ಇನ್ನೇನು ಬೇಸಿಗೆ ಹತ್ತಿರ ಬರುತ್ತಿದೆ. ಚಳಿಗಾಲದ ಉಡುಪುಗಳನ್ನು ಬದಿಗಿಟ್ಟು ಸೆಕೆಗೆ ಹೊಂದಿಕೊಳ್ಳುವ ಸಡಿಲವಾದ, ಹಗುರವಾದ ದಿರಿಸುಗಳನ್ನು ತೊಡುವ ಕಾಲ. ಇದಕ್ಕಾಗಿ ಲ್ಯಾವೆನ್ ಫ್ಯಾಷನ್ ಬೇಸಿಗೆಯ ಬೇಗೆಯನ್ನು ತಂಪು ಮಾಡಲು ಬೇಸಿಗೆ ಸಂಗ್ರಹವನ್ನು ಹೊರತಂದಿದೆ. ಈ ಉಡುಪುಗಳನ್ನು ತೊಟ್ಟು ಅಂದು ಸಂಜೆ ಬೆಡಗಿಯರು ಜಯಮಹಲ್ ಪ್ಯಾಲೆಸ್ನ ಹೆರಿಟೇಜ್ ಹೋಟೆಲ್ನಲ್ಲಿ ತಮ್ಮ ಬಿಂಕ ಬಿನ್ನಾಣ ತೋರಿದರು.

ಝಗಜಗಿಸುವ ವೇದಿಕೆಯ ಮೇಲೆ ಬಣ್ಣಬಣ್ಣದ ದೀಪ ನಿಧಾನವಾಗಿ ಹೊತ್ತಿಕೊಳ್ಳುತ್ತಿದ್ದಂತೆ ಅಲ್ಲಿದ್ದ ಕುರ್ಚಿಯ ಮೇಲೆ ಮೂರು ಜನ ಹುಡುಗರು ಬಂದು ಕುಳಿತರು. ಅವರ ಸನಿಹಕ್ಕೆ ನಾಲ್ಕು ಹುಡುಗಿಯರು ಬಂದು ನಿಂತು ಹರಟೆ ಹೊಡೆಯಲು ಶುರುಮಾಡಿದರು. ಅವರು ಧರಿಸಿಕೊಂಡು ಬಂದ ಉಡುಪು ಲಕ್ಷುರಿ ಕ್ಯಾಜುವಲ್. ಸಂಗೀತಕ್ಕೆ ತಕ್ಕಂತೆ ವೇಗವಾಗಿ ಹೆಜ್ಜೆ ಹಾಕುತ್ತಾ ಬಂದು ಅದೇ ವೇಗದಲ್ಲಿ ಪರದೆ ಹಿಂದೆ ಸರಿದರು. ನಂತರ ಸ್ಪೋರ್ಟ್ಸ್ ಉಡುಪುಗಳ ಸರದಿ. ಒಬ್ಬರ ಸೊಂಟ ಇನ್ನೊಬ್ಬರು ಹಿಡಿದುಕೊಂಡು ಜೋಡಿ ಹಕ್ಕಿಗಳಂತೆ ಮತ್ತೊಮ್ಮೆ ಸ್ಟೇಜ್ ಮೇಲೆ ಬಂದರು. ಥ್ರೀ ಪೋರ್ಥ್ ಪ್ಯಾಂಟ್, ತೆಳು ಟೀ ಶರ್ಟ್ ಹಾಕಿಕೊಂಡು ಬಂದ ಅವರ ಉಡುಪು ಬೇಸಿಗೆಗೆ ಹೇಳಿ ಮಾಡಿಸಿದ ಹಾಗೆಯೇ ಇತ್ತು.

ಐದು ನಿಮಿಷ ವಿರಾಮದ ನಂತರ ಮತ್ತೆ ಇನ್ನೊಂದು ಶೋ ಆರಂಭವಾಯಿತು. ಈಗ ಫಾರ್ಮಲ್ ಉಡುಪುಗಳ ಸರದಿ. ಕೆಂಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟ್, ಅದಕ್ಕೆ ಕೆಂಪು ಬಣ್ಣದ ಟೈ ಕಟ್ಟಿಕೊಂಡು ಬಂದ ಚೆಲುವೆಯ ನಡಿಗೆಯಲ್ಲಿ ನಾಜೂಕಿರದಿದ್ದರೂ ಅವಳು ತೊಟ್ಟ ಉಡುಪಿನಿಂದ ಸುಂದರವಾಗಿ ಕಾಣುತ್ತಿದ್ದಳು. ಇನ್ನೊಬ್ಬಳು ಚಿಕ್ಕದಾದ ಸ್ಕರ್ಟ್, ಅದಕ್ಕೆ ತಕ್ಕ ಬಿಳಿ ಶರ್ಟ್ ಹಾಕಿಕೊಂಡು ವೈಯಾರ ಮಾಡಿಕೊಂಡು ಬಂದಾಗ ಹುಡುಗರ ಮೊಬೈಲ್ ಕ್ಯಾಮೆರಾ ಬ್ಯುಸಿಯಾಗಿತ್ತು.

ಮೂರನೇ ಸುತ್ತು ಕಾಕ್ಟೈಲ್. ಬೇಸಿಗೆ ಕಾಲದಲ್ಲಿ ಪಾರ್ಟಿಗೆ ಹೋಗಬೇಕಾದ ಗ್ರ್ಯಾಂಡ್ ಉಡುಪುಗಳತ್ತ ಜನ ಹೆಚ್ಚು ಕಣ್ಣು ಹಾಯಿಸುತ್ತಾರೆ. ಹೆಚ್ಚು ಭಾರವಾದ ಉಡುಪಿನಿಂದ ಮೈ ಮತ್ತಷ್ಟೂ ಬೆವರುತ್ತದೆ. ನೋಡುವುದಕ್ಕೆ ಚೆಂದವಿದ್ದು, ತೊಡುವುದಕ್ಕೂ ಆರಾಮವಾಗಿದ್ದರೆ ಮನಸ್ಸಿಗೂ ಖುಷಿಯಾಗುತ್ತದೆ. ಪಾರ್ಟಿವೇರ್ ಉಡುಪಿನಲ್ಲಿ ಎಲ್ಲರಿಗೂ ಮೆಚ್ಚುಗೆ ಆಗುವ ಉಡುಪುಗಳನ್ನು ತೊಟ್ಟು ರೂಪದರ್ಶಿಗಳು ಬೀಗಿದರು. ಗಾಢ ಬಣ್ಣಕ್ಕಿಂತ ತಿಳಿ ಬಣ್ಣದ ಉಡುಪುಗಳೇ ಅಲ್ಲಿ ಹೆಚ್ಚಿದ್ದವು.

ನಂತರ ಬಂದಿದ್ದು ಸಾಂಪ್ರದಾಯಿಕ ಉಡುಪು. ಎತ್ತರಿಸಿ ಕಟ್ಟಿಕೊಂಡ ಕೂದಲು, ತೊಟ್ಟ ದಿರಿಸಿಗೆ ತಕ್ಕ ಬಿಂದಿ ಹಾಕಿಕೊಂಡು ಬಂದ ರೂಪದರ್ಶಿಗಳು ಗೌರಮ್ಮನಂತೆ ಕಾಣುತ್ತಿದ್ದರು. ನೀಲಿ, ಗುಲಾಬಿ ಬಣ್ಣದ ವಿನ್ಯಾಸದ ಉಡುಪಿನಲ್ಲಿ ಅಲ್ಲಿದ್ದ ಕೆಲವು ಬೆಡಗಿಯರು ಮುದ್ದುಮುದ್ದಾಗಿ ಕಾಣುತ್ತಿದ್ದರು.

ಇದೆಲ್ಲಾ ಮುಗಿದ ನಂತರ ಕೊನೆಯ ಸರದಿ ಮಾತ್ರ ಮಜವಾಗಿತ್ತು. ಅಷ್ಟು ಹೊತ್ತು ಬೆಕ್ಕಿನ ನಡಿಗೆ ನಡೆದ ಮಾಡೆಲ್ಗಳು ವೇದಿಕೆಯ ಮೇಲೆ ಕುಣಿಯುತ್ತ ಬಂದರು. ಕಣ್ಣಿಗೆ ದೊಡ್ಡ ಗ್ಲಾಸ್ ಹಾಕಿ, ಕೈಯಲ್ಲಿ ಬಲೂನ್ ಹಿಡಿದುಕೊಂಡು ಮಕ್ಕಳಂತೆ ನಲಿದಾಡಿದರು. ಹುಡುಗಿಯರಷ್ಟು ಚೆಂದವಾಗಿ ಹುಡುಗರೂ ಹೆಜ್ಜೆ ಹಾಕಲಿಲ್ಲ.

‘ಬೇಸಿಗೆಗೆ ಈ ಉಡುಪು ತುಂಬಾ ಚೆನ್ನಾಗಿರುತ್ತದೆ. ಹಾಕಿಕೊಳ್ಳುವುದಕ್ಕೆ ಆರಾಮಾರಾಗಿರುತ್ತದೆ. ಹೆಚ್ಚು ಭಾರವಿಲ್ಲದ ಈ ಉಡುಪು ಮೆಚ್ಚುಗೆಯಾಗಿದೆ. ಸಾಂಪ್ರದಾಯಿಕ ಉಡುಪು ಮತ್ತು ಪಾರ್ಟಿವೇರ್ಗಳು ತುಂಬಾ ಇಷ್ಟವಾಗಿವೆ’ ಎಂದು ಕಣ್ಣರಳಿಸಿದರು ಮಾಡೆಲ್ ಗ್ರೀಷ್ಮಾ.

ಮೈಗೆ, ಮನಸ್ಸಿಗೆ ಒಪ್ಪುವ ಹಿತವಾದ ಬಟ್ಟೆಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ನಾವು ಲೆನನ್, ಕಾಟನ್ ಹಾಗೂ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಉಡುಪುಗಳನ್ನು ವಿನ್ಯಾಸ ಮಾಡಿದ್ದೇವೆ. ಬೆಲೆಯೂ ದುಬಾರಿಯಲ್ಲ. ಜನ ಇದನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾತು ಹಂಚಿಕೊಂಡರು ಲ್ಯಾವೆನ್ ಸಿಇಓ ರಾಜೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.