ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೇಶ ಮೇಸ್ತ ಸಾವು ಪ್ರಕರಣ: ಮುಂಡಗೋಡ ಬಂದ್‌

Last Updated 12 ಡಿಸೆಂಬರ್ 2017, 10:17 IST
ಅಕ್ಷರ ಗಾತ್ರ

ಮುಂಡಗೋಡ: ಪರೇಶ ಮೇಸ್ತ ಹತ್ಯೆ ಖಂಡಿಸಿ ಮಂಗಳವಾರ ಮುಂಡಗೋಡದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು.

ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಬಸ್ ಸಂಚಾರ ಸ್ಥಗಿತಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ  ವ್ಯತ್ಯಯವಾಗಿದೆ.

ಬಿಜೆಪಿ ಕಾರ್ಯಕರ್ತರು ಇಲ್ಲಿಯ ಶಿವಾಜಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಎದುರಿಗೆ, ಬಸವನ ಬೀದಿ ಕ್ರಾಸ್‌ನಲ್ಲಿ ಸಹ ಟೈರ್‌ಗೆ ಬೆಂಕಿ ಹಚ್ಚಲಾಗಿದೆ.

ಶಿವಾಜಿ ವೃತ್ತದಲ್ಲಿ ಮೃತ ಪರೇಶ ಮೇಸ್ತ ಭಾವಚಿತ್ರಕ್ಕೆ ಪೂಜೆ  ಸಲ್ಲಿಸಿದ  ಕಾರ್ಯಕರ್ತರು  ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಟ್ಟಣದಲ್ಲಿ ಶಾಂತಿಯುತ ಬಂದ್ ನಡೆದಿದ್ದು, ಹಾವೇರಿ ಎಸ್ಪಿ ಕೆ.ಪರುಶುರಾಮ, ಹಿರಿಯೂರ ಡಿವೈಎಸ್ಪಿ ವೆಂಕಟಪ್ಪ ನಾಯಕ ಸೇರಿದಂತೆ ಮೂರು ಸಿಪಿಐ, ನಾಲ್ಕು ಪಿಎಸ್ಐ, ನೂರಾರು ಸಿಬ್ಬಂದಿ ಬಂದೋಬಸ್ತ್‌ ಕಾರ್ಯದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT