ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಗೃಹ ನಿರ್ಮಾಣ ಯೋಜನೆ: ₹450 ಕೋಟಿಗೆ 21 ಎಕರೆ ಖರೀದಿಸಿದ ಪ್ರೆಸ್ಟೀಜ್

Published 4 ಏಪ್ರಿಲ್ 2024, 14:23 IST
Last Updated 4 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ನವದೆಹಲಿ: ‘ಗೃಹ ನಿರ್ಮಾಣ ಯೋಜನೆಗಾಗಿ ₹450 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ 21 ಎಕರೆ ಜಾಗ ಖರೀದಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ₹4,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ’ ಎಂದು ರಿಯಲ್‌ ಎಸ್ಟೇಟ್ ಕಂಪನಿ ಪ್ರೆಸ್ಟೀಜ್ ಸಮೂಹವು ಷೇರುಮಾರುಕಟ್ಟೆಗೆ ಗುರುವಾರ ಮಾಹಿತಿ ನೀಡಿದೆ.

ಖರೀದಿಸಿರುವ ಜಾಗದಲ್ಲಿ ಒಟ್ಟು 1800 ಮನೆಗಳನ್ನು ನಿರ್ಮಿಸುವ ಯೋಜನೆ ಹೊಂದಿರುವುದಾಗಿ ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಕಂಪನಿ ತಿಳಿಸಿದೆ.

ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಝಾಕ್ ಅವರು ಮಾಹಿತಿ ನೀಡಿ, ‘ಐಟಿ ಕಾರಿಡಾರ್‌ ಆಗಿರುವ ವೈಟ್‌ಫೀಲ್ಡ್‌ನಲ್ಲಿ ನವೀನ ಮಾದರಿಯ ಮನೆಗಳ ನಿರ್ಮಾಣಕ್ಕೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಇಲ್ಲಿ ಸುಮಾರು 40 ಲಕ್ಷ ಚದರಡಿ ಪ್ರದೇಶದಲ್ಲಿ ಮನೆಗಳು ತಲೆ ಎತ್ತಲಿವೆ. ಯೋಜನೆಯ ಒಟ್ಟು ಅಭಿವೃದ್ಧಿ ಮೊತ್ತವು ₹4,500 ಕೋಟಿಯಾಗಿದೆ’ ಎಂದಿದ್ದಾರೆ.

ಸಮೂಹದ ಸಿಇಒ ವೆಂಕಟ ಕೆ. ನಾರಾಯಣ ಪ್ರತಿಕ್ರಿಯಿಸಿ, ‘ದೇಶದ 12 ಪ್ರಮುಖ ನಗರಗಳಲ್ಲಿ ತಮ್ಮ ಯೋಜನೆ ಹೊಂದಿರುವ ಪ್ರೆಸ್ಟೀಜ್ ಸಮೂಹವು, ಒಟ್ಟು 18.8 ಕೋಟಿ ಚದರಡಿಯಲ್ಲಿ ಸುಮಾರು 300 ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಿದೆ. ಪ್ರಸಕ್ತ ಯೋಜನೆಯು ಮುಂದಿನ ಮೂರು ತ್ರೈಮಾಸಿಕದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT