ಅಂತರ್ಜಾಲ ವ್ಯವಸ್ಥೆಯ ಭದ್ರತೆಗೆ ಸಂಬಂಧಿಸಿದ ಸಲ್ಯೂಷನ್‌ಗಳನ್ನು ಒದಗಿಸುವ ಕ್ಯಾಸ್ಪರ್ಸ್ಕಿ ಲ್ಯಾಬ್‌ಗೆ ಕ್ರಿಕೆಟ್‌ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ರಾಂಡ್ ರಾಯಭಾರಿಯಾಗಿದ್ದಾರೆ.

ಕ್ಯಾಸ್ಪರ್ಸ್ಕಿ ಲ್ಯಾಬ್‌ನ ಏಷ್ಯಾ-ಪೆಸಿಫಿಕ್ ವಲಯದ ವ್ಯವಸ್ಥಾಪಕ ನಿರ್ದೇಶಕ ಹ್ಯಾರಿ ಚುಂಗ್ ಹೇಳುವಂತೆ, `ಕ್ರಿಕೆಟ್ ಭಾರತದಲ್ಲಿ ಧರ್ಮದಂತೆ ಬೆಳೆದಿದೆ. ಈ ರಾಷ್ಟ್ರದ ಯುವ ಜನತೆಯ ಅತಿ ದೊಡ್ಡ ಸ್ಫೂರ್ತಿ ಸಚಿನ್ ತೆಂಡೂಲ್ಕರ್. ಇಂಟರ್ನೆಟ್ ಆ್ಯಂಟಿ ವೈರಸ್ ಬ್ರಾಂಡ್‌ಗೆ ಅವರಿಗಿಂತ ಸೂಕ್ತ ಪ್ರಚಾರ ರಾಯಭಾರಿ ಬೇರಿಲ್ಲ~.

ಸಚಿನ್ ಸದಾ ಮುಂಚೂಣಿಯ ಶ್ರೇಷ್ಠ ಕ್ರಿಕೆಟ್ ತಾರೆ. ಅವರು ತಮ್ಮ ಕ್ಷೇತ್ರದಲ್ಲಿ ಪಟ್ಟುಹಿಡಿದ ಪರಿಣಿತಿ ಹಲವು ಬಗೆ. ಅವರ ಏಕಾಗ್ರತೆ, ಸಮಗ್ರತೆ ಮತ್ತು ಧೈರ್ಯವನ್ನು ಕ್ಯಾಸ್ಪರ್ಸ್ಕಿ ಕೂಡ ಪ್ರತಿನಿಧಿಸುತ್ತದೆ ಎಂದು ಕ್ಯಾಸ್ಪರ್ಸ್ಕಿ ಲ್ಯಾಬ್‌ನ ವ್ಯವಸ್ಥಾಪಕ ನಿರ್ದೇಶಕ ಆಲ್ತಾಫ್ ಹಲ್ದೆ ಹೇಳುತ್ತಾರೆ.

ಐಟಿ ಭದ್ರತಾ ವಲಯದಲ್ಲಿ ಮುಂಚೂಣಿಯಲ್ಲಿರುವ ಕ್ಯಾಸ್ಪರ್ಸ್ಕಿ ಇದುವರೆಗೆ ಮೋಟಾರು ರೇಸ್, ರಗ್ಬಿ ಮುಂತಾದ ಕ್ರೀಡೆಗಳಿಗೆ ಪ್ರಾಯೋಜಕತ್ವ ನೀಡಿತ್ತು. ಈಗ ಕ್ರಿಕೆಟ್ ಜತೆಗೂ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂದರು ಸಚಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.