ಶಸ್ತ್ರಚಿಕಿತ್ಸೆಗೆ ಪ್ರತಿ ವರ್ಷ 42 ಲಕ್ಷ ಮಂದಿ ಬಲಿ

7
ಎಚ್‌ಐವಿ, ಕ್ಷಯ, ಮಲೇರಿಯಾದಿಂದ ಸಾಯುವವರಿಗಿಂತ ಇದು ಹೆಚ್ಚು

ಶಸ್ತ್ರಚಿಕಿತ್ಸೆಗೆ ಪ್ರತಿ ವರ್ಷ 42 ಲಕ್ಷ ಮಂದಿ ಬಲಿ

Published:
Updated:

ಲಂಡನ್‌: ‌ವಿಶ್ವದಲ್ಲಿ ಪ್ರತಿ ವರ್ಷ ಶಸ್ತ್ರಚಿಕಿತ್ಸೆಗೆ ಸುಮಾರು 42 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಈ ಸಂಖ್ಯೆ ಎಚ್‌ಐವಿ, ಕ್ಷಯ ಮತ್ತು ಮಲೇರಿಯಾದಿಂದ ಸಾಯುವವರಿಗಿಂತಲೂ ಹೆಚ್ಚಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಈ 42 ಲಕ್ಷ ಮಂದಿ ಸಾಯುವವರಲ್ಲಿ ಶೇ 7ರಷ್ಟು ಮಂದಿ 30 ದಿನಗಳೊಳಗೆ ಮೃತಪಡುತ್ತಿದ್ದಾರೆ.  

ಇಲ್ಲಿನ ಲಾನ್ಸೆಟ್‌ ಜರ್ನಲ್‌ನಲ್ಲಿ ಈ ಸಂಶೋಧನ ಲೇಖನ ಪ್ರಕಟವಾಗಿದೆ. ಶಸ್ತ್ರಚಿಕಿತ್ಸೆ ನಡೆದು ಒಂದು ತಿಂಗಳ ಒಳಗಾಗಿ ಮೃತಪಡುವವರ ಸಂಖ್ಯೆ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯೇ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವವರ ಸಂಖ್ಯೆಯೂ ಹೆಚ್ಚಿದೆ. ಆ ಎಲ್ಲಾ ರೋಗಿಗಳಿಗೂ ಶಸ್ತ್ರಚಿಕಿತ್ಸೆ ನಡೆಸಿದರೆ, ಸಾವಿನ ಸಂಖ್ಯೆ 61 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಲ್ಲಿ ಪ್ರತಿ ವರ್ಷ ಎಚ್‌ಐವಿ, ಕ್ಷಯ ಮತ್ತು ಮಲೇರಿಯ ಈ ಮೂರು ರೋಗಗಳಿಂದ ಸಾಯುವವರ ಸಂಖ್ಯೆ ಕೇವಲ 29 ಲಕ್ಷವಾಗಿದ್ದು, ಇದು ಶಸ್ತ್ರಚಿಕಿತ್ಸೆಯ ನಂತರ ಮೃತಪಡುವವರಿಗಿಂದ ಅರ್ಧದಷ್ಟು ಕಡಿಮೆಯಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ದಿ ಲ್ಯಾನ್ಸೆಟ್‌ ಕಮಿಷನ್‌ ಗುರುತಿಸಿರುವ ಹಾಗೆ ಪ್ರಪಂಚದಲ್ಲಿ ಪ್ರತಿ ವರ್ಷ 3.13 ಕೋಟಿ ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಕೇವಲ 29 ದೇಶಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಂತರದಲ್ಲಿ ಮೃತಪಡುವವರ ದತ್ತಾಂಶ ದಾಖಲಿಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ವಿಶ್ವ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆಯನ್ನು ನಿರ್ಲಕ್ಷಿಸಲಾಗಿದೆ. ಹೀಗೆಂದು, ಶಸ್ತ್ರಚಿಕಿತ್ಸೆ ನಂತರದ ಎಲ್ಲಾ ಸಾವುಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಸಂಶೋಧನೆ ಮೇಲೆ ಹೆಚ್ಚಿನ ಹೂಡಿಕೆ ಮಾಡಿದರೆ ಈ ಸಂಖ್ಯೆಯನ್ನು ಕಡಿಮೆ ಮಾಡಬಹುದು’ ಎಂದು ಬರ್ಮಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 10

  Angry

Comments:

0 comments

Write the first review for this !