ನವಿ ಮುಂಬೈ: ಐಸಿಸಿ ಏಕದಿನ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್ಗಳ ಅಂತರದಲ್ಲಿ ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಈ ಟೂರ್ನಮೆಂಟ್ನಲ್ಲಿ ಭಾರತ ಪರ ದೀಪ್ತಿ ಶರ್ಮಾ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್, ಶ್ರೀ ಚರಣಿ ಸೇರಿದಂತೆ ಅನೇಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೆ, ಟೂರ್ನಿಯಲ್ಲಿ ಅತೀ ಹೆಚ್ಚು ರನ್ಸ್ ಹಾಗೂ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯರು ಯಾರು ಎಂಬುದನ್ನು ನೋಡೋಣ.

ಅತೀ ಹೆಚ್ಚು ರನ್ಸ್

ದಕ್ಷಿಣ ಆಫ್ರಿಕಾದ ಲಾರಾ ವೊಲ್ಫಾರ್ಟ್ 9 ಇನಿಂಗ್ಸ್ಗಳಿಂದ 571 ರನ್ಸ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 9 ಇನಿಂಗ್ಸ್ಗಳಿಂದ 434 ರನ್ಸ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಆ್ಯಶ್ಲೀ ಗಾರ್ಡನರ್ 5 ಇನಿಂಗ್ಸ್ಗಳಿಂದ 328 ರನ್ಸ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತದ ಇನ್ನೋರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ 6 ಇನಿಂಗ್ಸ್ಗಳಿಂದ 308 ರನ್ಸ್ ಕಲೆ ಹಾಕಿದ್ದರು. ಆದರೆ ಇವರು ಸೆಮಿಫೈನಲ್ಗೂ ಮುನ್ನ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು.

ಆಸ್ಟ್ರೇಲಿಯಾದ ಫೀಬೆ ಲಿಚ್ಫೀಲ್ಡ್ 7 ಇನಿಂಗ್ಸ್ಗಳಿಂದ 304 ರನ್ಸ್ ಕಲೆಹಾಕುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

ಅತೀ ಹೆಚ್ಚು ವಿಕೆಟ್

ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ 9 ಪಂದ್ಯಗಳಿಂದ 22 ವಿಕೆಟ್ಸ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ 7 ಪಂದ್ಯಗಳಲ್ಲಿ 17 ವಿಕೆಟ್ಸ್ ಪಡೆದಿದ್ದಾರೆ.

ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ 7 ಪಂದ್ಯ- 16 ವಿಕೆಟ್ಸ್ ಪಡೆದು ಮಿಂಚಿದ್ದಾರೆ.

ಭಾರತದ ಇನ್ನೋರ್ವ ಸ್ಪಿನ್ನರ್ ಶ್ರೀ ಚರಣಿ 9 ಪಂದ್ಯಗಳಿಂದ 14 ವಿಕೆಟ್ಸ್ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಅಲನಾ ಕಿಂಗ್ 7 ಪಂದ್ಯಗಳಿಂದ- 13 ವಿಕೆಟ್ಸ್ ಕಬಳಿಸಿದ್ದಾರೆ.

.1973–2025: ಐಸಿಸಿ ವಿಶ್ವಕಪ್ನಲ್ಲಿ ಭಾರತೀಯ ಮಹಿಳಾ ತಂಡದ ಪಯಣ ಹೀಗಿತ್ತು.ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಫೈನಲ್ ಬಳಿಕ ಯುವ ಆಟಗಾರ್ತಿಯ ಕೊಂಡಾಡಿದ ಕೌರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.