ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಇಂದು ‘ಮಹಮೂದ್ ಗಾವಾನ್’

Last Updated 15 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಸಾಹಿತಿ ಚಂದ್ರಶೇಖರ್ ಕಂಬಾರರ ಹೊಸ ನಾಟಕ ‘ಮಹಮೂದ್ ಗಾವಾನ್’ (ರಂಗರೂಪ-ನಿರ್ದೇಶನ: ಬಿ.ಸುರೇಶ) ಡಿ.16ರಂದು ರಂಗಕ್ಕೇರುತ್ತಿದೆ. ‘ಪ್ರಯೋಗರಂಗ’ ಈ ನಾಟಕವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಪ್ರದರ್ಶಿಸುತ್ತಿದೆ.

‘ಮಹಮೂದ್ ಗಾವಾನ್’ ನಾಟಕ: ಬಹುಮನಿ ಸುಲ್ತಾನರ ಕಾಲದ ಚರಿತ್ರೆಯನ್ನು ಬಿಚ್ಚಿಡುತ್ತಾ ಸಮಕಾಲೀನ ಸ್ಥಿತಿಯಲ್ಲಿ ಸೌಹಾರ್ದ, ಸಾಮರಸ್ಯದ ಅಗತ್ಯವನ್ನು ತಿಳಿಸುವ ನಾಟಕ. ಅಸ್ಪೃಶ್ಯತೆಯ ಕರಾಳ ಮುಖ ಅತ್ಯಂತ ಪರಿಣಾಮಕಾರಿಯಾಗಿ ಮಾನವೀಯ ಕಾಳಜಿಯಿಂದ ಈ ನಾಟಕದಲ್ಲಿ ಮೂಡಿ ಬಂದಿದೆ. ಸಾಮಾಜಿಕ ವೈರುಧ್ಯವನ್ನು ಚಿತ್ರಿಸುವ, ಅದನ್ನು ಮೀರುವ ಹೊಸ ಕನಸು ಇಲ್ಲಿ ಅನಾವರಣಗೊಂಡಿದೆ.
ಈ ನಾಟಕದಲ್ಲಿ ಚಿತ್ರಿಸಿರುವ ದಲಿತಪರ, ರೈತಪರ ಆಶಯ ಅತ್ಯಂತ ಸಹಜವಾಗಿದೆ. ಜಾತೀಯತೆ, ಕಂದಾಚಾರಗಳಿಂದ ಕಂಗೆಟ್ಟಿರುವ ಸಮಾಜದಲ್ಲಿ ಭಾವೈಕ್ಯತೆಯ ಬೆಳಕನ್ನು ಚೆಲ್ಲುವ ವಿಶಿಷ್ಟ ನಾಟಕವಿದು.

ರಂಗವಿನ್ಯಾಸ: ಶಶಿಧರ ಅಡಪ, ವಸ್ತವಿನ್ಯಾಸ: ಪ್ರಮೋದ್ ಶಿಗ್ಗಾಂವ್, ಸಂಗೀತ: ರವೀಂದ್ರ ಸೊರಗಾಂವಿ, ಸಂಗೀತ ನಿರ್ವಹಣೆ: ಭರತ್ ಕುಮಾರ್, ಸಹ ನಿರ್ದೇಶನ: ಜಗದೀಶ್ ಜಾಲ ಮತ್ತು ಸೂರ್ಯಕುಮಾರಿ, ನಿರ್ವಹಣೆ: ಮಯಬ್ರಹ್ಮಾಚಾರ್, ಬೆಳಕು ವಿನ್ಯಾಸ: ಮಂಜು ನಾರಾಯಣ್, ಸಂಚಾಲಕರು: ಕೆ.ವಿ. ನಾಗರಾಜಮೂರ್ತಿ, ಪ್ರಸಾಧನ: ರಾಮಕೃಷ್ಣ ಬೆಳ್ತೂರ್, ನಿರ್ವಹಣೆ: ಸಂಗೀತ ಜೇಮ್ಸ್.

ಪ್ರಸ್ತುತಿ: ‘ಪ್ರಯೋಗ ರಂಗ’.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಡಿ16, ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT