ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣೀತಿ ಮತ್ತೆ ಹಾಡ್ತಾರೆ!

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಮಾನಾ ಕಿ ಹಮ್‌ ಯಾರ್‌ ನಹೀ’ ಎಂದು ಹಾಡಿ ಬಾಲಿವುಡ್‌ ಮಂದಿ ಹುಬ್ಬೇರಿಸುವಂತೆ ಮಾಡಿದ್ದ ಮಾದಕ ಸುಂದರಿ ಪರಿಣೀತಿ ಚೋಪ್ರಾ ಈಗ ಮತ್ತೊಮ್ಮೆ ಹಾಡುವ ಉಮೇದು ತೋರಿದ್ದಾರೆ.

ಪರಿಣೀತಿ ಪ್ರಸ್ತುತ, ರೋಹಿತ್‌ ಶೆಟ್ಟಿಯ ‘ಗೋಲ್‌ಮಾಲ್‌ ಅಗೇನ್‌’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ತಾಣಕ್ಕೆ ಭೇಟಿ ನೀಡಿದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಈ ಚಿತ್ರದಲ್ಲಿ ಇದುವರೆಗೂ ಹಾಡಲು ಅವಕಾಶ ಸಿಕ್ಕಿಲ್ಲ.

ಆದರೆ ರೋಹಿತ್‌ ಸರ್‌ಗೆ ಬೆಣ್ಣೆ ಹಚ್ಚುತ್ತಿದ್ದೇನೆ, ಹಾಡಲು ನನಗೂ ಅವಕಾಶ ಕೊಡಿ’ ಎಂದು. ಅವರೊಂದು ವೇಳೆ ಅವಕಾಶ ಕೊಡದಿದ್ದರೂ ನನ್ನ ಎರಡನೇ ಹಾಡನ್ನು ಸದ್ಯದಲ್ಲೇ ಕೇಳಲಿದ್ದೀರಿ. ಅದು ಹಿಂದಿನ ಹಾಡಿಗಿಂತ ಉತ್ತಮವಾಗಿರುತ್ತದೆ ಎಂದು ಈಗಲೇ ಆಶ್ವಾಸನೆ ಕೊಡುತ್ತೇನೆ’ ಎಂದು ಈ ಸುಂದರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT