ನಿಗದಿ ಮಾಡಲಾಗಿದೆ. ಇಲ್ಲಿ ಸಂಗೀತ ಕಛೇರಿ, ಅಂತರರಾಷ್ಟ್ರೀಯ ಉತ್ಸವ, ಸಮ್ಮೇಳನ, ಸಾಂಸ್ಥಿಕ ಸಮಾರಂಭ, ಅಂತರರಾಷ್ಟ್ರೀಯ ಕ್ರೀಡಾಕೂಟ ಆಯೋಜನೆಗೆ ಅನುಕೂಲವಾಗುವಂತೆ ಆಧುನಿಕ ಮತ್ತು ಹವಾಮಾನ ನಿಯಂತ್ರಿತ ವೇದಿಕೆ ರೂಪಗೊಳ್ಳಲಿದೆ ಎನ್ನುತ್ತಾರೆ ಫೇಸ್-1ಎಕ್ಸ್‌ಪೀರಿಯನ್ಸ್ ಸಂಸ್ಥೆ ಸಂಸ್ಥಾಪಕ ಓಂ ಪ್ರದತ್.

‌ದೇಶದ ಅತಿದೊಡ್ಡ ನೇರಪ್ರಸಾರ ವೇದಿಕೆಯನ್ನು ಫೇಸ್-1 ಎಕ್ಸ್‌ಪೀರಿಯನ್ಸ್ ಮತ್ತು ಎಂಬಾಸಿ ಗ್ರುಪ್‌ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ವಿಶ್ವದಲ್ಲಿ 200 ಮನೋರಂಜನೆ ವೇದಿಕೆ ಹೊಂದಿರುವ ಲೈನ್‍ನೇಷನ್ ಸಂಸ್ಥೆ ತಜ್ಞರ ಸಲಹೆ ಪಡೆಯಲಾಗುವುದು. ಈ ವೇದಿಕೆ ಮೂಲಕ ದಕ್ಷಿಣ ಏಷ್ಯಾ ಭಾಗದ ಎಲ್ಲ ಕಲಾವಿದರು ಮತ್ತು ಪ್ರೇಕ್ಷಕರನ್ನು ಸೆಳೆಯಲಾಗುವುದು. ವೇದಿಕೆ ಸಾಂಸ್ಕತಿಕ ರಾಯಭಾರಿಯಾಗಿ ನಿಖಿಲ್ ಚಿನ್ನಪ್ಪ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT