ಚಿನ್ನದ ಮಾರುಕಟ್ಟೆ ಇದೀಗ ಮೈಕೊಡವಿ ಅಕ್ಷಯ ತೃತೀಯಕ್ಕೆ ಸಜ್ಜಾಗುತ್ತಿದೆ. ಚಿನ್ನದ ಗಟ್ಟಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡ ಕಾರಣ ಬುಲಿಯನ್ ಸ್ಟ್ರೀಟ್ ಅಂತ ಕರೆಸಿಕೊಳ್ಳೋ ಮುಂಬೈನ ಚಿನಿವಾರಪೇಟೆ ಅಕ್ಷರಶಃ ಸ್ತಬ್ಧವಾಗಿತ್ತು.

ಪ್ರತಿಭಟನೆ ಮುಗಿದು ಮಾರುಕಟ್ಟೆ ವ್ಯವಹಾರ ಈಗ ಯಥಾವತ್ ನಡೆಯುತ್ತಿದ್ದರೂ ಬೇಡಿಕೆಗೆ ತಕ್ಕ ಪೂರೈಕೆ ಆಗುತ್ತಿಲ್ಲ ಎಂಬ ವಾಸ್ತವ ಗುಟ್ಟಾಗೇನೂ ಉಳಿದಿಲ್ಲ. ಅಂದಹಾಗೆ, ಅಕ್ಷಯ ತೃತೀಯಕ್ಕೂ ಒಂದು ಮುಹೂರ್ತವಿದೆ. ಈ ಬಾರಿ ಏ. 23ರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ಈ ಮುಹೂರ್ತ ಮರುದಿನ ಪೂರ್ತಿ ಇರುತ್ತದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಮತ್ತೆ ಹಬ್ಬದ ಕಳೆ. ಗ್ರಾಹಕರು ಮತ್ತು ಅವರ ನೆಪದಲ್ಲಿ ಬ್ರ್ಯಾಂಡ್/ಮಳಿಗೆಗಳು ಈ ವರ್ಷದ ಚಿನ್ನದ ಬೆಳೆಯ ಕೊಯ್ಲಿನ ಪ್ರತೀಕ್ಷೆಯಲ್ಲಿದ್ದಾರೆ. ಮುಟ್ಟಿದ್ದೆಲ್ಲ ಚಿನ್ನವಾಗಲೆಂದೋ, ಅಂದುಕೊಂಡಿದ್ದೆಲ್ಲ ಅಕ್ಷಯವಾಗಲಿ ಎಂದೋ ಆಸೆಪಡುವ ಮಹತ್ವಾಕಾಂಕ್ಷಿಗಳಿಗೆ ಅಕ್ಷಯ ತೃತೀಯದಂದು ಆಭರಣ ಇಲ್ಲವೇ ಚಿನ್ನದ ನಾಣ್ಯವನ್ನಾದರೂ ಕೊಂಡರೆ ತಮ್ಮ ಒಡವೆಗಳ ಲಾಕರ್ ತುಂಬಿ ತುಳುಕುವುದು ಖಚಿತ ಎಂಬ ನಂಬಿಕೆ. ಈ ನಂಬಿಕೆಯೇ ತಾನೇ ಚಿನ್ನದ ಮಾರುಕಟ್ಟೆಯ ಗ್ರಾಫ್ ವರ್ಷದಿಂದ ವರ್ಷಕ್ಕೆ ಏರಲು ಮೂಲ ಕಾರಣ?

ರೋಹಿಣಿ ನಕ್ಷತ್ರದಲ್ಲಿ ಅಕ್ಷಯ ತೃತೀಯ ಬಂದರೆ ದಿನದ ಮೌಲ್ಯ ಒಂದು ತೂಕ ಹೆಚ್ಚಂತೆ. ಬುಧವಾರವಿದ್ದರಂತೂ ಮುಪ್ಪಟ್ಟು ಅನ್ನುತ್ತಾರೆ. ಆದರೆ ಈ ಬಾರಿ ಏಪ್ರಿಲ್ 24ರಂದು (ಮಂಗಳವಾರ) ದಿನವಿಡೀ ಅಕ್ಷಯದ ಮುಹೂರ್ತವಿರುವುದು ವಿಶೇಷ. ವೈಶಾಖ ಮಾಸದ ಅಮವಾಸ್ಯೆಯಿಂದ ಮೂರನೇ ದಿನವೇ ಅಕ್ಷಯ ತದಿಗೆ.

ಗ್ರಾಹಕ ಲೋಕದ ನಂಬಿಕೆಯನ್ನೇ ಮಾರಾಟ ತಂತ್ರವಾಗಿಸಿಕೊಂಡ ಮಾರುಕಟ್ಟೆಯಲ್ಲಿ ಈ ಚಿನ್ನದ ಹಬ್ಬದ ದಿನದ ಹಿನ್ನೆಲೆ, ಮುನ್ನೆಲೆಯಲ್ಲಿ ಚಿನ್ನದ ಬೆಲೆಯ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ.

ತಮ್ಮ ಬಜೆಟ್ನ ಇತಿಮಿತಿಯಲ್ಲೇ ಖರೀದಿ ಮಾಡಿಯೋ, ಉತ್ತಮ ದರಕ್ಕೆ ಬಿಕರಿಯಾಗುತ್ತಿರುವ ಹಳೆಯ ಚಿನ್ನವನ್ನು ಮಾರಿಯೋ ತಮ್ಮ ನಿರೀಕ್ಷೆಗಳನ್ನು ಕೈಗೆಟುಕಿಸಿಕೊಳ್ಳುವ ಜಾಣರು ನಾವು. ಹೇಳಿಕೇಳಿ ಭಾರತೀಯರು ಭಾವುಕರು.

ಭಾವನೆಗಳಿಗೆ ಕರಗಿ ನೀರಾಗುವುದು ನಮ್ಮ ಜಾಯಮಾನ. ಸಾಲ ಮಾಡಿ ತುಪ್ಪ ತಿನ್ನು ಅನ್ನುವುದಕ್ಕಿಂತ ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ವ್ಯವಹಾರ ಕೌಶಲ್ಯ ನಮ್ಮದಾದರೆ ನಾಳೆಗಳು ನಿಶ್ಚಿಂತವಾಗಬಲ್ಲದು. ಆದರೆ ಈಗ ಚಿನ್ನ ಎಂಬುದು, ಸಾಲ ಗಿಟ್ಟಿಸಿಕೊಳ್ಳಲು ಸುಲಭದ ದಾರಿ ಆಗಿರುವುದೂ ವಾಸ್ತವ. ಇಂದು ಚಿನ್ನ ಕೊಂಡು ನಾಳೆ ಅಡವಿಡೋಣ ಎಂಬ ರಾಜಿಸೂತ್ರವೂ ತಪ್ಪಲ್ಲ ಬಿಡಿ.

ಈ ಚಿನ್ನದ ಹಬ್ಬ, ಮಾರುಕಟ್ಟೆಯನ್ನು, ಗ್ರಾಹಕ ಲೋಕವನ್ನು ಯಾವ ಪರಿ ಆವರಿಸಿಕೊಂಡಿದೆಯೆಂದರೆ ವರ್ಷದಿಂದ ವರ್ಷಕ್ಕೆ ಬಿಕರಿಯಾಗುತ್ತಿರುವ ಚಿನ್ನದ ಪ್ರಮಾಣ ನಭೂತೋ ಎಂಬಂತೆ ಬೆಳೆಯುತ್ತಿದೆ. ದೇಶದಲ್ಲಿ ಕಳೆದ ವರ್ಷ ಒಂದೇ ದಿನ ಬರೋಬ್ಬರಿ 20 ಮೆಟ್ರಿಕ್ ಟನ್ ಚಿನ್ನ ವಿವಿಧ ರೂಪದಲ್ಲಿ ಬಿಕರಿಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ (ಏ. 24) ಇದು ಏನಿಲ್ಲವೆಂದರೂ ಎರಡು ಮೆಟ್ರಿಕ್ ಟನ್ನಷ್ಟು ಹೆಚ್ಚುವ ಸಂಭವವಿದೆ ಎಂದು ಮುಂಬೈನ `ಬುಲಿಯನ್ ಸ್ಟ್ರೀಟ್~ ವರದಿ ಹೇಳಿದೆ.

ಆದರೆ ಅಸಲಿ ಸಮಾಚಾರ ಗೊತ್ತೇ?
ಕೇಂದ್ರ ಸರ್ಕಾರದ ನೀತಿಗಳಿಗೆ ಮುನಿಸಿಕೊಂಡು ದೇಶದಾದ್ಯಂತ ಭರ್ತಿ ಒಂದು ತಿಂಗಳು ಕೋಮಾ ಸ್ಥಿತಿಯಲ್ಲಿದ್ದ ಚಿನ್ನದ ಮಾರುಕಟ್ಟೆ ಇದೀಗ ತಾನೇ ಮೈಕೊಡವಿಕೊಂಡು ಅಕ್ಷಯ ತೃತೀಯಕ್ಕೆ ಸಜ್ಜಾಗುತ್ತಿದೆ.

ಆಭರಣಗಳ ತಯಾರಿಕೆ ಮಾತು ಹಾಗಿರಲಿ ಚಿನ್ನದ ಗಟ್ಟಿ ಉತ್ಪಾದನೆಯೂ ಸಂಪೂರ್ಣ ಸ್ಥಗಿತಗೊಂಡಿದ್ದ ಕಾರಣ ಬುಲಿಯನ್ ಸ್ಟ್ರೀಟ್ ಅಂತ ಕರೆಸಿಕೊಳ್ಳೋ ಮುಂಬೈನ ಚಿನಿವಾರಪೇಟೆ ಅಕ್ಷರಶಃ ಸ್ತಬ್ಧವಾಗಿತ್ತು. ಪ್ರತಿಭಟನೆ ಮುಗಿದು ಮಾರುಕಟ್ಟೆ ವ್ಯವಹಾರ ಈಗ ಯಥಾವತ್ ನಡೆಯುತ್ತಿದ್ದರೂ ಡೀಲರ್ಗಳು, ಏಜೆಂಟರು, ಬುಲಿಯನ್ ಮರ್ಚಂಟ್ (ಚಿನ್ನದ ಗಟ್ಟಿ ವ್ಯಾಪಾರಿ)ಗಳು ಬೇಡಿಕೆಯಿಟ್ಟಷ್ಟು ಪ್ರಮಾಣದಲ್ಲಿ ಸರಕು ಪೂರೈಕೆಯಾಗುತ್ತಿಲ್ಲ ಎಂಬ ವಾಸ್ತವ ಗುಟ್ಟಾಗೇನೂ ಉಳಿದಿಲ್ಲ.

ಇದು ಆಭರಣ ತಯಾರಿಕೆ, ಅಗತ್ಯಕ್ಕೆ ತಕ್ಕ ಒದಗಿಸುವ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿರುವುದರಿಂದ ಹಿಂದಿನ ವರ್ಷಗಳ ವೇಗ ಮಾರುಕಟ್ಟೆಯಲ್ಲಿಲ್ಲ. ಈ ಅಂಶವನ್ನು ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ವೆಂಕಟೇಶ್ಬಾಬು ಅವರೂ ಸ್ಪಷ್ಟಪಡಿಸಿದ್ದಾರೆ.

`ಪ್ರತಿವರ್ಷದಂತೆ ಈ ಬಾರಿಯೂ ಅಕ್ಷಯ ತೃತೀಯಕ್ಕೆ ಎರಡು ವಾರವಿರುವಾಗಲೇ ಮುಂಗಡ ಬುಕಿಂಗ್ ಶುರುವಾಗಿದೆ. ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಕೊರತೆಯಿದ್ದರೂ ಸಾಮಾನ್ಯ ಗ್ರಾಹಕರು ಈ ಬಗ್ಗೆ ಏನೂ ಚಿಂತಿಸಬೇಕಾದ್ದಿಲ್ಲ. ಈ ಬಾರಿ ಮಾರುಕಟ್ಟೆಗೆ ದೊಡ್ಡ ಹೊಡೆತ ಕೊಡುವುದು ವಿಪರೀತವಾಗಿ ಏರಿಕೆಯಾಗಿರುವ ಚಿನ್ನದ ಬೆಲೆ.

ಸಣ್ಣ ಪ್ರಮಾಣದಲ್ಲಿ ಒಡವೆ ಖರೀದಿಸುವವರಿಗೆ ಇದರಿಂದ ತೊಂದರೆಯಾಗುವುದು. ಕಳೆದ ವರ್ಷ `ಅಕ್ಷಯ~ದಂದು ಒಂದೇ ದಿನ ಬೆಂಗಳೂರಿನಲ್ಲಿ 300 ಕೋಟಿ ರೂಪಾಯಿಗಳ ಆಭರಣಗಳು ಬಿಕರಿಯಾಗಿವೆ. ಈ ಬಾರಿ ಏನಾಗುತ್ತೋ ಗೊತ್ತಿಲ್ಲ~ ಎಂದು ವಿವರಿಸುತ್ತಾರೆ, ಸ್ವತಃ ಬುಲಿಯನ್ ಮರ್ಚಂಟ್ ಕೂಡಾ ಆಗಿರುವ ಎಸ್. ವೆಂಕಟೇಶ್ಬಾಬು.

ಚಿನ್ನವೆಂದರೆ ಒಡವೆಯಷ್ಟೇ ಅಲ್ಲ
ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ಚಿನ್ನವೆಂದರೆ ಆಭರಣಕ್ಕಷ್ಟೇ ಸೀಮಿತ ಎಂಬಂತಹ ವಾತಾವರಣವಿತ್ತು. ಆದರೆ ಈಗ ಈ ಹಳದಿ ಲೋಹ ಷೇರು ಮಾರುಕಟ್ಟೆಯಲ್ಲಿ ತನ್ನ ಗ್ರಾಫ್ ಏರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿನ್ನವೆಂದರೆ ಆಭರಣಕ್ಕಿಂತ ಹೂಡಿಕೆಗೇ ಹೆಚ್ಚು ಸೂಕ್ತ ಎಂಬ ಜಾಣ ಲೆಕ್ಕಾಚಾರ ಗ್ರಾಹಕಲೋಕದ್ದು.

ಮಾರುಕಟ್ಟೆ ತಜ್ಞರು (ಅನಾಲಿಸ್ಟ್ಗಳು) ಸಲಹೆ ಮಾಡುತ್ತಿರುವುದೂ ಇದನ್ನೇ. ಆಭರಣ ಖರೀದಿಸಿ ಮಾರಾಟ ಮಾಡುವ ಚಿಂತನೆ ಸೂಕ್ತವಲ್ಲ. ಯಾಕೆಂದರೆ ವೇಸ್ಟೇಜ್, ಮೇಕಿಂಗ್ ಚಾರ್ಜ್, ಪ್ಯೂರಿಟಿ ಇತ್ಯಾದಿ ರೂಪದಲ್ಲಿ ಒಂದಷ್ಟು ಮೊತ್ತವನ್ನು ಕಳೆದುಕೊಳ್ಳುವುದು ಸಾಮಾನ್ಯ. ಹೀಗಾಗಿ, ಈ ಬಾರಿಯ ಚಿನ್ನದ ಹಬ್ಬದಲ್ಲೂ ದೊಡ್ಡ ಪ್ರಮಾಣದಲ್ಲಿ ಆಭರಣ ಖರೀದಿಸುವ ಗ್ರಾಹಕರು ಅದೇ ತೂಕದ ಚಿನ್ನದ ಬಿಸ್ಕತ್ತೋ, ನಾಣ್ಯವನ್ನೋ ಖರೀದಿಸಿ ಜಾಣರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.