ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಳೆದ ಬಟ್ಟೆಯಲಿ ಕಮಟು ವಾಸನೆಯೇ? ಹಾಗಾದರೆ ಮನೆಯಲ್ಲೇ ಇದೆ ಪರಿಹಾರ!

Last Updated 2 ಜುಲೈ 2020, 11:37 IST
ಅಕ್ಷರ ಗಾತ್ರ

ಎಷ್ಟು ಚೆನ್ನಾಗಿ ತೊಳೆದ ಬಟ್ಟೆಗಳೂ ಕೆಲವೊಮ್ಮೆ ಕೆಟ್ಟ ವಾಸನೆ ಬೀರುತ್ತವೆ. ಈ ಕಮಟು ವಾಸನೆ ಎಲ್ಲಿಂದ ಬರುತ್ತದೆ ? ಅದನ್ನು ನಿವಾರಿಸುವುದು ಹೇಗೆ? ಇದು ಗೃಹಿಣಿಯರನ್ನು ಕಾಡುವ ಪ್ರಶ್ನೆಗಳು. ಇಂಥ ಸಮಸ್ಯೆಗಳಿಗೆ ಮನೆಯಲ್ಲಿಯೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಯಾವ ಕಾರಣಕ್ಕೆ ವಾಸನೆ ಬರುತ್ತದೆ?
* ತೊಳೆದು ಹಾಕಿದ ಬಟ್ಟೆಗಳು ಸರಿಯಾಗಿ ಗಾಳಿ, ಬಿಸಿಲಿನಲ್ಲಿ ಒಣಗದಿದ್ದರೆ.
( ಮೋಡದ ವಾತಾವರಣ ಅಥವಾ ಚಳಿಗಾಲದ ದಿನದಲ್ಲಿ ತೇವವಾದ ಹವಾಗುಣ ಇದ್ದರೆ ಬಟ್ಟೆಗಳು ಬೇಗ ಒಣಗುವುದಿಲ್ಲ)
* ಅಗತ್ಯಕ್ಕಿಂತ ಹೆಚ್ಚು ಹಾಗೂ ಅಗತ್ಯವಿದ್ದಷ್ಟು ಡಿಟರ್ಜೆಂಟ್ ಬಳಕೆ ಮಾಡದಿದ್ದರೆ.
* ಬಟ್ಟೆ ತೊಳೆಯುವ ಯಂತ್ರವನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ.
* ತೊಳೆದ ಬಟ್ಟೆಗಳನ್ನು ತಕ್ಷಣ ವಾಷಿಂಗ್‌ ಮಷಿನ್‌ನಿಂದ ಹೊರತೆಗೆಯದಿದ್ದರೆ, (ಒದ್ದೆ ಬಟ್ಟೆಗಳಿಂದಲೂ ಕೆಟ್ಟ ವಾಸನೆ ಬರುತ್ತದೆ).
* ನೀವು ಬಳಸುತ್ತಿರುವ ಡಿಟರ್ಜೆಂಟ್ ಪೌಡರ್‌ ಅಥವಾ ಲಿಕ್ವಿಡ್‌ ಡಿಟರ್ಜೆಂಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲದಿದ್ದರೆ.
* ವಾಷಿಂಗ್‌ ಮಷಿನ್ ಡ್ರಮ್‌ನಲ್ಲಿ‌‌ ಯಾವಾಗಲೂ ತೇವಾಂಶ ಇರುವುದರಿಂದ, (ಯಂತ್ರದೊಳಗೆ / ಬಟ್ಟೆಗಳ ಮೇಲೆ) ಸೂಕ್ಷ್ಮಾಣುಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದರಿಂದಲೂ ಬಟ್ಟೆ ವಾಸನೆ ಬರಬಹುದು.

ಪರಿಹಾರಗಳೇನು?
* ಒಗೆದ ಬಟ್ಟೆಗಳನ್ನು ಸರಿಯಾಗಿ ಒಣಗಿಸಲು ಬಿಸಲು ಇಲ್ಲದಿದ್ದರೆ ಅರೆಬರೆ ಬಣಗಿದ ಬಟ್ಟೆಯನ್ನು ಇಸ್ತ್ರಿ ಮಾಡಿ. ಇದರಿಂದ ಬಟ್ಟೆಗಳಿಂದ ಹೊರಡುವ ದುರ್ಗಂಧವನ್ನು ತಡೆಯಬಹುದು.
* ಸಮರ್ಪಕವಾಗಿ ಡಿಟೆರ್ಜೆಂಟ್ ಬಳಸಿ. ಬಟ್ಟೆ ಒಗೆದ ನಂತರ, ಅದನ್ನು ಯಂತ್ರದಲ್ಲೇ ಬಿಡದೇ, ತಕ್ಷಣ ಒಣಗಿ ಹಾಕಿ.
* ವಾಷಿಂಗ್‌ ಮಷೀನ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸುವಾಗ ಬಟ್ಟೆಗಳನ್ನು ಮಷಿನ್‌ ಡ್ರಮ್‌ನೊಳಗೆ ಹಾಕುವ ಮುನ್ನ ನೀರು ಮತ್ತು ಅಡುಗೆ ಸೋಡ ಹಾಕಿ ಸ್ವಚ್ಛಗೊಳಿಸಿ. ಇದಾದ ನಂತರ ಬಟ್ಟೆಗಳನ್ನು ಹಾಕಿ. ಅಡುಗೆ ಸೋಡದ ಬದಲು ವೈಟ್ ವಿನೆಗರ್ ಕೂಡ ಬಳಸಬಹುದು. ಈ ವಿಧಾನ ಬಳಸಿ ಯಂತ್ರದ ಡ್ರಮ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿದ್ದರೆ, ಬಟ್ಟೆಗಳು ದುರ್ಗಂಧ ಬೀರುವುದಿಲ್ಲ.
* ಮಷಿನ್‌ನಲ್ಲಿ ಉಪ್ಪಿನ ಪದರ(ಸ್ಕೇಲ್) ಉಳಿದಾಗಲೂ ಬಟ್ಟೆ ವಾಸನೆಯಾಗುತ್ತದೆ. ಈ ಪದರವನ್ನು ನಿವಾರಿಸಲು ‘ಲ್ಯಾಂಡ್ರಿ ಕ್ಯಾಪ್ಸೂಲ್‌‘ ಬಳಸಬಹುದು.

ಫ್ಯಾಬ್ರಿಕ್‌ ಸಾಫ್ಟ್‌ನರ್‌‌‌ ಬಳಸಿ..
ಬಟ್ಟೆಗಳಿಗೆ ಸುವಾಸನೆ ಮತ್ತು ಮೃದುತ್ವ ತರುವ ಹಲವು ಬಗೆಯ ಫ್ಯಾಬ್ರಿಕ್‌ ಸಾಫ್ಟ್‌ನರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬಿಳಿ ಬಟ್ಟೆ, ಬಣ್ಣದ ಬಟ್ಟೆ, ಕಪ್ಪು ಬಟ್ಟೆ, ಮಕ್ಕಳ ಬಟ್ಟೆಗಳಿಗೆ ಬೇರೆ ಬೇರೆ ಸಾಫ್ಟ್‌ನರ್‌ಗಳಿವೆ. ಇದನ್ನು ಬಳಸುವುದರಿಂದ ಬಟ್ಟೆಗಳು ಮಾಸದಂತೆ ತಡೆಗಟ್ಟಬಹುದು. ಇದರೊಂದಿಗೆ ಬಟ್ಟೆಗಳು ಬಹಳ ಸಮಯ ಮೃದುವಾಗಿರುತ್ತವೆ. ಅಲ್ಲದೇ ಸುವಾಸನೆ ಕೂಡ ಬೀರುತ್ತವೆ. ನಿಮಗೆ ಇಷ್ಟವಾಗುವ ಪರಿಮಳದ ಸಾಫ್ಟ್‌ನರ್‌ ಸಿಗುತ್ತವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT