ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮ್ ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

Last Updated 30 ಡಿಸೆಂಬರ್ 2016, 14:58 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - ಭೀಮ್ ಆ್ಯಪ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಇಲ್ಲಿದೆ  ಮಾಹಿತಿ.

ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ.

[related]

ಸದ್ಯ ಅಂಡ್ರಾಯ್ಡ್‌ನಲ್ಲಿ ಮಾತ್ರ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡುವಾಗ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.

ಎಸ್‍ಬಿಐ, ಹೆಚ್‍ಡಿಎಫ್‌‍ಸಿ, ಐಸಿಐಸಿಐ,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯಾ  ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್  ಮೊದಲಾದ 30 ಬ್ಯಾಂಕ್‍ಗಳ ಗ್ರಾಹಕರು ಈ ಆ್ಯಪ್  ಮೂಲಕ ವಹಿವಾಟು ನಡೆಸಬಹುದಾಗಿದೆ.

ಪ್ಲೇ ಸ್ಟೋರ್ ನಲ್ಲಿ  BHIM UPI ಎಂದು ಸರ್ಚ್ ಮಾಡಿದರೆ ಈ ಆ್ಯಪ್ ಲಭ್ಯವಾಗುತ್ತದೆ.

ಆ್ಯಪ್ ಕಾರ್ಯ ನಿರ್ವಹಿಸುವುದು ಹೀಗೆ?

ಇನ್‍ಸ್ಟಾಲ್ ಮಾಡಿದ ಕೂಡಲೇ ನಿಮ್ಮ ಭಾಷೆ ಆಯ್ಕೆ ಮಾಡಿಕೊಳ್ಳಿ  

ನೆಕ್ಸ್ಟ್ ಬಟನ್  ಒತ್ತಿ

ಮುಂದಿನ ಹಂತಕ್ಕೆ ಹೋಗಿ

ನೆಕ್ಸ್ಟ್ ಒತ್ತಿ

ಈಗಾಗಲೇ ನಿಮ್ಮ ಫೋನ್  ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರತಕ್ಕದ್ದು.

Allow ಒತ್ತಿ

ಮೊಬೈಲ್ ಸಂಖ್ಯೆ ದೃಢೀಕರಿಸಿ, ನೆಕ್ಸ್ಟ್  ಬಟನ್ ಒತ್ತಿ

ಮೊಬೈಲ್  ಸಂಖ್ಯೆ ದೃಢೀಕರಣ ಆದ ನಂತರ ಮುಂದಿನ ಹಂತಕ್ಕೆ ಹೋಗಿ

ನಾಲ್ಕು ಅಂಕಿಯ ಪಾಸ್‍ವರ್ಡ್ ಕ್ರಿಯೇಟ್ ಮಾಡಿ ನಮೂದಿಸಿ

ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಂಡ ಕೂಡಲೇ ನಿಮ್ಮ ಬ್ಯಾಂಕ್ ಖಾತೆ ಡಿಸ್‍ ಪ್ಲೇ ಆಗುತ್ತದೆ

ಬ್ಯಾಂಕ್ ಖಾತೆ ಆಯ್ಕೆ ಮಾಡಿ

ಹಣ ಕಳಿಸಬೇಕಾದರೆ Send ಆಯ್ಕೆ ಮಾಡಿ.

ಹಣ ವರ್ಗಾವಣೆ ಮಾಡುವುದು ಹೀಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT