ಆಕರ್ಷಕ ವಿನ್ಯಾಸದ ಗೃಹಾಲಂಕಾರ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ `ಇವೋಕ್' ಇದೀಗ ನಗರದಲ್ಲಿ ಮತ್ತೊಂದು ಅತಿ ದೊಡ್ಡ ರಿಟೇಲ್ ಮಳಿಗೆ ಆರಂಭಿಸಿದೆ.

2011ರಲ್ಲಿ ಕಾರ್ಯಾರಂಭ ಮಾಡುವ ಮೂಲಕ `ಇವೋಕ್' ಮರದ ಪೀಠೋಪಕರಣ ಹಾಗೂ ಗೃಹಾಲಂಕಾರ ವಸ್ತುಗಳಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಿದ್ದು, ಇದೀಗ ನಗರದಲ್ಲಿ ತನ್ನ ಮೂರನೇ ಮಳಿಗೆ ತೆರೆಯುವುದರ ಮೂಲಕ ದೇಶದಾದ್ಯಂತ ಒಟ್ಟು17 ಮಳಿಗೆಯನ್ನು ಹೊಂದಿದಂತಾಗಿದೆ.

ಇತ್ತಿಚೆಗೆ ಕಾರ್ಯಾರಂಭ ಮಾಡಿದ ಹೊಸ ಮಳಿಗೆಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 13,000 ಚದರ ಅಡಿ ವಿಸ್ತೀರ್ಣದಲ್ಲಿ ತರಹೇವಾರಿ ಪೀಠೋಪಕರಣಗಳು ನೋಡಲು, ಕೊಳ್ಳಲು ಲಭ್ಯ.

ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿಂಡ್‌ವೇರ್ ಹೋಮ್ ರಿಟೇಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸಿಇಒ ಸಂದೀಪ್ ಅರೋರಾ, `ದಕ್ಷಿಣ ಭಾರತದಲ್ಲಿ ನಮ್ಮ ಮಾರುಕಟ್ಟೆ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕೆಂಬ ಬದ್ಧತೆಯನ್ನು ಗಮನದಲ್ಲಿರಿಸಿಕೊಂಡು ಹೊಸ ಇವೋಕ್ ಮಳಿಗೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ.

ಗ್ರಾಹಕರ ಅಭಿರುಚಿ ಅರಿತು ಅವರ ಮನೆ, ಕಚೇರಿಗೆ ಬೇಕಾದ ದೀರ್ಘಬಾಳಿಕೆಯ ಹಾಗೂ ಟ್ರೆಂಡಿ ಪೀಠೋಪಕರಣಗಳ ಬೃಹತ್ ಸಂಗ್ರಹವನ್ನು ಒಂದೇ ಸ್ಥಳದಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದೇ ಈ ಮಳಿಗೆಯ ಉದ್ದೇಶ.

ಹಣಕ್ಕೆ ತಕ್ಕಂಥ ಗುಣಮಟ್ಟದ ಉತ್ಪನ್ನಗಳು ಇಲ್ಲಿ ಲಭ್ಯ. ಜತೆಗೆ ಹೊಸ ಬಗೆಯ ಅಡುಗೆಮನೆ ವಿನ್ಯಾಸದ ಮಾದರಿ ಹಾಗೂ ಮಾಡ್ಯುಲಾರ್ ವಾರ್ಡ್‌ರೋಬ್‌ಗಳನ್ನು ಪರಿಚಯಿಸಲಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.