ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ಕೊಠಡಿ: ಬೀಳುವ ಆತಂಕ

Last Updated 15 ಡಿಸೆಂಬರ್ 2017, 6:32 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಇತ್ತೀಚೆಗೆ ಉನ್ನತೀಕರಿಸಿದ ಬ್ರಿಟಿಷರ ಕಾಲದ ಸರ್ಕಾರಿ ಶಾಲೆ ಕೊಠಡಿಗಳ ಕೊರತೆಯಿಂದ ಒಂದೇ ಕೊಠಡಿಯಲ್ಲಿ ಹಲವು ತರಗತಿಗಳಿಗೆ ಪಾಠ– ಪ್ರವಚನಗಳು ನಡೆಸಿಕೊಂಡು ಹೋಗುವ ಸ್ಥಿತಿ ಒಂದೆಡೆಯಾದರೆ ಶಿಥಿಲಗೊಂಡಿರುವ ಕೊಠಡಿಗಳು ಯಾವಾಗ ಮಕ್ಕಳ ಬೀಳುತ್ತವೋ ಎಂಬ ಆತಂಕದಲ್ಲಿ ದಿನಗಳನ್ನು ಕಳೆಯುವಂತಾಗಿದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದರು.

ಪುರವರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ 1934ರಲ್ಲಿ ಆರಂಭವಾಗಿ ಈಚೆಗೆ ಉನ್ನತೀಕರಿಸಿದ ಶಾಲೆಯೆಂದು ಹಿರಿಮೆ ಪಡೆದರು ಮೂಲ ಸೌಲಭ್ಯಗಳಿಂದ ವಂಚಿತವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ.

ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಹೆಚ್ಚುತ್ತಿರುವ ಈ ಕಾಲದಲ್ಲಿ 1 ರಿಂದ 8ನೇ ತರಗತಿ ವರೆಗೆ 190 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ 10 ಕೊಠಡಿಗಳಿದ್ದರು 4 ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ.

ಒಂದು ಮುಖ್ಯ ಶಿಕ್ಷಕರ ಮತ್ತೊಂದು ಕಂಪ್ಯೂಟರ್ ಕೊಠಡಿ. ಇನ್ನುಳಿದ ನಾಲ್ಕರಲ್ಲೇ ಎಲ್ಲ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಕುಳ್ಳರಿಸಿ ಪಾಠ ಪ್ರವಚನ ಮಾಡಲಾಗುತ್ತದೆ. ಹಾಳಾಗಿರುವ ಕಟ್ಟಡಗಳನ್ನ ಕೆಡವಿಕೊಟ್ಟು ಹೊಸ ಕಟ್ಟಡ ನಿರ್ಮಿಸಿಕೊಡಲು ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿದಿಗಳಿಗೆ ಹಲವು ಬಾರಿ ಮನವಿ ನೀಡಿದರು ಪ್ರಯೋಜನವಾಗಿಲ್ಲ ಎಂದು ಮುಖ್ಯ ಶಿಕ್ಷಕ ವೆಂಕಟರವಣಪ್ಪ ಬೇಸರ ವ್ಯಕ್ತಪಡಿಸಿದರು.

ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ಇಂದು ದೇಶ- ವಿದೇಶಗಳಲ್ಲಿ ಉನ್ನತ ಸ್ಥಾನ ಮತ್ತು ಉದ್ಯೋಗಗಳಲ್ಲಿರುವುದು ಈ ಗ್ರಾಮದ ಮತ್ತು ಶಾಲೆಯ ಹಿರಿಮೆ. ಇಂತಹ ಶಾಲೆ ಇಂದು ಉನ್ನತೀಕರಿಸಿದ ಶಾಲೆಯೆಂದು ಹೆಸರು ಪಡೆದರು ಮತ್ತು ಹಳೇ ವಿದ್ಯಾರ್ಥಿ ಸಂಘ ಪ್ರಾರಂಭವಾಗಿದ್ದರು ಸಹಾಯ ಮತ್ತು ಆಸಕ್ತಿಯಿಲ್ಲದೆ ಮೂಲ ಸೌಕರ್ಯಗಳಿಂದ ಸೊರಗಿತ್ತಿದೆ ಎಂದು ಸ್ಥಳೀಯರ ಆರೋಪವಾಗಿದೆ.

ಶುದ್ಧ ನೀರನ ಘಟಕಕ್ಕೆ ಮನವಿ: ಇಲ್ಲಿನ ಶಾಲೆಯಲ್ಲಿ ಮುಖ್ಯಶಿಕ್ಷಕರ ಮತ್ತು ಎಲ್ಲ ಶಿಕ್ಷಕರ ಹೊಂದಾಣಿಕೆ ಹಾಗೂ ಪರಿಶ್ರಮದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿರುವುದು ಸಂತೋಷದ ಸಂಗತಿ. ಆದರೆ ಅಷ್ಟೇ ಸಮಸ್ಯೆಗಳು ಉದ್ಭವವಾಗುತ್ತಿವೆ. ರಾತ್ರಿ ಸಮಯದಲ್ಲಿ ಶಾಲೆಯ ಆವರಣದಲ್ಲಿ ಕುಡುಕರ ಹಾವಳಿಯಿಂದ ಬಿಸಾಡಿರುವ ಖಾಲಿ ಬಾಟಲುಗಳನ್ನ ಬೆಳಿಗ್ಗೆ ಮಕ್ಕಳು ಸ್ವಚ್ಛಗೊಳಿಸುವ ಸ್ಥಿತಿ ಒಂದಡೆಯಾದರೆ, ಮತ್ತೊಂದಡೆ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆಯಾಗುತ್ತಿದೆ. ಹಳೆಯ ವಿದ್ಯಾರ್ಥಿಗಳು ಅಥವಾ ದಾನಿಗಳು ಶುದ್ಧ ನೀರಿನ ಘಟಕ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಶ್ರಿ ತಿಳಿಸಿದರು.

ಪುರವರ ಹೋಬಳಿ ಮಧುಗಿರಿ ತಾಲ್ಲೂಕುನಲ್ಲಿದ್ದರು, ಆಡಳಿತಾತ್ಮಕವಾಗಿ ಕೊರಟಗೆರೆ ಕ್ಷೇತ್ರದಲ್ಲಿರುವುದರಿಂದ ಹಲವು ವರ್ಷಗಳಿಂದ ಸಂಬಂಧಿಸಿದವರಿಗೆ ಮನವಿ ಮಾಡಿದರು ಪ್ರಯೋಜನವಾಗದೆ ಮೂಲೆಗುಂಪಾಗುತ್ತಿರುವುದು ವಿಪರ್ಯಾಸವಾಗಿದೆ. ಇನ್ನಾದರು ಸಂಬಂಧಿಸಿದವರು ಗಮನಹರಿಸಬೇಕಾಗಿದೆ.

ಪುಟ್ಟರಾಮಯ್ಯ ಎಸ್‌ಡಿಎಂಸಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT