ಮಂಗಳವಾರ, ಜನವರಿ 21, 2020
29 °C

ಮಾನವೀಯ ನೆರವಿಗಾಗಿ ‘ಹನ್ಸಿಕಾ’ ನೃತ್ಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನಸಿಕ ರೋಗಗಳಿಗೆ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಹಾಗೂ ಸುಲಭವಾಗಿ ಸೈಕೋಥೆರಪಿ ದೊರೆಯುವಂತೆ ಮಾಡುತ್ತಿರುವ ಲಾಭೇತರ ಸಂಸ್ಥೆಯಾಗಿರುವ ಹಂಕ್ ನನ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಿ15ರಂದು ಒಡಿಸ್ಸಿ ಬ್ಯಾಲೆ ನೃತ್ಯ ಹನ್ಸಿಕಾ ನಡೆಯಲಿದೆ.

ರಿಚ್ಮಂಡ್ ಟೌನ್‌ನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ಸಂಜೆ 6.30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜಲಿ ನೃತ್ಯ ಸಂಸ್ಥೆಯ ಶರ್ಮಿಳಾ ಮುಖರ್ಜಿ ಹಾಗೂ ಅವರ ಶಿಷ್ಯ ಬಳಗ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಹನ್ಸಿಕಾ ರೂಪಕವು ರಷ್ಯಾದ ಬ್ಯಾಲೆ ‘ಸ್ವಾನ್ ಲೇಕ್’ನ ಒಡಿಸ್ಸಿ ನೃತ್ಯ ರೂಪಾಂತರ. ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಮಾನಸಿಕ ಕಾಯಿಲೆಗಳಿಂದ ಮುಕ್ತಿ ಪಡೆದವರ ಪುನಶ್ಚೇತನ ಹಾಗೂ ಪೋಸ್ಟ್ ಟ್ರಾಮ್ ಕೇರ್ ಉದ್ದೇಶಕ್ಕೆ ಬಳಸಲಾಗುವುದು.

ಹಂಕ್ ನನ್ ಇನ್‌ಸ್ಟಿಟ್ಯೂಟ್‌ನ ಉತ್ಸಾಹಿಗಳು ಮಾನಸಿಕ ಸಮಸ್ಯೆಗಳಿಗಿರುವ ಚಿಕಿತ್ಸೆಯ ಬಗ್ಗೆ ಸಾರ್ವಜನಿಕಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದೀರ್ಘ ಹಾಗೂ ಅಲ್ಪಾವಧಿ ಕಾರ್ಯಕ್ರಮಗಳ ಮೂಲಕ ಮಾನಸಿಕ ಸಮಸ್ಯೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಸುಲಭವಾಗಿ ಚಿಕಿತ್ಸೆ ದೊರಕಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಶರ್ಮಿಳಾ ಮುಖರ್ಜಿ ಹಾಗೂ ತಂಡ ಪ್ರದರ್ಶಿಸಲಿರುವ ಹನ್ಸಿಕಾ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದ ಮೂಲಕ ಪಾಶ್ಚಿಮಾತ್ಯ ಶಾಸ್ತ್ರೀಯ ಥೀಮ್ ಅನ್ನು ಪ್ರದರ್ಶಿಸಲಿದೆ. ಪ್ರಣಯ ಮತ್ತು ವಂಚನೆಯೆರಡೂ ಸೇರಿರುವ ಕಥಾನಕದ ನೃತ್ಯರೂಪಕವನ್ನು ‘ಹನ್ಸಿಕಾ’ ಪ್ರಸ್ತುತಪಡಿಸಲಿದೆ. ರಾಜಕುಮಾರ ಸೀಗ್ ಫ್ರೈಡ್‌ ಮತ್ತು ಒಡೆಟ್(ಮಾಟಗಾತಿಯೊಬ್ಬಳ ಕುತಂತ್ರದಿಂದಾಗಿ ಹಂಸವಾಗಿ ಬದಲಾದ ರಾಜಕುಮಾರಿ) ನಡುವಿನ ಪ್ರೇಮಾಂಕುರದ ಕಥನವನ್ನು ಈ ಪ್ರದರ್ಶನದ ಕಟ್ಟಿಕೊಡಲಿದೆ.

ರಷ್ಯಾದ ಬ್ಯಾಲೆಯಲ್ಲಿರುವ ಮನಮೋಹಕ ಚಲನೆ ಮತ್ತು ಕಣ್ಮನ ಸೆಳೆಯುವ ಭಂಗಿಗಳನ್ನು ಒಡಿಸ್ಸಿಗೆ ಹೊಂದುವಂತೆ ಹನ್ಸಿಕಾದಲ್ಲಿ ಮರುಸೃಷ್ಟಿಸಲಾಗಿದೆ. ಒಡಿಸ್ಸಿಯ ವಾಸ್ತುಶಿಲ್ಪದಂಥ ಭಂಗಿಗಳು ಮತ್ತು ಸೂಕ್ಷ್ಮ ಹೆಜ್ಜೆಗಳು ಸಹಜವಾಗಿಯೇ ಬ್ಯಾಲೆಗೆ ಹೊಂದಾಣಿಕೆಯಾಗುವಂತಿದೆ. ವೇದಿಕೆಯ ಅಲಂಕಾರ, ವಸ್ತ್ರವಿನ್ಯಾಸಗಳು ಹಾಗೂ ಸಂಗೀತವನ್ನು ಮೂಲ ಸಂಯೋಜನೆಯನ್ನೇ ಪ್ರತಿಬಿಂಬಿಸುವಂತೆ ನಿಖರವಾಗಿ ಸಿದ್ಧಪಡಿಸಲಾಗಿದೆ. ಹನ್ಸಿಕಾಗೆ ಸಂಗೀತ ಸಂಯೋಜಿಸಿದ್ದು ಪ್ರವೀಣ್ ಡಿ. ರಾವ್.

ಸ್ಥಳ: ರಿಚ್ಮಂಡ್ ಟೌನ್‌ನಲ್ಲಿರುವ ಗುಡ್ ಶೆಫರ್ಡ್ ಆಡಿಟೋರಿಯಂ. ಡಿ15 ಭಾನುವಾರ ಸಂಜೆ 6.30ಕ್ಕೆ.

ಟಿಕೆಟ್: ₹750ರಿಂದ ಮೇಲ್ಪಟ್ಟು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು