ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛೀ, ಕಚ್ಚಬೇಡ...

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡಕ್ಕೊಳಗಾದಾಗ, ಖಾಲಿ ಕುಳಿತಿದ್ದಾಗ ಉಗುರು ಕಚ್ಚುವ ಅಭ್ಯಾಸ ಕೆಲವರದು. ದೇಹದಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ನೆಲೆಸುವ ಸ್ಥಳ ಉಗುರುಸಂದಿ. ಕಚ್ಚುವಾಗ ಉಗುರಿನಲ್ಲಿನ ಕೊಳೆ ಹೊಟ್ಟೆಗೆ ಸೇರಿ ಬೇಧಿ, ವಾಂತಿ ಮತ್ತು ಅಜೀರ್ಣ ಮೊದಲಾದ ತೊಂದರೆ‌ಗಳು ಕಾಣಿಸಿಕೊಳ್ಳಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುರು ಕಚ್ಚಿ ಅಪಹಾಸ್ಯಕ್ಕೀಡಾಗಬಹುದು. ಬೆರಳು ಕಚ್ಚುವ ಅಭ್ಯಾಸವನ್ನು ಬಿಡಲು ಕೆಲ ಸಲಹೆಗಳು ಇಲ್ಲಿವೆ.

* 2 ದಿನಗಳಿಗೊಮ್ಮೆ ಹಲ್ಲಿಗೆ ಸಿಗದಷ್ಟು ಆಳಕ್ಕೆ ಉಗುರನ್ನು ಕತ್ತರಿಸಿ. ಪರ್ಸ್‌ ಅಥವಾ ಬ್ಯಾಗ್‌ನಲ್ಲಿ ಸದಾ ನೈಲ್‌ ಕಟ್ಟರ್‌ ಇಟ್ಟುಕೊಳ್ಳಿ.

* ಉಗುರು ಹಲ್ಲಿನ ಸಮೀಪಕ್ಕೆ ಬಂದಾಗಲೆಲ್ಲಾ ನಾನು ಉಗುರು ಕಚ್ಚುವುದನ್ನು ಬಿಡುತ್ತೇನೆ ಎಂಬ ದೃಢನಿಶ್ಚಯ ಮಾಡಿಕೊಳ್ಳಿ.

* ಮಕ್ಕಳನ್ನು ಹೊಗಳಿ, ಪುಸಲಾಯಿಸಿ ಉಗುರು ಕಚ್ಚುವ ಅಭ್ಯಾಸ ಬಿಡಿಸಬೇಕು. ದೊಡ್ಡವರಿಗೆ ಬೇರೆಯವರ ಉಗುರಿನ ಜೊತೆ ಹೋಲಿಕೆ ಮಾಡಿ ಮಾತನಾಡಿ

* ಮಕ್ಕಳ ಮನಸು ಆಟಗಳತ್ತ ಹರಿಯುವಂತೆ ಮಾಡಿ. ದೊಡ್ಡವರಾಗಿದ್ದರೆ ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ. ಉತ್ತಮ ಹವ್ಯಾಸದತ್ತ ಮನಸು ಹರಿಸಿ.

* ನೇಲ್‌ಪಾಲಿಷ್‌ ಹಚ್ಚಿಕೊಳ್ಳುವುದೂ ಉಗುರು ಕಡಿಯುವುದನ್ನು ಬಿಡಲು ಉತ್ತಮ ಮಾರ್ಗ. ನೇಲ್ ಪಾಲಿಶ್ ಇರುವಾಗ ಉಗುರು ಕಚ್ಚಿದರೆ ಅಸಹ್ಯ ಎನಿಸುತ್ತೆ. ನೇಲ್ ಪಾಲಿಶ್‌ ಮೇಲೆ ಚಂದದ ವಿನ್ಯಾಸ ಇದ್ದರೆ ಅದು ಹಾಳಾಗುತ್ತದೆ ಎಂಬ ಕಾರಣಕ್ಕೆ ಉಗುರು ಕಚ್ಚಲು ಮನಸು ಬರುವುದಿಲ್ಲ.

* ಪ್ರತಿದಿನ ಮೆನಿಕ್ಯೂರ್‌ ಮಾಡಿಕೊಳ್ಳಿ. ಉಗುರಿಗೆ ಬ್ಯಾಂಡ್ ಏಡ್‌,  ಟೇಪ್‌ ಸುತ್ತಿ, ಇಲ್ಲವೇ ಗ್ಲೌಸ್‌ ತೊಟ್ಟುಕೊಳ್ಳಿ.

* ಯಾವ ಸಂದರ್ಭದಲ್ಲಿ ಉಗುರು ಕಚ್ಚುತ್ತೇವೆ ಎಂಬುದನ್ನು ನೀವೇ ಗುರುತಿಸಿಕೊಂಡು, ಅಂತಹ ಸಂದರ್ಭಗಳನ್ನು ದೂರವಿಡಬೇಕು.

* ಚುಯಿಂಗ್‌ಗಮ್‌ ಅಥವಾ ಚಾಕೊಲೆಟ್‌ ಬಾಯಲ್ಲಿ ಇದ್ದರೆ ಉಗುರು ಕಚ್ಚುವುದಿಲ್ಲ. ಮಕ್ಕಳಿಗೆ ಲಾಲಿಪಪ್‌ ಕೊಟ್ಟರೆ ಅವರು ಉಗುರು ಕಚ್ಚುವುದಿಲ್ಲ.

* ಕೈಯಲ್ಲಿ ಕೊಳೆ ಆಗುವಂತಹ ಕೆಲಸಗಳನ್ನು ಮಾಡಬೇಕು. ಕೈಲಿ ಕೊಳೆ ಇದ್ದಾಗ ಉಗುರು ಕಚ್ಚಲು ಅಸಹ್ಯವಾಗುತ್ತದೆ.

* ಸಮೀಪದಲ್ಲಿ ಕುಳಿತವರಿಗೆ ನಾವು ಉಗುರು ಕಚ್ಚುವಾಗ ತಿಳಿಸಿ ಎಂದು ಹೇಳಬೇಕು.

* ಈಗ ಮಾರ್ಕೆಟ್‌ಗಳಲ್ಲಿ ಕೃತಕ ಉಗುರುಗಳು ಲಭ್ಯ. ಇಂಥವನ್ನು ಧರಿಸಿಕೊಂಡು ಉಗುರು ಕಚ್ಚುವ ಅಭ್ಯಾಸ ದೂರ ಮಾಡಬಹುದು.

* ಕೈಯನ್ನು ಸದಾ ಬ್ಯುಸಿಯಾಗಿರುವಂತೆ ಕೈಯಲ್ಲೇ ಫಿಜೆಟ್‌ ಸ್ಪಿನ್ನರ್ಸ್‌, ಕ್ಯುಬಿಕ್‌ನಂತಹ ಆಟ ಆಡುವುದು.

* ಕೆಲವರಿಗೆ ಉಗುರು ಕಚ್ಚುವುದು ಮನೋರೋಗ ಅಥವಾ ಭಾವನಾತ್ಮಕ ಸಮಸ್ಯೆಯಾಗಿರಬಹುದು. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT