ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಐಬಿಎಸ್ ಅಲುಮ್ನಿ ಫೆಡರೇಷನ್ (ಐಬಿಎಸ್‌ಎಎಫ್) ಈ ಸಲ ಬೋಧನಾ ವಿಭಾಗದಲ್ಲಿ ಅಧ್ಯಾಪಕ ಪ್ರೊ.ಆರ್. ಹರೀಶ್ ಮತ್ತು ಸಮರ್ ಇಂಟರ್ನ್‌ಶಿಪ್ ಪ್ರಾಜೆಕ್ಟ್‌ನಲ್ಲಿ ವಿದ್ಯಾರ್ಥಿಗಳಾದ ರಾಬಿನ್ ಜೋಸೆಫ್ ಹಾಗೂ ಅನುರ್ಗಾ ಸೊಯಿನ್ ಅವರಿಗೆ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಿತು.

ಬೋಧನಾ ಪ್ರಶಸ್ತಿ 1 ಲಕ್ಷ ರೂ. ನಗದು ಮತ್ತು ಸನ್ಮಾನ ಪತ್ರ, ಎಸ್‌ಐ ಪ್ರಶಸ್ತಿ 10 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

ಕನಕಪುರ ರಸ್ತೆಯಲ್ಲಿನ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜು ಐಬಿಎಸ್ ಕ್ಯಾಂಪಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ರವಿ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಿದರು. ಐಬಿಎಸ್ ಬೆಂಗಳೂರಿನ ಹಳೆಯ ವಿದ್ಯಾರ್ಥಿಗಳಾದ ರೈಟ್ ಹೊರೈಜನ್ಸ್ ಸಂಸ್ಥಾಪಕ ಅನಿಲ್ ರೇಗೊ, ಫಿನಾಕಲ್ ಸಿಇಒ ಸಿದ್ಧಾರ್ಥ ನಾಯರ್ ಹಾಜರಿದ್ದರು.

ಉತ್ತಮ ಬೋಧನೆ ಮತ್ತು ಉತ್ತಮ ಕಲಿಕೆಗೆ ಪ್ರೇರಣೆ ನೀಡುವುದೇ ಐಬಿಎಸ್‌ನ ಧ್ಯೇಯ ಎಂದು ಬೆಂಗಳೂರು ಕೇಂದ್ರದ ನಿರ್ದೇಶಕಿ ಡಾ.ಲತಾ ಚಕ್ರವರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.