ಗುರುವಾರ , ಫೆಬ್ರವರಿ 25, 2021
29 °C

ಗ್ರಾಮೀಣ ಪ್ರತಿಭೆ ಬಸವರಾಜಗೆ ಕಲಾಭೂಷಣ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಪ್ರತಿಭೆ ಬಸವರಾಜಗೆ ಕಲಾಭೂಷಣ ಗರಿ

ದೇವಸ್ಥಾನಗಳ ಗೋಡೆಗಳಿಗೆ ಬಣ್ಣ ಹಚ್ಚುತ್ತಿದ್ದ ಅಜ್ಜನನ್ನು ನೋಡುತ್ತಲೇ ನಾನು ಕೂಡ ಅಜ್ಜನಂತೆ ಬಣ್ಣ ಹಚ್ಚುವ ಕೆಲಸ ಮಾಡಬೇಕೆಂದು ಛಲ ಹೊತ್ತ ಯುವಕ ಇಂದು ರಾಜ್ಯ ಪ್ರಶಸ್ತಿ ಪಡೆದು ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ.

ಆ ಯುವ ಪ್ರತಿಭೆ ಘಟಪ್ರಭಾ ಸಮೀಪದ ಕೊಣ್ಣೂರ–ಮರಡಿಮಠ ಗ್ರಾಮದ ಬಸವರಾಜ ಗದಗಿನ. ಚಿತ್ರಕಲೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿರುವ ಅವರಿಗೆ ಬೆಂಗಳೂರಿನ ಸಾಂಸ್ಕೃತಿಕ ಅಕಾಡೆಮಿಯು ಕಲಾಭೂಷಣ ರಾಜ್ಯ ಪ್ರಶಸ್ತಿಯನ್ನು ನ.26ರಂದು ನೀಡಿ ಗೌರವಿಸಿದೆ.

ಅವರು ಗೋಕಾಕದ ಸಿದ್ದಾರ್ಥ ಲಲಿತಕಲಾ ಕಾಲೇಜಿನಲ್ಲಿ ಚಿತ್ರಕಲೆ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಅವರು ರಚಿಸಿದ ಚಿತ್ರಗಳನ್ನು ಪ್ರದರ್ಶಿಸಿ ಅನೇಕ ಮುಖಂಡರಿಂದ ಮೆಚ್ಚಗೆ ಪಾತ್ರರಾಗಿದ್ದಾರೆ.

‘ನನಗಿರುವ ಚಿತ್ರಕಲೆಯ ಗೀಳನ್ನು ಗುರುತಿಸಿದ ಶಿಕ್ಷಕ ಅಗಳನ್ನವರ ಅವರು ಸಲಹೆಯಂತೆ ಪಿಯುಸಿ ನಂತರ ಐದು ವರ್ಷದ ಚಿತ್ರಕಲಾ ಶಿಕ್ಷಣ ಪಡೆಯುತ್ತಿರುವೆ. ನಿಸರ್ಗ ಚಿತ್ರಗಳನ್ನು ಬಿಡಿಸುತ್ತಿದ್ದ ಚಿತ್ರಗಳು ಈ ಹಿಂದೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಇದಕ್ಕೆ ಅನೇಕ ಮಿತ್ರರು, ಸಂಬಂಧಿಕರು, ಗುರುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ನಂತರ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ವಿಶೇಷ ಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಹಾಗೂ ನ.26ರಂದು ಬೆಂಗಳೂರಿನ ಸಾಂಸ್ಕೃತಿಕ ಅಕಾಡೆಮಿ ನೀಡುವ ಕಲಾಭೂಷಣ ಪ್ರಶಸ್ತಿ ದೊರೆಯಿತು. ನನ್ನಂತಹ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿದ ಪ್ರಜಾವಾಣಿ ಪತ್ರಿಕೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ಹೇಳುತ್ತಾರೆ.

ಬಸವರಾಜ ಅವರು ಗೋಕಾಕ ಫಾಲ್ಸ್‌ ಹಾಗೂ ಮಹಾರಾಷ್ಟ್ರದ ವಿಶಾಲಘಡದ ವಿಹಂಗಮ ನೋಟದ ಲ್ಯಾಂಡ್‌ ಸ್ಕೇಪ್‌ ಚಿತ್ರಗಳು ಸೇರಿದಂತೆ ಹಲವು ಚಿತ್ರಕಲೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಬೆಂಗಳೂರಿನ ಆರ್ಟ ಮಾಸ್ಟರ್ಸ್‌್್, ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ, ಸತೀಶ ಶುಗರ್‍ಸ್ ಅವಾರ್ಡ್ಸ್, ಬೆಂಗಳೂರಿನ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ವಿವಿಧ ಪ್ರಕಾರದ ಚಿತ್ರಗಳನ್ನು ರಚಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಂಪಿ, ಚಿತ್ರದುರ್ಗ, ಬೆಂಗಳೂರು, ಮೈಸೂರು ಮುಂತಾದಡೆಯಲ್ಲಿ ಚಿತ್ರಕಲೆ ಪ್ರದರ್ಶನ ನೀಡಿ ಅನೇಕ ಕಲಾ ಪ್ರೀಯರ ಪ್ರಶಂಸೆಗೆ ಬಸವರಾಜ ಅವರು ಪಾತ್ರರಾಗಿದ್ದಾರೆ. ಬಿಡುವಿನ ಸಮಯದಲ್ಲಿ ಮದುವೆ ಸಮಾರಂಭಗಳ ವೇದಿಕೆ ಸಿಂಗರಿಸುವ ಕೆಲಸವನ್ನು ಕೂಡ ಮಾಡುತ್ತಿರುವ ಅವರು ನೇಕ ಯುವಕರಿಗೆ ಮಾದರಿಯಾಗಿದ್ದಾರೆ.

–ಚಂದ್ರಶೇಖರ ಪಿ.ದೊಡ್ಡಮನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.