ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತ ಸಾಗುತ್ತಿದೆ ಗೃಹ ರಿಯಾಲ್ಟಿ?

Last Updated 7 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಸಾಕಷ್ಟು ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಬೆಂಗಳೂರಿನ ಗೃಹ ರಿಯಾಲ್ಟಿ ಮಾರುಕಟ್ಟೆಕಳೆದ ವರ್ಷ ಉತ್ತಮ ಸಾಧನೆ ಮಾಡಿದೆ. 2019ರಲ್ಲಿ ಗರಿಷ್ಠ ಮನೆಗಳನ್ನು ಮಾರಾಟ ಮಾಡಿದ ದೇಶದ ಎರಡನೇ ಮೆಟ್ರೊ ನಗರವಾಗಿ ಹೊರಹೊಮ್ಮಿದೆ.

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ‘ಟ್ರೆಸ್ಪೆಕ್ಟ್‌’ ಬಿಡುಗಡೆ ಮಾಡಿದ ಹಿನ್ನೋಟ ವರದಿಯಲ್ಲಿ ದೇಶದ ರಿಯಲ್‌ ಎಸ್ಟೇಟ್‌ ಮತ್ತು ಬೆಂಗಳೂರಿನ ಗೃಹ ರಿಯಾಲ್ಟಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಒಳ್ಳೆಯ ಅಂಶಗಳಿವೆ. 2019ರಲ್ಲಿ 50,450 ಮನೆಗಳನ್ನು ಮಾರಾಟ ಮಾಡುವ ಮೂಲಕ ಬೆಂಗಳೂರುಗೃಹ ರಿಯಾಲ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.80,869 ಮನೆ ಮಾರಾಟ ಮಾಡಿದ ಮುಂಬೈ ಮೊದಲ ಸ್ಥಾನದಲ್ಲಿದೆ.

2018ಕ್ಕೆ ಹೋಲಿಸಿದರೆ ಕಳೆದ ಸಾಲಿನಲ್ಲಿ ಬೆಂಗಳೂರು ಮನೆ ಮಾರಾಟ ಮಾರುಕಟ್ಟೆ ಶೇ 18ರಷ್ಟು ಕುಸಿತ ಕಂಡಿದೆ. 2018ರಲ್ಲಿ 57 ಸಾವಿರ ಮನೆಗಳು ಮಾರಾಟ ಮಾಡಲಾಗಿತ್ತು. ವಿಮಾನ ನಿಲ್ದಾಣ, ವಾಣಿಜ್ಯ ಚಟುವಟಿಕೆ ಮತ್ತು ಮೂಲಸೌಕರ್ಯಗಳಿಂದಾಗಿ ಬೆಂಗಳೂರು ಉತ್ತರ ಭಾಗದಲ್ಲಿ ವಾಣಿಜ್ಯ ಮತ್ತು ಗೃಹ ರಿಯಾಲ್ಟಿ ಮಾರುಕಟ್ಟೆ ಭಾರಿ ಬೆಳವಣಿಗೆ ಕಾಣುತ್ತಿದೆ ಎಂದು ವರದಿ ಹೇಳಿದೆ.

ಲಕ್ಸುರಿ (₹80–₹1.50 ಕೋಟಿ) ಮತ್ತು ಅಲ್ಟ್ರಾ ಲಕ್ಸುರಿ (₹1.50 ಕೋಟಿ–₹2.5 ಕೋಟಿ) ಮನೆಗಳಿಗಿಂತ ಮಧ್ಯಮ ವರ್ಗದವರ ಕೈಗೆ ಟಕುವ ಬೆಲೆ (₹40 ಲಕ್ಷಕ್ಕಿಂತ ಕಡಿಮೆ) ಮನೆಗಳಿಗೆ ಬೇಡಿಕೆ ಹೆಚ್ಚಿದೆ.

ಮುನ್ನೋಟ: ಆರ್ಥಿಕ ಬೆಳವಣಿಗೆ ಕುಂಠಿತ ಮತ್ತು ಮಾರು ಕಟ್ಟೆಯಲ್ಲಿ ಕಡಿಮೆ ಹಣಕಾಸು ಹರಿವಿನಿಂದಾಗಿ ಬೆಂಗಳೂರು ಗೃಹ ರಿಯಾಲ್ಟಿ ಮಾರುಕಟ್ಟೆ ಎರಡು ವರ್ಷಗಳಲ್ಲಿ ಭಾರಿ ಏರಿಳಿತ ಕಂಡಿರಲಿಲ್ಲ. ಎರಡು ವರ್ಷಗಳ ಮಂದಗತಿಯ ಬೆಳವಣಿಗೆ ಯಿಂದ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. 2019ರಲ್ಲಿ ಮಾರಾಟ ಕುಸಿತ ಕಂಡರೂ, ಪೂರೈಕೆ ವೇಗ ಪಡೆದುಕೊಂಡಿತ್ತು. ಮುಂಬರುವ ವರ್ಷದಲ್ಲಿ ಪೂರೈಕೆ ಮತ್ತು ಮಾರಾಟ ಪ್ರಮಾಣ ಸುಧಾರಿಸಲಿದೆ ಎಂದು ಟ್ರೆಸ್ಪೆಕ್ಟ್‌ ಸಂಸ್ಥೆಯ ಸಿಇಒ ಸುನಿಲ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಒಟ್ಟು ಮನೆಗಳಲ್ಲಿ 2020ರ ಅಂತ್ಯದ ವೇಳೆಗೆ ಶೇ 50ರಷ್ಟು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ದಾಸ್ತಾನು ಓವರ್‌ಹ್ಯಾಂಗ್‌ ಕಡಿಮೆ ಮಾಡಿ, ಮಾರಾಟ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ರಿಯಲ್‌ ಎಸ್ಟೇಟ್‌ ಚಿಂತಾಜನಕ

ನೋಟು ರದ್ದು ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾದ ನಂತರ ಮೊದಲ ಪರಿಣಾಮ ಗೋಚರಿಸಿದ್ದೆ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ ರಿಯಲ್‌ ಎಸ್ಟೇಟ್‌ ವಲಯದಲ್ಲಿ. 2017ರ ನಂತರ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಭಾರಿ ಕುಸಿತ ಕಂಡಿದೆ. ರಿಯಲ್ ಎಸ್ಟೇಟ್‌ ಉದ್ಯಮ ಭಾರಿ ನಷ್ಟದಲ್ಲಿರುವ ಕಾರಣ ಅನೇಕ ಕಂಪನಿಗಳು ಬಾಗಲು ಮುಚ್ಚುವ ಸ್ಥಿತಿಗೆ ತಲುಪಿವೆ. ಪ್ರಸಕ್ತ ಬಜೆಟ್‌ನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಕೊಡುಗೆ ನೀಡಬಹುದೆಂಬ ನಿರೀಕ್ಷೆ ಹುಸಿ ಹೋಗಿದೆ. ಕೆಲವು ರಿಯಲ್‌ ಎಸ್ಟೇಟ್‌ ಉದ್ಯಮಗಳು ವಿದೇಶಗಳಿಗೆ ವಲಸೆ ಹೋಗುತ್ತಿವೆ. ಭಾರತದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಹಣ ಹೂಡಲು ವಿದೇಶದ ಉದ್ಯಮಿಗಳು ಹಿಂಜರಿಯುತ್ತಿದ್ದಾರೆ. ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ನಿರ್ಮಾಣಗೊಂಡಿರುವ ಅನೇಕ ಅಪಾರ್ಟ್‌ಮೆಂಟ್‌ಗಳು ಖಾಲಿ ಬಿದ್ದಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳು ಇನ್ನೂ ನಿರಾಶದಾಯಕವಾಗಿರುತ್ತವೆ. ಏಪ್ರಿಲ್‌ ನಂತರ ಇನ್ನೂ ಅನೇಕ ರಿಯಲ್‌ ಎಸ್ಟೇಟ್‌ ಕಂಪನಿಗಳು ವಹಿವಾಟು ಸ್ಥಗಿತಗೊಳಿಸುವ ಸಾಧ್ಯತೆಗಳು ಗೋಚರಿಸುತ್ತಿದೆ ಎನ್ನುತ್ತಾರೆರೈಟ್‌ವೇ ಪ್ರೊಜೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಅಧ್ಯಕ್ಷರಾದಟಿ.ಸಿ. ಬಾಬುರೆಡ್ಡಿ.

ಜನರ ಬಳಿ ದುಡ್ಡಿಲ್ಲ

ಜನರ ಬಳಿ ದುಡ್ಡಿಲ್ಲ. ದುಡ್ಡಿದ್ದವರು ಧಾರಾಳವಾಗಿ ಖರ್ಚು ಮಾಡುತ್ತಿಲ್ಲ. ಜನರು ಲಕ್ಸುರಿ ಜೀವನಶೈಲಿಯಿಂದ ಹೊರ ಬರುತ್ತಿದ್ದಾರೆ. ಮನೆ ಕೊಂಡುಕೊಳ್ಳಲು ಹಿಂಜರಿ ಯುತ್ತಿದ್ದಾರೆ. ನಿರ್ಮಾಣ ವಾಗಿರುವ ಸಾವಿರಾರು ಮನೆಗಳು ಖಾಲಿ ಬಿದ್ದಿವೆ. ರಿಯಲ್‌ ಎಸ್ಟೇಟ್‌ ಕಂಪನಿಗಳು ನೀಡುತ್ತಿರುವ ಅಂಕಿ, ಸಂಖ್ಯೆ ಮತ್ತು ವಾಸ್ತವ ಸ್ಥಿತಿಗೆ ಭಾರಿ ವ್ಯತ್ಯಾಸವಿದೆ ಎನ್ನುವುದುಇನ್ಫಿನಿಟಿ ಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕರಾದಅಬು ಸೂಫಿಯಾನ್‌ ಅವರ ಮಾತು.

ಗೃಹ ನಿರ್ಮಾಣ ಮಾರಾಟದ ಸ್ಥಿತಿಗತಿ

* ಕಳೆದ ವರ್ಷ ಬೆಂಗಳೂರಿನಲ್ಲಿ ಹೆಚ್ಚಿನ ಮನೆಗಳು ಮಾರಾಟವಾಗಿದ್ದು ದಕ್ಷಿಣ ಮತ್ತು ಪಶ್ಚಿಮ ವಲಯದಲ್ಲಿ.

* ಬೆಂಗಳೂರು ಉತ್ತರ ಭಾಗದಲ್ಲಿ ಮಾರಾಟಕ್ಕಿಂತ ನಿರ್ಮಾಣವಾದ ಮನೆಗಳ ಪ್ರಮಾಣ ಹೆಚ್ಚು.

* 2018ಕ್ಕೆ ಹೋಲಿಸಿದರೆ ಕಳೆದ ವರ್ಷ ಬೆಂಗಳೂರು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಮನೆ ಮಾರಾಟ ಕುಸಿತ ದಾಖಲಿಸಿದೆ.

* ಕಳೆದ ಸಾಲಿನಲ್ಲಿ ಮಾರಾಟವಾಗದೆ ಉಳಿದ ಮನೆಗಳ ಪ್ರಮಾಣ ಶೇ 23. 2018ರಲ್ಲಿ ಇದು ಶೇ 17ರಷ್ಟಿತ್ತು.

* 2019ರಲ್ಲಿ ಮೆಟ್ರೊ ನಗರಗಳ ಪೈಕಿ ಬೆಂಗಳೂರಿನಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆ 15 ತಿಂಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT