ಇಲ್ಲಿ ಹೇಳಹೊರಟಿರುವ ಗಾಂಧೀಜಿಗೂ, ಪತ್ರಿಕೆಗಳಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಪ್ರಜಾವಾಣಿ ಪತ್ರಿಕೆ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಜತೆ ಪತ್ರಿಕೆ ಇರಲೇಬೇಕು. ಈ ಹವ್ಯಾಸ 14 ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಂ! ಇವರು ಮಹಾತ್ಮ ಗಾಂಧಿ ಅಲ್ಲ; ಅವರನ್ನೇ ಹೋಲುವ ಜೂನಿಯರ್ ಗಾಂಧಿ...

ರಾಮನಗರ ಜಿಲ್ಲೆ ಮಾಯಗಾನಹಳ್ಳಿಯ ಅಪ್ಪಾಜಾಚಾರ್ ಅವರ ಮೊಮ್ಮಗ ಎಂ.ಎನ್. ಚಂದ್ರಶೇಖರ ಆಚಾರ್ ಅವರು ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ನಾಲ್ಕನೇ ದರ್ಜೆ ಉದ್ಯೋಗಿಯಾಗಿ ನಿವೃತ್ತರಾದವರು. ಸದ್ಯ ಯಶವಂತಪುರದಲ್ಲಿ ವಾಸ. ಇವರಿಗೆ ವಯಸ್ಸು 70ರ ಆಸು ಪಾಸು. ವಿಶೇಷ ಎಂದರೆ ಥೇಟ್ ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧೀಜಿಯಂತೇ ಇದ್ದಾರೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳಂದು ಇವರು ‘ಗಾಂಧೀಜಿ’ ಆಗುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ‘ಗಾಂಧಿ’ ವೇಷ ತೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇವರ ಇನ್ನೊಂದು ಹವ್ಯಾಸ ಪತ್ರಿಕೆ ಸಂಗ್ರಹ. ‘ಪ್ರಜಾವಾಣಿ’ ಇವರಿಗೆ ಅಚ್ಚು ಮೆಚ್ಚು.

1997ಜನವರಿಯಿಂದ ಇಲ್ಲಿಯವರೆಗಿನ ಪ್ರಜಾವಾಣಿಯ ಪ್ರತಿಯೊಂದು ಸಂಚಿಕೆಯನ್ನೂ ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಆಸಕ್ತರಿಗೆ ಉಚಿತವಾಗಿ ಓದಲು ಕೊಡುತ್ತಾರೆ. ಮನೆ ಮುಂದೆ ‘ಪ್ರಜಾವಾಣಿ’ ಪತ್ರಿಕೆ ಇಲ್ಲಿ ದೊರೆಯುತ್ತದೆ ಎಂದು ಫಲಕವನ್ನೂ ಹಾಕಿಸಿದ್ದಾರೆ. ‘ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಚಂದ್ರಶೇಖರ್. ಆದರೆ ಮನೆಯಲ್ಲಿ ಸ್ಥಳದ ಅಭಾವ. ಹೀಗಾಗಿ ಸಂಗ್ರಹಿಸಿಟ್ಟಿರುವ ಪತ್ರಿಕೆಗಳನ್ನು ಮಾರುವ ಪ್ರಸಂಗವೂ ಬರಬಹುದೇನೋ ಎನ್ನುವ ಆತಂಕ ಅವರದು.

ಗಾಂಧಿತತ್ವ ಬೋಧನೆ ಇವರ ಮತ್ತೊಂದು ಹವ್ಯಾಸ. ಇವರು ರಾಜ್ಯಾದ್ಯಂತ ಸಂಚರಿಸಿ ಶಾಲಾ ಕಾಲೇಜುಗಳಲ್ಲಿ ಗಾಂಧಿ ತತ್ವಗಳನ್ನು ಬೋಧಿಸುತ್ತಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ಶಾಸ್ತ್ರಿ ವೇಷಧಾರಿಯಾಗಿ ಮಕ್ಕಳನ್ನು ರಂಜಿಸುತ್ತಾರೆ. ಇದರಿಂದಾಗಿಯೇ ಅವರನ್ನು ‘ಅಭಿನವ ಗಾಂಧಿ’ ಎಂದು ಜನರು ಪ್ರೀತಿಯಿಂದ ಕರೆಯುತ್ತಾರಂತೆ.

ಇವರಿಗೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಜೊತೆಗೆ ಸರ್ಕಾರದ ವತಿಯಿಂದ ಉಚಿತ ಬಸ್ಪಾಸ್ ಸಿಕ್ಕಿದೆ. ಇದರಿಂದ ಗಾಂಧಿ ತತ್ವ ಪ್ರಚಾರದ ಕಾಯಕಕ್ಕೆ ಸಹಾಯವಾಗಿದೆ ಎನ್ನುತ್ತಾರೆ ಚಂದ್ರಶೇಖರ ಆಚಾರ್. ಈ ಇಳಿವಯಸ್ಸಿನಲ್ಲೂ ಚುರುಕಾದ ಮಾತು, ಚಟುವಟಿಕೆಯಿಂದ ಕೂಡಿರುವ ಚಂದ್ರಶೇಖರ್ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಈ ಜೂನಿಯರ್ ಗಾಂಧಿಗೆ ಹ್ಯಾಟ್ಸ್ ಆಫ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.